ಜಲಪಾತಗಳಲ್ಲಿ ಅಥವಾ ಜಲಾಶಯಗಳಲ್ಲಿ ನೀರಿಗೆ ಧುಮುಕುವಾಗ ಸಾವಿರ ಬಾರಿ ಯೋಚಿಸಿದರೂ ಸಾಲದು. ನೀವು ಬಂಡೆಯ ಮೇಲೆ ಹತ್ತಿ ಧುಮುಕುತ್ತೀರಾದರೆ ಅಪಾಯ ತಪ್ಪಿದ್ದಲ್ಲ. ಯಾಕೆಂದರೆ ಬಂಡೆಗಳಲ್ಲಿ ಹಾವಸೆ ಬೆಳೆದು ಅತಿಯಾಗಿ ಜಾರುತ್ತಿರುತ್ತವೆ. ಆದ್ದರಿಂದ ಬಂಡೆಯ ಮೇಲೆ ಹತ್ತಿದಿರಾದರೆ ಅಪಾಯ ತಪ್ಪಿದ್ದಲ್ಲ.
ಇಲ್ಲೊಂದು ಅಂತದೇ ಘಟನೆ ನಡೆದಿದೆ. ಬಂಡೆಗೆ ಹತ್ತಿದ ಯುವಕ ಮತ್ತು ಯುವತಿ ಪರಸ್ಪರ ಚುಂಬಿಸಿ ನೀರಿಗೆ ಧುಮುಕಲು ತಯಾರಾಗುತ್ತಾರೆ. ಇನ್ನೇನು ನೀರಿಗೆ ಧುಮುಕಬೇಕು ಅನ್ನುವಷ್ಟರಲ್ಲಿ ಹುಡುಗಿ ಕಾಲು ಜಾರಿ ಬೀಳುತ್ತಾಳೆ. ಬೀಳುವಾಗ ಹುಡುಗನನ್ನು ಹಿಡಿದುಕೊಳ್ಳುತ್ತಾಳೆ. ಇಬ್ಬರೂ ಬೀಳುತ್ತಾರೆ.
ಹುಡುಗನ ತಲೆ ಬಂಡೆಗೆ ಹೊಡೆಯುತ್ತದೆ. ಮುಂದೇನಾಯಿತೋ ಗೊತ್ತಿಲ್ಲ. ಯಾಕೆಂದರೆ ಈ ವೀಡಿಯೊ ಅಪೂರ್ಣವಾಗಿದೆ. ಇದನ್ನು ನೋಡಿದ ನೆಟ್ಟಿಗರು ಚಿತ್ರವಿಚಿತ್ರ ಕಾಮೆಂಟ್ ಮಾಡಿದ್ದಾರೆ.
“ಕೇವಲ 5 ಸೆಕೆಂಡುಗಳಲ್ಲಿ ಮದುವೆಯ ಮೊದಲು ಮತ್ತು ನಂತರ ಏನಾಗಬಹುದು ಎಂಬುದನ್ನು ವೀಡಿಯೊ ತಿಳಿಸುತ್ತದೆ” ಎಂದು ಒಬ್ಬರು ಕಾಮೆಂಟ್ ಮಾಡಿದರೆ ಇನ್ನೊಬ್ಬರು “ಹುಡುಗನ ತಲೆಯ ಮೇಲೆ ತೀವ್ರವಾಗಿ ಗಾಯಗೊಂಡಿದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!


