Sunday, January 19, 2025
Homeಸುದ್ದಿಪ್ರಣಯ ಪಕ್ಷಿಗಳು ಮೋಜು ಮಾಡಲು ಜಲಪಾತಕ್ಕೆ ಧುಮುಕುವ ಮೊದಲು ಯೋಚಿಸಿ.. ಪ್ರಾಣಕ್ಕೆ ಸಂಚಕಾರ ಬಂದೀತು ಎಚ್ಚರ 

ಪ್ರಣಯ ಪಕ್ಷಿಗಳು ಮೋಜು ಮಾಡಲು ಜಲಪಾತಕ್ಕೆ ಧುಮುಕುವ ಮೊದಲು ಯೋಚಿಸಿ.. ಪ್ರಾಣಕ್ಕೆ ಸಂಚಕಾರ ಬಂದೀತು ಎಚ್ಚರ 

ಜಲಪಾತಗಳಲ್ಲಿ ಅಥವಾ ಜಲಾಶಯಗಳಲ್ಲಿ ನೀರಿಗೆ ಧುಮುಕುವಾಗ ಸಾವಿರ ಬಾರಿ ಯೋಚಿಸಿದರೂ ಸಾಲದು. ನೀವು ಬಂಡೆಯ ಮೇಲೆ ಹತ್ತಿ ಧುಮುಕುತ್ತೀರಾದರೆ ಅಪಾಯ ತಪ್ಪಿದ್ದಲ್ಲ. ಯಾಕೆಂದರೆ ಬಂಡೆಗಳಲ್ಲಿ ಹಾವಸೆ ಬೆಳೆದು ಅತಿಯಾಗಿ ಜಾರುತ್ತಿರುತ್ತವೆ. ಆದ್ದರಿಂದ ಬಂಡೆಯ ಮೇಲೆ ಹತ್ತಿದಿರಾದರೆ ಅಪಾಯ ತಪ್ಪಿದ್ದಲ್ಲ. 

ಇಲ್ಲೊಂದು ಅಂತದೇ ಘಟನೆ ನಡೆದಿದೆ. ಬಂಡೆಗೆ ಹತ್ತಿದ ಯುವಕ ಮತ್ತು ಯುವತಿ ಪರಸ್ಪರ ಚುಂಬಿಸಿ ನೀರಿಗೆ ಧುಮುಕಲು ತಯಾರಾಗುತ್ತಾರೆ. ಇನ್ನೇನು ನೀರಿಗೆ ಧುಮುಕಬೇಕು ಅನ್ನುವಷ್ಟರಲ್ಲಿ ಹುಡುಗಿ ಕಾಲು ಜಾರಿ ಬೀಳುತ್ತಾಳೆ. ಬೀಳುವಾಗ ಹುಡುಗನನ್ನು ಹಿಡಿದುಕೊಳ್ಳುತ್ತಾಳೆ. ಇಬ್ಬರೂ ಬೀಳುತ್ತಾರೆ.

ಹುಡುಗನ ತಲೆ ಬಂಡೆಗೆ ಹೊಡೆಯುತ್ತದೆ. ಮುಂದೇನಾಯಿತೋ ಗೊತ್ತಿಲ್ಲ. ಯಾಕೆಂದರೆ ಈ ವೀಡಿಯೊ ಅಪೂರ್ಣವಾಗಿದೆ. ಇದನ್ನು ನೋಡಿದ ನೆಟ್ಟಿಗರು ಚಿತ್ರವಿಚಿತ್ರ ಕಾಮೆಂಟ್ ಮಾಡಿದ್ದಾರೆ. 

“ಕೇವಲ 5 ಸೆಕೆಂಡುಗಳಲ್ಲಿ ಮದುವೆಯ ಮೊದಲು ಮತ್ತು ನಂತರ ಏನಾಗಬಹುದು ಎಂಬುದನ್ನು ವೀಡಿಯೊ ತಿಳಿಸುತ್ತದೆ” ಎಂದು ಒಬ್ಬರು ಕಾಮೆಂಟ್ ಮಾಡಿದರೆ ಇನ್ನೊಬ್ಬರು “ಹುಡುಗನ ತಲೆಯ ಮೇಲೆ ತೀವ್ರವಾಗಿ ಗಾಯಗೊಂಡಿದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments