Friday, November 22, 2024
Homeಸುದ್ದಿಶ್ರೀ ಗಣೇಶೋತ್ಸವ ಸೇವಾ ಸಮಿತಿ (ರಿ)ಗೇರುಕಟ್ಟೆ, 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಂಭ್ರಮ -...

ಶ್ರೀ ಗಣೇಶೋತ್ಸವ ಸೇವಾ ಸಮಿತಿ (ರಿ)ಗೇರುಕಟ್ಟೆ, 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಂಭ್ರಮ – ಯಕ್ಷಗಾನ ತಾಳಮದ್ದಳೆ, ಬಯಲಾಟ, ಯಕ್ಷ ಗಾನವೈಭವ

ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕುಟುಂಬದ ಆಚರಣೆಯಾಗಿತ್ತು ಈ ಹಬ್ಬವನ್ನು ಲೋಕಮಾನ್ಯ ಬಾಲಗಂಗಾಧರ ತಿಲಕರು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಉದ್ದೀಪನ ಗೊಳಿಸುವುದಕ್ಕಾಗಿ ಬಳಸಿಕೊಂಡರು. ಕ್ರಿಶ 1892 ರಲ್ಲಿ ಮಹಾರಾಷ್ಟ್ರದಲ್ಲಿ ಬಾವು ಸಾಹೇಬ್ ಲಕ್ಷ್ಮಣ್ ಜವೆಲ್ ಪ್ರಥಮ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರಾದರೂ 1893ರಲ್ಲಿ ತಿಲಕರು ಸಾರ್ವಜನಿಕರ ಭಾಗವಹಿಸುವಿಕೆಯನ್ನು ಪ್ರೇರೇಪಿಸಿದರು.

ತಮ್ಮ ಸಂಪಾದಕತ್ವದ ಕೇಸರಿ ಪತ್ರಿಕೆಯಲ್ಲಿ ವ್ಯಾಪಕ ಪ್ರಚಾರ ನೀಡಿ 1894 ರಲ್ಲಿ ಪುಣೆಯ ಕೇಸರಿವಾಡದಲ್ಲಿ ಪ್ರಥಮ ಸಾರ್ವಜನಿಕ ಗಣೇಶೋತ್ಸವಕ್ಕೆ ನಾಂದಿ ಹಾಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗಣೇಶೋತ್ಸವವು ಸಮುದಾಯದ ಪಾಲ್ಗೊಳ್ಳುವಿಕೆಗೆ ವೇದಿಕೆಯಾಯಿತು.

ಬ್ರಿಟಿಷ್ ಆಡಳಿತವು ಸಾಮಾಜಿಕ ಮತ್ತು ರಾಜಕೀಯ ಸಮಾವೇಶಗಳನ್ನು ಬಹಿಷ್ಕರಿಸಿದ ಸಂದರ್ಭಗಳಲ್ಲಿಯೂ ಗಣೇಶೋತ್ಸವವು ಒಂದು ರಾಷ್ಟ್ರೀಯ ಹಬ್ಬದಂತೆ ಬೆಳೆದು ಹಲವು ಎಡರು ತೊಡರುಗಳ ನಡುವೆ ವ್ಯಾಪಕವಾಗಿ ಆಚರಿಸಲ್ಪಡುತ್ತಾ ಬಂದಿರುವುದನ್ನು ಕಾಣಬಹುದಾಗಿದೆ.

128 ವರ್ಷಗಳ ಇತಿಹಾಸವಿರುವ ಸಾರ್ವಜನಿಕ ಗಣೇಶೋತ್ಸವ ಈಗ ಪ್ರತಿ ಹಳ್ಳಿ ಪಟ್ಟಣಗಳಲ್ಲಿಯೂ ಒಂದು ದಿನದಿಂದ ತೊಡಗಿ ತಿಂಗಳ ಪರ್ಯಂತ ನಡೆಯುತ್ತಿದೆ.

ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆಯ ಸಾರ್ವಜನಿಕ ಗಣೇಶೋತ್ಸವ ಈಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮೆರುಗಿನಲ್ಲಿ ಈ ಬಾರಿ ಗಣೇಶೋತ್ಸವ ಹಬ್ಬಕ್ಕೆ ವಿಶೇಷ ಮೆರುಗು ಬಂದಿದೆ. ಕಳಿಯ, ನ್ಯಾಯ ತರ್ಪು ಮತ್ತು ಓಡಿಲ್ನಾಳ ಗ್ರಾಮಗಳ ಗ್ರಾಮಸ್ಥರ ಭಾಗವಹಿಸುವಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಈ ಪರಿಸರದ ಸಾಮಾಜಿಕ ಮತ್ತು ಧಾರ್ಮಿಕ ಮುಂದಾಳುಗಳಾದ ಆರ್.ಎನ್ ಸಂಪಿಗೆತ್ತಾಯ, ಭಂಡಾರಿ ಕೋಡಿ ನಾರಾಯಣ ಶೆಟ್ಟಿ, ಸಂಬೊಳ್ಯ ನಾರಾಯಣ ಭಟ್, ಜಿ ಕೇಶವ ಪೈ, ಕುಂಟಿನಿ ನಾರಾಯಣ ಭಟ್, ಬಿಳಿಬೈಲು ವೆಂಕಪ್ಪ ಪೂಜಾರಿ, ಕೆ. ಮೋನಪ್ಪ ಆಚಾರ್ಯ  ಗೇರುಕಟ್ಟೆ ಮೊದಲಾದವರು ಸೇರಿ ಕೊರಂಜ ಸರಕಾರಿ ಪ್ರಾಥಮಿಕ ಶಾಲಾ ವಠಾರದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರೆಂದು ತಿಳಿದು ಬರುತ್ತದೆ. ವೈದಿಕ ನೇತೃತ್ವವನ್ನು ಅನೂಚಾನವಾಗಿ ಕುಂಟಿಣಿ ರಾಮಕೃಷ್ಣ ಭಾಂಗಿಣ್ಣಾಯ ಮತ್ತು ಈಗ ಅವರ ಮಗ ರಾಘವೇಂದ್ರ ಭಾಂಗಿಣ್ಣಾಯ ನಡೆಸಿಕೊಂಡು ಬರುತ್ತಿದ್ದಾರೆ.

ಸುಬ್ರಾಯ ಭಟ್ ಕುಂಟಿನಿ, ನಾರಾಯಣ ಆಚಾರ್ಯ ಗೇರುಕಟ್ಟೆ , ಬೊಮ್ಮಯ್ಯ ಗೌಡ   ಮೊದಲಾದವರು ಗಣೇಶೋತ್ಸವದ ಸಂದರ್ಭದಲ್ಲಿ ನೀಡುತ್ತಿದ್ದ ಸಹಕಾರ ಸ್ಮರಣೀಯವಾದದ್ದು. 

ಹರಿದಾಸ ಪಡಂತ್ತಾಯ, ಕೃಷ್ಣರಾವ್ ಗೇರುಕಟ್ಟೆ, ವಸಂತ ಮಜಲು, ಜನಾರ್ಧನ ಪೂಜಾರಿ. ಎಂ, ರತ್ನಾಕರ ಪೂಜಾರಿ, ಜಿ ವೆಂಕಟ್ರಮಣ ಪೈ, ಸುರೇಂದ್ರ ಕುಮಾರ್ ಜೈನ್ ಕಳಿಯ ಬೀಡು ಡಾ.ಅನಂತ್ ಭಟ್, ಹರಿಪ್ರಸಾದ್ ಕೆ.ಎಸ್, ತುಕಾರಾಮ ಪೂಜಾರಿ, ಸತೀಶ್ ಕುಮಾರ್ ಆರ್.ಯನ್, ಸದಾಶಿವ ಆಚಾರ್ಯ, ರತ್ನಾಕರ ಪೂಜಾರಿ ಬಳ್ಳಿ ದಡ್ಡ, ರತ್ನಾಕರ.ಎಂ, ಪ್ರಭಾಕರ ಆಚಾರ್ಯ ,ಶಿವರಾಯ ಪ್ರಭು, ನವೀನ್ ಚಂದ್ರ ದಾಸಕೋಡಿ, ಸುಧಾಕರ ಮಜಲು, ಕೇಶವ ಬಂಗೇರ, ಸುರೇಶ್ ಕುಮಾರ್ ಆರ್.ಯನ್, ರಾಘವ ಗೇರುಕಟ್ಟೆ, ಭುವನೇಶ ,ಶರತ್ ಕುಮಾರ್ ಶೆಟ್ಟಿ, ಯೋಗೀಶ್ ಸುವರ್ಣ, ಪುರಂದರ ಗೇರುಕಟ್ಟೆ, ಉಮೇಶ್ ಶೆಟ್ಟಿ, ಕರುಣಾಕರ ಶೆಟ್ಟಿ, ಹರೀಶ್ ಕುಮಾರ್. ಬಿ, ಶೇಖರ ನಾಯ್ಕ್ , ಲೋಕೇಶ್ ಕುಮಾರ್ .ಯನ್, ಜಯಪ್ರಕಾಶ್ ಗೇರುಕಟ್ಟೆ, ವಿಭುದೇಂದ್ರ ಆಳ್ವ, ಗಿರೀಶ್ ನಾಳ ಮೊದಲಾದವರು ಗಣೇಶೋತ್ಸವ ಸೇವಾ ಸಮಿತಿಯ ಪದಾಧಿಕಾರಿಗಳಾಗಿ ಕಾರ್ಯಕರ್ತರಾಗಿ ಮತ್ತು ಹಲವರು ಸ್ವಯಂಸೇವಕರಾಗಿ ದುಡಿಯುತ್ತಾ ಬಂದಿದ್ದಾರೆ.

1998ರಲ್ಲಿ ಕೊರಂಜ ಶಾಲೆಯಲ್ಲಿ ಗಣೇಶೋತ್ಸವದ ರಜತ ಮಹೋತ್ಸವವು ಸಮಿತಿಯ ಅಧ್ಯಕ್ಷರಾಗಿದ್ದ ದಿವಾಕರ ಆಚಾರ್ಯ ಗೇರುಕಟ್ಟೆ ಇವರ ನೇತೃತ್ವದಲ್ಲಿ ಜರಗಿತ್ತು. ಮೊದಲ ಬಾರಿಗೆ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿ ನಡೆಸಲಾಯಿತು‌. 

2006 -07ರಲ್ಲಿ ಸಮಿತಿಯು ನೊಂದಾವಣೆಗೊಂಡಿದ್ದು ಕಳೆದ 12 ವರ್ಷಗಳಿಂದ ಪುರುಷೋತ್ತಮ.ಜಿ ಶ್ರೀ ಗಣೇಶೋತ್ಸವ ಸೇವಾ ಸಮಿತಿ ( ರಿ) ಇದರ ಅಧ್ಯಕ್ಷರಾಗಿದ್ದಾರೆ.

ಆರಂಭದಲ್ಲಿ ಶಾಲಾ ಒಳಾಂಗಣದಲ್ಲಿ ನಂತರ ಶಾಲಾ ಬಯಲು ರಂಗ ಮಂದಿರದಲ್ಲಿ ಗಣೇಶೋತ್ಸವ ನಡೆಯುತ್ತಿದ್ದು ಕಳೆದ ಎಂಟು ವರ್ಷಗಳಿಂದ ಕಳಿಯ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು, ಯಕ್ಷಗಾನ ತಾಳಮದ್ದಳೆ, ಧಾರ್ಮಿಕ ಉಪನ್ಯಾಸಗಳೊಂದಿಗೆ ನಡೆಯುತ್ತಿದೆ.

ಮಹಾಪೂಜೆಯ ಬಳಿಕ ಶೋಭಾ ಯಾತ್ರೆಯು ಗೇರುಕಟ್ಟೆ ಪೇಟೆ ಮತ್ತು ದಕ್ಷಿಣಕ್ಕೆ ಪರಪ್ಪು, ನಾಳದ ವರೆಗೆ ನಡೆದು ಶಾಲಾ ಆಭರಣದಲ್ಲಿ ಮೂರ್ತಿಯ ವಿಸರ್ಜನೆಯಾಗುತ್ತಿತ್ತು. ಗ್ರಾಮಸ್ಥರು, ಭಕ್ತಾಭಿಮಾನಿಗಳು ಸೇವಾ ರೂಪದಲ್ಲಿ ಮತ್ತು ಪ್ರಾಯೋಜಕರಾಗಿ ಕಳೆದ 49 ವರ್ಷಗಳಿಂದ ಸಹಕರಿಸುತ್ತಾ ಬಂದಿದ್ದಾರೆ.

50ನೇ ವರ್ಷದ ಗಣೇಶೋತ್ಸವವು ಮೂರು ದಿನಗಳ ಪರ್ಯಂತ ನಡೆಯುತ್ತಿದ್ದು  ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಕುಮಾರ್ ಆರ್.ಯನ್ , ಕಾರ್ಯದರ್ಶಿಯಾಗಿ ರಾಜೇಶ‌ ಪೆಂರ್ಬುಡ, ಉಪಾಧ್ಯಕ್ಷರಾಗಿ ಸದಾನಂದ ಶೆಟ್ಟಿ, ನಾಣ್ಯಪ್ಪ ಪೂಜಾರಿ, ದಯರಾಜ ಕೆ.ಪಿ, ಯಶೋಧರ ಶೆಟ್ಟಿ‌ ಕೊರಂಜ, ವಿಜಯ ಕುಮಾರ್, ರಾಘವ.ಎಚ್ ಮತ್ತು ವಿವಿಧ ಸಮಿತಿಗಳನ್ನು  ರಚಿಸಲಾಗಿದೆ.

ಆ.31 ರಿಂದ ಸೆಪ್ಟೆಂಬರ್ 2 ರವರೆಗೆ ಗಣೇಶನಿಗೆ ವಿವಿಧ ಸೇವೆಗಳು, ಭಜನಾ ಸೇವೆ, ಮಹಾಪೂಜೆ, ಅನ್ನ ಸಂತರ್ಪಣೆ, ಗಣಾಧಿಪತ್ಯಯಕ್ಷಗಾನ ತಾಳಮದ್ದಳೆ, ಬಯಲಾಟ, ಸೆ.2ರಂದು  ಬೆಳಿಗ್ಗೆ ಗಂಟೆ 10 ರಿಂದ ಪಟ್ಲ ಸತೀಶ್ ಶೆಟ್ಟಿ , ಸತ್ಯನಾರಾಯಣ ಪುಣಿಚಿತ್ತಾಯ, ರವಿಚಂದ್ರ ಕನ್ನಡಿ ಕಟ್ಟೆ, ಕಾವ್ಯಶ್ರೀ ಅಜೇರು  ಬಳಗದಿಂದ ಯಕ್ಷ ಗಾನವೈಭವ ನಡೆಯಲಿದೆ.

ಬರಹ: ದಿವಾಕರ ಆಚಾರ್ಯ ಗೇರುಕಟ್ಟೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments