ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಮಂಗಳೂರಿನ ಸಂತ ಆಗ್ನೆಸ್ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರತೀಕ್ಷಾ(ನೆಹರೂ ನಗರದ ಆನಂದ ಗೌಡ ಮತ್ತು ಸಾವಿತ್ರಿ ದಂಪತಿ ಪುತ್ರಿ) ಮತ್ತು ಸನ್ಮಯ (ಕನ್ಯಾನದ ಈಶ್ವರ ಪ್ರಸಾದ್ ಮತ್ತು ಮಧುರಾ ದಂಪತಿ ಪುತ್ರಿ) ಚಿನ್ನದ ಪದಕವನ್ನು ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಪ್ರಾಪ್ತಿ ಕೆ.ಎಸ್(ಬಲ್ನಾಡು ಗ್ರಾಮದ ಸೀತರಾಮ ಗೌಡ ಮತ್ತು ದೇವಿಕಾ ದಂಪತಿ ಪುತ್ರಿ) ಮತ್ತು ಪ್ರಥಮ ಪಿಯುಸಿ ಕಲಾ ವಿಭಾಗದ ಗಾನಶ್ರೀ (ನೆಹರೂನಗರದ ದೇವಪ್ಪ ಮತ್ತು ಮೀನಾಕ್ಷಿ ದಂಪತಿ ಪುತ್ರಿ) ಕಂಚಿನ ಪದಕವನ್ನು ಗಳಿಸಿದ್ದಾರೆ.
ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ರಿತೇಶ್ (ಕುರಿಯ ಗ್ರಾಮದ ಶೀನಪ್ಪ ಗೌಡ ಮತ್ತು ದೇವಿಕಾ ದಂಪತಿ ಪುತ್ರ) ಮತ್ತು ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಪವನ್ (ಕಡೇಶ್ವಾಲ್ಯದ ಜಯಪ್ರಕಾಶ್ ಮತ್ತು ಗಂಗಾ ಸರಿತಾ ದಂಪತಿ ಪುತ್ರ) ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಂದನ್ ಗೌಡ (ಕುಣಿಗಲ್ ನ ಶಿವಣ್ಣ ಬಿ. ಎಂ ಮತ್ತು ಶೋಭಾ ದಂಪತಿ ಪುತ್ರ), ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿನೀಶ್‌ಕುಮಾರ್ (ಹೆಗ್ಗದದೇವನಕೋಟೆಯ ಸುರೇಶ್ ಮತ್ತು ಮೀನಾಕ್ಷಿ ದಂಪತಿ ಪುತ್ರ) ಹಾಗೂ ಪ್ರಥಮ ಪಿಯುಸಿ ಕಲಾ ವಿಭಾಗದ ಅರುಣ್‌ಕುಮಾರ್(ಪುತ್ತೂರಿನ ರಮೇಶ ಎ ಎಂ ಮತ್ತು ಲಲಿತಾ ದಂಪತಿ ಪುತ್ರ) ಕಂಚಿನ ಪದಕವನ್ನು ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

