ಮದುವೆಯ ಆರತಕ್ಷತೆಯ ಸಂಭ್ರಮದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಮದುವೆಯ ಆರತಕ್ಷತೆಯ ಮಧ್ಯೆಯೇ ಮದುಮಗ ಎದೆನೋವಿನಿಂದ ಪ್ರಾಣಬಿಟ್ಟಿದ್ದಾನೆ.
ಇದು ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿಯಲ್ಲಿ ನಡೆದ ಹೃದಯವಿದ್ರಾವಕ ಘಟನೆ. ಹೊನ್ನೂರಸ್ವಾಮಿ (26) ಎಂಬ ಯುವಕನೇ ಮೃತಪಟ್ಟ ಮದುಮಗ.
ಮದುವೆಯ ಸಂಭ್ರಮದಲ್ಲಿದ್ದ ಮದುಮಗ ಹೊನ್ನೂರಸ್ವಾಮಿಗೆ ವೇದಿಕೆಯಲ್ಲಿರುವಾಗಲೇ ಎದೆನೋವು ಬಂದಿದೆ. ಆತನ ಚಡಪಡಿಕೆಯನ್ನು ಕಂಡ ಸಂಬಂಧಿಕರು ಸುಮ್ಮನೆ ನಿಲ್ಲುವಂತೆ ಹೇಳಿದ್ದಾರೆ.
ತನ್ನ ಸಹೋದರನ ಬಳಿ ಎದೆನೋವಾಗುತ್ತಿದೆ ಎಂದು ಆತನು ತಿಳಿಸಿದಾಗ ಕುಡಿಯಲು ಪಾನೀಯ ತಂದುಕೊಟ್ಟರು. ಅದನ್ನು ಕುಡಿದ ಕೂಡಲೇ ವಾಂತಿ ಮಾಡಿದ ಹೊನ್ನೂರಸ್ವಾಮಿ ಅಸ್ವಸ್ಥನಾಗಿದ್ದಾನೆ.
ಕೂಡಲೇ ಹೊಸಪೇಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಹೊನ್ನೂರಸ್ವಾಮಿ ಮಾರ್ಗಮಧ್ಯೆಯೇ ಅಸುನೀಗಿದ್ದಾನೆಂದು ತಿಳಿದುಬಂದಿದೆ.