ನಟಿ, ಮಾಡೆಲ್ ಅದಾ ಶರ್ಮಾ ಇತ್ತೀಚಿಗೆ ಎಲೆಗಳಿಂದ ವಿನ್ಯಾಸಗೊಳಿಸಿದ ಉಡುಗೆಯಲ್ಲಿ ಮಿಂಚಿದರು.
ಅವರು ಇನ್ಸ್ಟಾ ಗ್ರಾಮ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಈ ಅದ್ಭುತ ಸೌಂದರ್ಯದ ಫೋಟೋಗಳನ್ನು ಹಂಚಿಕೊಂಡರು. ನಿಜವಾಗಿಯೂ ನೈಜ ಎಲೆಗಳಿಂದ ನಿರ್ಮಿಸಿದ ಈ ಉಡುಗೆಯಲ್ಲಿ ಅದಾ ಶರ್ಮ ಆಕರ್ಷಕವಾಗಿ ಕಾಣುತ್ತಾರೆ.
ಇದು ನೋಡುಗರನ್ನು ವಿಸ್ಮಯಗೊಳಿಸಿದೆ. ಎಲೆಗಳಿಂದ ಮಾಡಿದ ಗೌನ್ ಫ್ಯಾಶನ್ ಎಂದು ಅದಾ ಭಾವಿಸುತ್ತಾರಂತೆ.
ಅವಳ ಕಿವಿಯೋಲೆಗಳನ್ನು ಹತ್ತಿರದಿಂದ ನೋಡಿ. ಎಲೆಗಳ ಡ್ರೆಸ್ ಅದು ನಕಲಿ ಅಲ್ಲದಿದ್ದರೂ ಶಾಶ್ವತವಾಗಿ ಉಳಿಯದೇ ಇರಬಹುದು, ಆದರೆ ಇದು ಪರಿಸರ ಸ್ನೇಹಿಯಾಗಿದೆ.