ಕಳೆದ ಕೆಲವು ದಿನಗಳಿಂದ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಹಲವಾರು ಕಡೆಗಳಿಗೆ ನೀರು ನುಗ್ಗಿದೆ.
ಇದರಿಂದ ಅಪಾರ ನಾಶ ನಷ್ಟಗಳು ಉಂಟಾಗಿವೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲೂ ಎಡೆಬಿಡದೆ ಮಳೆ ಸುರಿಯುತ್ತಿದೆ.
ಇತಿಹಾಸ ಪ್ರಸಿದ್ಧ ಶ್ರೀ ಮಧೂರಿನ ಮದನಂತೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿ ದೇವಸ್ಥಾನದ ಒಳಾಂಗಣದಲ್ಲಿ ನೀರು ತುಂಬಿಕೊಂಡಿದೆ.
ದೇವಸ್ಥಾನದ ಪಕ್ಕದಲ್ಲಿಯೇ ಹರಿಯುತ್ತಿರುವ ಮಧುವಾಹಿನಿ ಹೊಳೆ ಮೈದುಂಬಿ ಹರಿಯುತ್ತಲಿದೆ. ಹೊಳೆಯ ನೀರು ದೇವಸ್ಥಾನದ ಹೊರಾಂಗಣ ಮತ್ತು ಒಳಾಂಗಣವನ್ನು ಪ್ರವೇಶಿಸಿದೆ.

ಪೂಜಾವಿಧಿಗಳು ಎಂದಿನಂತೆ ನಡೆಯುತ್ತಿದೆ. ಆದರೂ ಭಕ್ತರು ನೀರಿನಲ್ಲೇ ನಡೆದುಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ. ನೀರು ನುಗ್ಗಿದ ಕೆಲವು ದೃಶ್ಯಗಳನ್ನು ಚಿತ್ರದಲ್ಲಿ ನೋಡಬಹುದು.