ತೆಂಗಿನ ನಾಡಲ್ಲಿ ಭೀಕರ ಮಳೆಯ ಅಬ್ಬರ ಜೋರಾಗಿದೆ. ಪ್ರವಾಹವೂ ಜೋರಾಗಿದೆ. ಹೊಳೆ, ತೋಡು, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹೇಳಿ ಕೇಳಿ ನಮ್ಮದು ತೆಂಗಿನ ನಾಡು. ತೆಂಗು ಕೃಷಿಗೆ ನಮ್ಮ ಕರಾವಳಿ ನಾಡು ಪ್ರಖ್ಯಾತಿಯನ್ನು ಪಡೆದಿದೆ.
ನದಿ, ಹೊಳೆಗಳ ಇಕ್ಕೆಲಗಳಲ್ಲಿಯೂ ತೆಂಗಿನ ಮರಗಳ ಸಾಲುಗಳನ್ನೇ ಕಾಣಬಹುದು. ಅಂತಹಾ ತೆಂಗಿನ ಮರಗಳಲ್ಲಿ ಒಣಗಿದ ರಭಸಕ್ಕೆ ನದಿ ಹೊಳೆಗಳ ನೀರಿಗೆ ಬೀಳುತ್ತವೆ.
ತೇಲಿ ಹೋಗುತ್ತಿರುವ ತೆಂಗಿನಕಾಯಿಗಳನ್ನು ಹಿಡಿಯಲೆಂದೇ ಈ ಮಳೆಗಾಲದಲ್ಲಿ ಜನರ ಒಂದು ಗುಂಪು ತಯಾರಾಗಿ ನಿಂತಿರುತ್ತದೆ. ಅವರು ಈ ಸಮಯದಲ್ಲಿ ಇದೇ ಕೆಲಸವನ್ನು ಮಾಡುತ್ತಾರೆ. ದಿನವೊಂದಕ್ಕೆ ಸಾವಿರಕ್ಕೂ ಅಧಿಕ ತೆಂಗಿನಕಾಯಿಗಳನ್ನು ಸಂಗ್ರಹಿಸುತ್ತಾರೆ.
ಉದ್ದವಾದ ಕೋಲೊಂದಕ್ಕೆ (ಕೊಕ್ಕೆ) ಬಲೆಯೊಂದನ್ನು (ನೆಟ್) ಕಟ್ಟಿ ಸೇತುವೆಯ ಮೇಲೆ ನಿಂತು ತೆಂಗಿನಕಾಯಿ ಹಿಡಿಯುವ ದೃಶ್ಯ ನೋಡಲೂ ಮನೋಹರ. ಕೆಳಗಿನ ಎರಡು ವೀಡಿಯೋಗಳನ್ನು ನೋಡಿ. ವಾಟ್ಸಾಪ್ ನಲ್ಲಿ ಬಂದಿರುವ ವೀಡಿಯೋಗಳನ್ನು ಹಾಗೆಯೇ ಇಲ್ಲಿ ಕೊಡಲಾಗಿದೆ.