ಇದೀಗ ಕರ್ನಾಟಕ ರಾಜ್ಯದಲ್ಲಿ ಡಿಸೇಂಬರ್ 28ರಿಂದ ಜನವರಿ 6ರ ವರೆಗೆ ರಾತ್ರಿ ಕರ್ಫ್ಯೂ ಘೋಷಿಸಿ ಸರಕಾರ ಆದೇಶ ಹೊರಡಿಸಿದೆ. ರಾತ್ರಿ 10 ಘಂಟೆಯ ನಂತರ ಜನರು ಮನೆಯಿಂದ ಹೊರಗಡೆ ಬರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಹಗಲು ಹೊತ್ತಿನಲ್ಲೂ ಹೋಟೆಲ್, ಬಾರ್, ಪಬ್ ಗಳಲ್ಲಿ 50:50ರ ಅನುಪಾತದಲ್ಲಿ ಜನರಿಗೆ ಅನುಮತಿ ನೀಡಲಾಗಿದೆ.
ಈ ಕಾರಣಗಳಿಂದ ಈ 10 ದಿನಗಳ ಅವಧಿಯಲ್ಲಿ ರಾತ್ರಿ ನಡೆಯಬೇಕಾದ ಯಕ್ಷಗಾನ ಬಯಲಾಟಗಳು ನಡೆಯುವುದು ಕಷ್ಟಸಾಧ್ಯ. ಆದುದರಿಂದ ಎಲ್ಲಾ ಮೇಳಗಳು ರಾತ್ರಿ 10 ಘಂಟೆಯ ಒಳಗೆ ತಮ್ಮ ಪ್ರದರ್ಶನಗಳನ್ನು ಮುಗಿಸಬೇಕಾದ ಅನಿವಾರ್ಯತೆಗೆ ಸಿಲುಕಿವೆ.