ಒಂದು ತಿಂಗಳ ಪರ್ಯಂತ ಜರುಗಿದ ಕೋಳ್ಯೂರು ವೈಭವ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಅರ್ಥಪೂರ್ಣವಾಗಿ ಸಂಯೋಜಿಸಿದ ಬಗ್ಗೆ ಕೋಳ್ಯೂರು ರಾಮಚಂದ್ರ ರಾಯರ ಮಕ್ಕಳು ನವೆಂಬರ್ 15ರಂದು ಯಕ್ಷಗಾನ ಕಲಾರಂಗದ ಕಚೇರಿಗೆ ಆಗಮಿಸಿ ಪದಾಧಿಕಾರಿಗಳಿಗೆ ಧನ್ಯವಾದ ಸಮರ್ಪಿಸಿದರು.
ಕೋಳ್ಯೂರರ ಪುತ್ರ ಕೆ. ಶ್ರೀಧರ ರಾವ್ ಹಾಗೂ ಪುತ್ರಿ ಶ್ರೀಮತಿ ಮೀರಾರವರು ಮಾತನಾಡಿ ತಮ್ಮ ತಂದೆಯವರ ನವತ್ಯಬ್ದ ಕಾರ್ಯಕ್ರಮವು ಯಕ್ಷಗಾನ ಚರಿತ್ರೆಯ ಪುಟಗಳಲ್ಲಿ ದಾಖಲಾಗುವಂತೆ ರೂಪಿಸಿ ಕಾರ್ಯಗತಗೊಳಿಸಿದ ಯಕ್ಷಗಾನ ಕಲಾರಂಗಕ್ಕೆ ನಮ್ಮ ಕುಟುಂಬ ಸದಾ ಋಣಿಯಾಗಿದೆ ಎಂದು ಹೃದಯತುಂಬಿ ಕೃತಜ್ಞತೆಯ ಮಾತುಗಳನ್ನಾಡಿದರು. ಕೋಳ್ಯೂರು ಕುಟುಂಬದ ಪರವಾಗಿ ಸಂಸ್ಥೆಗೆ ಸಮ್ಮಾನಪತ್ರ ನೀಡಿ ಅಭಿನಂದಿಸಿದರು.
ವೀಡಿಯೋ ಎಡಿಟಿಂಗ್ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿದ ಮೋಹನ್ ದಾಸ್ ಪೈ ಇವರನ್ನು ಗೌರವಿಸಲಾಯಿತು. ಕೋಳ್ಯೂರರವರ ಮೊಮ್ಮಗ ನಟರಾಜ್ ಅವರು ಯಕ್ಷಗಾನ ಕಲಾರಂಗದ ವೆಬ್ಸೈಟ್ ವಿನ್ಯಾಸ ಮಾಡುವ ಹೊಣೆ ತನ್ನದೆಂದು ಭರವಸೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್ ರಾವ್ ಎಲ್ಲರಿಗೂ ಶಾಲು ಸ್ಮರಣಿಕೆ ನೀಡಿ ಗೌರವಿಸಿದರು. ಸಂಸ್ಥೆಯ ಚಟುವಟಿಕೆಯ ಬಗ್ಗೆ ವಿಶೇಷ ಆಸ್ಥೆಯನ್ನು ಹೊಂದಿದ ಮಹಾನ್ ಕಲಾವಿದ ಕೋಳ್ಯೂರರ ತೊಂಭತ್ತರ ಸಂಭ್ರಮದ ಕಾರ್ಯಕ್ರಮದ ಸಂಯೋಜನೆಯಿಂದ ಸಂಸ್ಥೆಯ ಘನತೆ ವೃದ್ಧಿಯಾಗಿದೆ ಎಂದು ಕಾರ್ಯದರ್ಶಿ ಮುರಳಿ ಕಡೆಕಾರ್ ತನ್ನ ಪ್ರಾಸ್ತಾವಿಕ ಮಾತುಗಳಲ್ಲಿ ನುಡಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು.
ಕೋಳ್ಯೂರು ರಾಮಚಂದ್ರ ರಾವ್ 90 ವರ್ಷದ ಬಣ್ಣದ ಬದುಕು ಶ್ಲಾಘನೀಯ. ಯಕ್ಷಗಾನದ ಬ್ರಹ್ಮಕಪಾಲದ ಈಶ್ವರ ನಮ್ಮ ಕುಟುಂಬದವರೇ ಆದ ಕುರಿಯ ವಿಠಲ ಶಾಸ್ತ್ರಿ ಗಳ ಶಿಷ್ಯ ರಾದ ರಾಮಚಂದ್ರ ರಾವ್ ಅತ್ಯುತ್ತಮ ಸ್ತ್ರೀ ವೇಷಧಾರಿ.ಅವರಿಗೆ ಸ್ತ್ರೀ ವೇಷದಲ್ಲಿ ಅವರೇ ಸಾಟಿ.
ಗೋಪಾಲ ಶಾಸ್ತ್ರಿ.