ಇತ್ತೀಚಿಗೆ ನಿಧನರಾದ ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರ ಆಡಳಿತ ಮೊಕ್ತೇಸರ ದಿ ಯನ್ ಸುಬ್ರಾಯ ಬಳ್ಳುಳ್ಳಾಯ ಅವರಿಗೆ ನುಡಿ ನಮನ ಕಾರ್ಯಕ್ರಮವು ಶ್ರೀ ಕ್ಷೇತ್ರದಲ್ಲಿ ಜರಗಿತು. ಸುಬ್ರಹ್ಮಣ್ಯ ಭಟ್ ಅಡ್ಕ ಅಧ್ಯಕ್ಷ ಸ್ಥಾನ ವಹಿಸಿ ನುಡಿನಮನ ಮಾತುಗಳನ್ನಾಡಿದರು. ಶಂಕರನಾರಾಯಣ ಹೊಳ್ಳ, ರಾಘವನ್ ಬೆಳ್ಳಿಪ್ಪಾಡಿ, ಗೋವಿಂದಬಳ್ಳಮೂಲೆ ಇವರು ಸಾಂದರ್ಭಿಕ ನುಡಿಗಳನ್ನಾಡಿದರು.
ವೃಂದ ಬಳ್ಳಮೂಲೆ ಪ್ರಾರ್ಥನೆ ಹಾಡಿ ಡಾ. ಶಿವಕುಮಾರ್ ಅಡ್ಕ ಸ್ವಾಗತಿಸಿ ಸೀತಾರಾಮ ಬಳ್ಳುಳ್ಳಾಯ ಅವರು ಧನ್ಯವಾದವಿತ್ತರು. . ಮುರಳಿಕೃಷ್ಣ ಸ್ಕಂದ ಕಾರ್ಯಕ್ರಮ ಸಂಯೋಜನೆ ಮಾಡಿದರು. ಕೃಷ್ಣ ಭಟ್ ಅಡ್ಕ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸದಸ್ಯರಾದ ರಾಘವೇಂದ್ರ ಉಡುಪುಮೂಲೆ, ಅನುಪಮಾ ರಾಘವೇಂದ್ರ, ವಿಜಯಲಕ್ಷ್ಮಿ ಮುರಳಿಕೃಷ್ಣ ಸ್ಕಂದ, ಹರಿಕೃಷ್ಣ ಪೆರಡಂಜಿ, ರಾಜೇಶ್ವರಿ ಈಶ್ವರ ಭಟ್ ಬಳ್ಳಮೂಲೆ ಉಪಸ್ಥಿತರಿದ್ದರು.