Thursday, November 21, 2024
Homeಯಕ್ಷಗಾನಹಿರಿಯ ಯಕ್ಷಗಾನ ಕಲಾವಿದ ಮಾನ್ಯ ತಿಮ್ಮಯ್ಯ ನಿಧನ

ಹಿರಿಯ ಯಕ್ಷಗಾನ ಕಲಾವಿದ ಮಾನ್ಯ ತಿಮ್ಮಯ್ಯ ನಿಧನ

ಹಿರಿಯ ಯಕ್ಷಗಾನಾ ಕಲಾವಿದ ಮಾನ್ಯ ತಿಮ್ಮಯ್ಯ (93 ವರ್ಷ) ಇಂದು 09-09-2021 ರಂದು ಮುಂಜಾನೆ ಕಾಸರಗೋಡಿನ ಮಾನ್ಯದಲ್ಲಿ ನಿಧನ ಹೊಂದಿದರು. ಪುಂಡು ವೇಷ ಮತ್ತು ಸ್ತ್ರೀವೇಷದಲ್ಲಿ ವಿಶೇಷ ಪ್ರಸಿದ್ಧಿ ಪಡೆದ ಇವರು ಚೊಕ್ಕಾಡಿ, ಧರ್ಮಸ್ಥಳ, ಮಧೂರು, ಕದ್ರಿ, ಮುಲ್ಕಿ, ಉದ್ಯಾವರ ಸೇರಿದಂತೆ ಹತ್ತಾರು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸಸಿಹಿತ್ಲು ಮೇಳದ ಯಜಮಾನರಾಗಿಯೂ ಕಾರ್ಯನಿರ್ವಹಿಸಿದ ಇವರು ಲಾಭ ನಷ್ಟದ ಲೆಕ್ಕ ಹಾಕದೆ ಯಕ್ಷಗಾನಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

ಯಕ್ಷಗಾನ ಕಲಾರಂಗ ಸಂಸ್ಥೆಯು ತನ್ನ ಬೆಳ್ಳಿಹಬ್ಬದ ಸಂದರ್ಭದಲ್ಲಿ ಸಮ್ಮಾನಿಸಿ ಗೌರವಿಸಿದೆ. ಯಕ್ಷಗಾನ ಕಲಾರಂಗದ ಬಗ್ಗೆ ಅತೀವ ಅಭಿಮಾನ ಹೊಂದಿದ್ದ ಇವರು ಕಳೆದ ಮೂರು ವರ್ಷಗಳ ಹಿಂದೆ ಸಂಸ್ಥೆಯಲ್ಲಿ ತನ್ನ ಹೆಸರಿನ ಪ್ರಶಸ್ತಿಯನ್ನು ಸ್ಥಾಪಿಸಿದ್ದರು. ಮೃತರು ಬಂಧುಗಳು ಹಾಗೂ ಅಪಾರ ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

RELATED ARTICLES

2 COMMENTS

  1. ನಾನು ಈ ವಾಟ್ಸ್ ‌‌‌‌‌‌‌‌‌‌‌‌‌‌‌‌‌‌ಬಳಗದಲ್ಲಿ ಬರುವ ಹಿಂದಿನ ತಲೆಮಾರಿನ ಕಲಾವಿದರ ಬಗ್ಗೆ ಲೇಖನವನ್ನು, ಓದಿದೆ.
    ನಾನು ತಿಳ್ಕೊಂಡಂತೆ, ಹೆಚ್ಚಿನ, ಹವ್ಯಕ ಯಾ ಇತರ ಜಾತಿಯ ಕಲಾವಿದರು, ಯಕ್ಷಗಾನ ಮೇಳಗಳಿಗೆ, ಸೇರಿದ್ದು ಬಡತನದ ಬೇಗೆಯನ್ನು ತಡೆಯದೆ.ನಮ್ಮ ಭಾಷೆ ಯಲ್ಲಿ ‌‌‌ಹೇಳುವುದಾದರೆ,ಚೋರಿಂಗೆ,ಗತಿ ಯಿಲ್ಲದ್ದೆ.
    ಮತ್ತೆ ಪ್ರಖ್ಯಾತಿ ಪಡೆದರು.
    ನಮ್ಮಲ್ಲಿ ಮೇಳ ನಡೆಸಿದವರು,ಕುರಿತು ವಿಠಲ ಶಾಸ್ತ್ರಿ ಗಳು,ಮಾಜಿ ತಿಮ್ಮಣ್ಣ ಭಟ್,ಪೆರೋಡಿ ಹಾಸ್ಯಗಾರರು,ನೂಜಿಪ್ಪಾಡಿ ಶಂಕಣ್ಯಯರು (ಆಗಿನ ಬಪ್ಪನಾಡು ಕ್ಷೇತ್ರ ಮಹಾತ್ಮೆ,,ದೇವಿ ಲಲಿತೋಪಾಖ್ಯಾನ), ರಾಯರು, ಇತ್ಯಾದಿ ಗಳು.
    ಬಂಟರಲ್ಲಿ, ಕೊರಗ ಶೆಟ್ಟರು.
    ಆಗಿನ ಕಾಲದಲ್ಲಿ, ಹವ್ಯಕ ,ಬಂಟರು ಯಕ್ಷಗಾನ ಕಲಾವಿದರು ಜಾಸ್ತಿ.
    ತೆಂಕುತಿಟ್ಟಿನ ಬಗ್ಗೆ ನನ್ನ ಹಿರಿಯರಿಂದ, ಕೇಳಿ, ತಿಳಿದ ಅನುಭವ ಹಂಚಿಕೊಂಡಿದ್ದೇನೆ.

  2. ವಳಕ್ಕುಂಜ ಅಣ್ಣ,,
    ನಾನು ಮೊನ್ನೆ ಬಲಿಪ,ಭಾಗವತರು ಭಾಷಣ ಯೂಟ್ಯೂಬ್ನಲ್ಲಿ, ಕೇಳಿದೆ.
    ಅವರು ಹಿಂದಿನ ಪಾರಂಪರಿಕ ಯಕ್ಷಗಾನ ದ ಬಗ್ಗೆ ಮಾತನಾಡಿ, ಅದು ಶಾಸ್ತ್ರಿ ಯು ಬದ್ದ ವಾಗಿತ್ತು,, ಗುರು ಶಿಷ್ಯ ಪರಂಪರೆ ಯಿಂದ ಬಂತು ಎಂದು ಹೇಳಿದರು.
    ಹಿಂದಿನ ಸ್ತ್ರೀ ವೇಷ ದ ನಾಟ್ಯದ ಬಗ್ಗೆ ಹೇಳುತ್ತ ಹಿಂದೆ , ಪೈವಳಿಕೆ ಐತ್ತಪ್ಪ ಶೆಟ್ಟಿ ಎಂಬ ಕಲಾವಿದರ ಬಗ್ಗೆ ಮಾತನಾಡಿ, ಮದ್ದಳೆ ಬಡಿತಕ್ಕೆ,,ಅವರು ನಾಟ್ಯವನ್ನು ತುಂಬಾ ಹೊಗಳಿದರು.
    ಇನ್ನು ಒತ್ತೆ ಕಿವಿ ಸುಬ್ಬ ನ ಬಣ್ಣ ದ ವೇಷ ೧೯೫೨ ನೇ ಸುಳ್ಯದ ಆಟದಲ್ಲಿ,ಅವನ ಅಟ್ಟಹಾಸಕ್ಕೆ ,ಯೆಸ್.ಐ.ಒಬ್ಬರು ಹೆದರಿದ ಬಗ್ಗೆ ವಿವರಿಸಿದರು. ಹಿಂದೆ ಕಲಾವಿದರು ತಪ್ಪು ಮಾಡಿದರೆ ಟಪ್ಪ ನೆ ಹೊಡೆತ ಎಂಬ ವಿವರಣೆ ಬಲಿಪರ ಮಾತಿನಲ್ಲಿ ಕೇಳಬೇಕು. ಕುರಿಯ ವಿಠಲ ಶಾಸ್ತ್ರಿ ಗಳು ಹೀಗೆ ಹೊಡೆಯುತ್ತಾರೆ ಎಂದು ,ಮಾಣಂಗಾಯಿ ಕ್ರಷ್ಣ ಭಟ್ಟರ ಮಗ ನನ್ನ ಹತ್ತಿರ ಹೇಳಿದ್ದರು.ಗೋವಿಂದ ಭಟ್ಟರ ಆತ್ಮಾ ಚರಿತ್ರೆ ಯಲ್ಲಿ ಇದು ಇದೆ.ಹಾಗೆ ಕಲಿತ ಕಲಾವಿದ ರಾಜು ಪರಿಪೂರ್ಣ ಕಲಾವಿದರು ಎಂದು ನನ್ನ ಅನಿಸಿಕೆ.
    ಸುಬ್ಬ ನ ಬಗ್ಗೆ ನನ್ನ ಅಜ್ಜ ರೆ ಅನಿಸಿಕೆ ಯನ್ನ ತಿಳಿಸಿದ್ದೇನೆ.
    ಬಲಿಪರು ಮೆಚ್ಚಿದ ಪಾರಂಪರಿಕ ಯಕ್ಷಗಾನ.
    ನೀವು ನಿಮ್ಮ ಯಕ್ಷದೀಪ ದಲ್ಲಿ ,ಹಿಂದಿನ ಕಷ್ಟ ಜೀವಿ ಕಲಾವಿದರ ಬಗ್ಗೆ ಮಾಹಿತಿ ತಿಳಿಸಿದಲ್ಲಿ ಉತ್ತಮ.

LEAVE A REPLY

Please enter your comment!
Please enter your name here

Most Popular

Recent Comments