Saturday, January 18, 2025
Homeಯಕ್ಷಗಾನನಾಕದಲ್ಲೊಂದು ಪಾಕ

ನಾಕದಲ್ಲೊಂದು ಪಾಕ

(ಯಕ್ಷಗಾನಕ್ಕಾಗಿ ತಮ್ಮ ಜೀವನವನ್ನೇ ಸವೆಸಿದ, ಮುಡಿಪಾಗಿಟ್ಟ ಕಲೆಯ ದಂತಕಥೆಗಳಾದ ಅಗಲಿದ ಹಿರಿಯ ಕಲಾವಿದರನ್ನು ಈ ಲೇಖನದ ಮೂಲಕ ನೆನಪಿಸಿ ಅವರಿಗೆ ಗೌರವವನ್ನರ್ಪಿಸುತ್ತಿದ್ದೇವೆ)


ಅದು ದೇವಲೋಕ. ಅಲ್ಲಿ ದೇವಸಭೆಯಲ್ಲಿ ಎಂದಿನಂತೆ ದೇವೇಂದ್ರ ತ್ರಿವಿಷ್ಟಪದಲ್ಲಿ ಕುಳಿತಿದ್ದಾನೆ. ಚಿತ್ರಸೇನನ ಗಾಯನ, ರಂಬಾದಿ ತರುಣಿಯರ ನರ್ತನ, ಸುರಪನ ಮೊಗದಲ್ಲಿ ಹೊಳಪಿಲ್ಲ, ಬೃಹಸ್ಪತಿಗೆ ಚಿಂತೆ. ಯಾಕೆ ಹೀಗೆ ಎಂದು ದೇವಗುರುಗಳ ಪ್ರಶ್ನೆ. ಏನೆಂದು ಹೇಳಲಿ. ಗುರುಗಳೇ, ಮಾನವ ಲೋಕದಲ್ಲಿ ಈಗ ಕಲಿಯುಗ ಮೊದಲ ಮೂರು ಯುಗದ ಹಾಗೆ ಈಗ ಅಲ್ಲಿಗೆ ಹೋಗುವ ಹಾಗಿಲ್ಲ. ಎಲ್ಲಿಗೂ ಹೋಗುವ ಹಾಗಿಲ್ಲ. ನಾವು ಪರೋಕ್ಷಪ್ರಿಯರು. ಆದರೂ, ಪ್ರತ್ಯಕ್ಷವಾಗಿ ಮಾನವರ ಕಾರ್ಯವೈಖರಿ ನೋಡಬೇಕೆಂಬ ಬಯಕೆ. ಚಿತ್ರಸೇನನ ಗಾಯನ, ಅಪ್ಸರೆಯರ ನರ್ತನ ಇದನ್ನೆ ನೋಡಿ, ನೋಡಿ ಸಾಧನಾಶೀಲ ಮಾನವರ ವಿಶೇಷತೆಯನ್ನು ನೋಡಬೇಕೆಂಬ ಬಯಕೆ ಏನು ಮಾಡಲಿ, ಗುರುಗಳೇ.


ಗುರುಗಳು ಯೋಚಿಸುತ್ತಾರೆ. ಏನು ಉಪಾಯ, ತಟ್ಟನೆ ಹೊಳೆಯುತ್ತದೆ. ಕೂಡಲೇ ದೇವೇಂದ್ರನಲ್ಲಿ “ಸುರಪ ಅದಕ್ಕೆ ಇಷ್ಟೊಂದು ಚಿಂತೆಯೆ. ಇಲ್ಲಿಯೆ ವ್ಯವಸ್ಥೆ ಮಾಡುತ್ತೇನೆ” ಎಂದು ಗುರುಗಳು ಅಂದಾಗ, “ಹೌದೇ ಹೇಗೆ ಗುರುಗಳೇ” ಎಂದು ಸುರಪ ಆಶ್ಚರ್ಯದಲ್ಲಿ ಕೇಳುತ್ತಾನೆ. ಈ ಕಲಿಯುಗದಲ್ಲಿ ಮತ್ರ್ಯಲೋಕದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಮನೋರಂಜನೆಯ, ಬೌದ್ಧಿಕ ಬೆಳವಣಿಗೆ ಹೊಂದುವ ಮತ್ತು ಪುರಾಣ ಜ್ಞಾನ ಸಿಗುವ ತಾಳಮದ್ದಳೆ ಎನ್ನುವ ಹೆಸರಿನಿಂದ ಕರೆಯಲ್ಪಡುವ ಒಂದು ಪ್ರಯೋಗ ಇದೆ. ಅದನ್ನೇ ಇಲ್ಲಿ ನಾವು ಮಾಡಿಸಿದರಾಯಿತು.

ಅದು ಹೇಗೆ ಸಾಧ್ಯ ಗುರುಗಳೇ? ಇಲ್ಲಿ ಅದನ್ನು ಯಾರು ಮಾಡುವುದು, ಎಂದಾಗ ಗುರುಗಳು ಸ್ವರ್ಗದಲ್ಲಿರುವ ತೆಂಕುತಿಟ್ಟಿನ ಹಿರಿಯ ಸಂಘಟಕರು- 1. ಕೆ.ವಿ. ಮುಚ್ಚಿನ್ನಾಯರು, 2. ಕುಬಣೂರು ಬಾಲಕೃಷ್ಣರಾಯರು.  3. ರಮಾನಾಥ ರಾವ್ ತಡಂಬೈಲು ಇವರನ್ನೇ ಕರೆದು ತಕ್ಷಣ ಒಂದು ತಾಳಮದ್ದಳೆ ಇಲ್ಲಿ ಆಗಬೇಕೆಂದು ಹೇಳುತ್ತಾರೆ. ಅವರು ಮೂವರು ಒಂದಾದ ಮೇಲೆ ಕೇಳಬೇಕೆ, ಪ್ರಸಂಗ, ಕಲಾವಿದರು ಮತ್ತು ಪಾತ್ರವಿತರಣೆ, ಎಲ್ಲವೂ ಸುಗಮವಾಗಿ ನಡೆಯಿತು. ಸಮಯದ ಮಿತಿ ಬೇಡವೆಂದು ದೇವೇಂದ್ರನ ಹೇಳಿಕೆ.


ಪಾರ್ಥ ಸಾರಥ್ಯ
ಭಾಗವತರು – ಸರ್ವಶ್ರೀ ಹಿರಿಯ ಅಜ್ಜ ಬಲಿಪ ನಾರಾಯಣ ಭಾಗವತರು
ಮತ್ತು ಪದ್ಯಾಣ ಪುಟ್ಟುನಾರಾಯಣ ಭಾಗವತರು.
ಮದ್ದಳೆ – ದಿವಾಣ ಭೀಮ ಭಟ್ ಮತ್ತು
ಪದ್ಯಾಣ ತಿರುಮಲೇಶ್ವರ ಭಟ್
ಚೆಂಡೆ – ನಿಡ್ಲೆ ನರಸಿಂಹ ಭಟ್
ಪಾತ್ರ ಪರಿಚಯ
ಶ್ರೀಕೃಷ್ಣ – ವಿದ್ವಾನ್ ಕಾಂತ ರೈ
ಕೌರವ – ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್
ಅರ್ಜುನ – ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ
ಬಲರಾಮ – ತೆಕ್ಕಟ್ಟೆ ಆನಂದ ಮಾಸ್ತರ್
ಪ್ರಸಂಗ : ಅನಲಾನಿಲ – ಸಂವಾದ
ಭಾಗವತರು – ಅಗರಿ ಶ್ರೀನಿವಾಸ ಭಾಗವತರು ಮತ್ತು
ಭಾಗವತ ಜಿ.ಆರ್. ಕಾಳಿಂಗ ನಾವುಡ
ಮದ್ದಳೆ – ಕಾಸರಗೋಡು ವೆಂಕಟ್ರಮಣ ಮತ್ತು ದುರ್ಗಪ್ಪ ಗುಡಿಗಾರ
ಪಾತ್ರ ಪರಿಚಯ
ಧರ್ಮರಾಯ – ಕುಬಣೂರು ಬಾಲಕೃಷ್ಣ ರಾವ್
ಭೀಮ – ಹರಿದಾಸ್ ಮಲ್ಪೆ ರಾಮದಾಸ ಸಾಮಗ
ದ್ರೌಪದಿ – ಮಾರೂರು ಮಂಜುನಾಥ ಭಂಡಾರಿ
ಶ್ರೀಕೃಷ್ಣ – ಸತ್ಯಮೂರ್ತಿ ದೇರಾಜೆ
ಪ್ರಸಂಗ – ವಿದುರಾತಿಥ್ಯ – ಶ್ರೀ ಕೃಷ್ಣ ಸಂಧಾನ
ಭಾಗವತರು – ದಾಮೋದರ ಮಂಡೆಚ್ಚ ಮತ್ತು
ಕಡತೋಕ ಮಂಜುನಾಥ ಭಾಗವತರು
ಮದ್ದಳೆ – ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್
ಚೆಂಡೆ – ತಲೆಂಗಳ ಗೋಪಾಲಕೃಷ್ಣ ಭಟ್
ಪಾತ್ರ ಪರಿಚಯ
ಶ್ರೀಕೃಷ್ಣ – ಹರಿದಾಸ ಮಲ್ಪೆ
ಶಂಕರನಾರಾಯಣ ಸಾಮಗ
ವಿದುರ – ರಸಋಷಿ
ದೇರಾಜೆ ಸೀತಾರಾಮಯ್ಯ
ಕೌರವ – ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್
ಅಜ್ಜ ಬಲಿಪ ನಾರಾಯಣ ಭಾಗವತರ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಯಕ್ಷಗಾನದ ಗುರುಗಳಾದ ಮಾಂಬಾಡಿ ನಾರಾಯಣ ಭಾಗವತರು ದೀಪೋಜ್ವಲನಗೈದರು.  ಕೆ. ವಿ. ಮುಚ್ಚಿನ್ನಾಯರು ಸ್ವಾಗತ ನೀಡಿದರು. ರಮಾನಾಥರಾಯರು ಪಾತ್ರ ಪರಿಚಯ ಮಾಡಿದರು.


ತಾಳಮದ್ದಳೆ ಆರಂಭವಾಗಿ ಸ್ವಲ್ಪ ಹೊತ್ತಿನಲ್ಲಿ ಎಲ್ಲಾ ದೇವತೆಗಳೂ ಅಲ್ಲಿ ಒಂದು ಸೇರಿದರು. ತಾಳಮದ್ದಳೆ ಬಿರುಸಾಗತೊಡಗಿತು.    ಬಿಡುಗಣ್ಣರು ಮೈಯೆಲ್ಲಾ ಕಿವಿಯಾಗಿ ತಾಳಮದ್ದಳೆ ಕೇಳತೊಡಗಿದರು. ಕೃತ, ತ್ರೇತಾ, ದ್ವಾಪರವನ್ನೆ ವಾದಕ್ಕೆ ಬಳಸಿಕೊಂಡು ಅರ್ಥ ಹೇಳುವ ವೈಖರಿಗೆ ದೇವತೆಗಳೇ ಬೆರಗಾದರು. ಒಬ್ಬೊಬ್ಬ ಭಾಗವತರ ಒಂದೊಂದು ಶೈಲಿಯೂ ದೇವತೆಗಳನ್ನು ಸಂಮೋಹನಗೊಳಿಸಿತು.

ವನವಾಸದ ಅವಧಿಯಲ್ಲಿ ಅರ್ಜುನ ದೇವಲೋಕಕ್ಕೆ ಹೋದದ್ದು ಸರಿಯೇ ಎನ್ನುವ ವಿಷಯವನ್ನು ಹಿಡಿದು ವಾದವನ್ನು ಮಂಡಿಸುತ್ತಾ ಹೋದ ಶೇಣಿಯವರ ಕೌರವನ ಅರ್ಥವನ್ನು ಕೇಳಿದ ದೇವೇಂದ್ರನೇ ಬೆರಗಾದ, ಅದಕ್ಕೆ ಸರಿಯಾದ ಸಮರ್ಥನೆಯನ್ನು ದೊಡ್ಡ ಸಾಮಗರು ಶ್ರೀಕೃಷ್ಣನಾಗಿ ಉತ್ತರಿಸಿದಾಗ ದೇವೇಂದ್ರ ನಿಟ್ಟುಸಿರು ಬಿಟ್ಟ. ಅದ್ಭುತವಾದ ಕಾರ್ಯಕ್ರಮವನ್ನು ನೋಡಿ ಕೇಳಿದ ದೇವತೆಗಳು ಒಟ್ಟಾಗಿ ಕರತಾಡನಗೈದರು.      

ಎಲ್ಲಾ ಕಲಾವಿದರಿಗೆ, ಮಹಾತ್ಮಗಾಂಧಿ, ಸುಭಾಶ್ಚಂದ್ರ ಬೋಸ್, ಲಾಲ್‍ಬಹದ್ದೂರ್ ಶಾಸ್ತ್ರಿ, ರವೀಂದ್ರನಾಥ ಟಾಗೋರ್, ಡಾ| ಎ.ಪಿ.ಜೆ. ಅಬ್ದುಲ್ ಕಲಾಂ, ರತ್ನವರ್ಮ ಹೆಗ್ಗಡೆ, ವೆಂಕಪ್ಪ ಶೆಟ್ಟಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ, ಕುರಿಯ ವಿಠಲ ಶಾಸ್ತ್ರಿ ಈ ಎಲ್ಲಾ ಹಿರಿಯರು ಶಾಲು ಹಾಕಿ, ಗೌರವಿಸಿದರು. ತಿಂಗಳಿಗೊಂದು ಇಂತಹ ಕಾರ್ಯಕ್ರಮ ನಡೆಸುವುದೆಂದು ದೇವಸಭೆಯಲ್ಲಿ ನಿರ್ಣಯಿಸಲಾಯಿತು. ಈ ಬಗೆಯ ನಾಕದಲ್ಲಾದ ಹೊಸ ಪಾಕಕ್ಕೆ ಪಾಕಶಾಸನನೇ ಬೆರಗಾದ. ು

ಲೇಖಕ:  ರಾಮ ಜೋಯಿಸ ಬೆಳ್ಳಾರೆ, ಯಕ್ಷಗಾನ ಸಂಘಟಕ, ಅರ್ಥಧಾರಿ
RELATED ARTICLES

1 COMMENT

  1. Webdunia – Bharat’s app for daily news and videos
    Install App

    Kannada
    ಕೊರೊನಾ ವೈರಸ್ಸುದ್ದಿಗಳುಸ್ಯಾಂಡಲ್ ವುಡ್ವ್ಯವಹಾರಜನಪ್ರಿಯಕ್ರಿಕೆಟ್‌ವಿಡಿಯೋಇನ್ನಷ್ಟು ಹಾಸ್ಯಆರೋಗ್ಯಫೋಟೋ ಗ್ಯಾಲರಿಜ್ಯೋತಿಷ್ಯಬಾಲಿವುಡ್‌ಪ್ರವಾಸೋದ್ಯಮ

    1955ರಲ್ಲೇ ಬೆಂಗಳೂರಲ್ಲಿ ವಿಜೃಂಭಿಸಿತ್ತು ದಕ್ಷಯಜ್ಞ

    Webdunia
    [ ಪ.ಗೋ. ಎಂದೇ ಖ್ಯಾತರಾಗಿದ್ದ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರ ಸಂಸ್ಮರಣಾ ಗ್ರಂಥದಲ್ಲಿ (1999) ಪ್ರಕಟವಾದ ಈ ಲೇಖನವನ್ನು ಪ.ಗೋ. ಅವರ ಪುತ್ರ, ದೋಹಾ-ಖತಾರ್‌ನಲ್ಲಿ ಎಂಜಿನಿಯರ್ ಆಗಿರುವ ಪದ್ಯಾಣ ರಾಮಚಂದ್ರ ಅವರು ವೆಬ್‌ದುನಿಯಾ ಜೊತೆಗೆ ಹಂಚಿಕೊಂಡಿದ್ದಾರೆ. ಪದ್ಯಾಣ ಗೋಪಾಲಕೃಷ್ಣ ಅವರ ಪರಿಚಯ ಲೇಖ ನ ಮುಂದಿನ ಪುಟದಲ್ಲಿದೆ. -ಸಂ ]
    ಲೇಖಕ ಪೆರುವೋಡಿ ನಾರಾಯಣ ಭಟ್ಟ ಅವರ ಕುರಿತು : ಅಭಿನಯದ ಸಹಜತೆ, ಅರ್ಥಗಾರಿಕೆಯಲ್ಲಿನ ಪಾತ್ರೌಚಿತ್ಯಗಳನ್ನು ಸದಾ ಕಾಪಾಡಿಕೊಂಡು ಬಂದ ಅಜಾತಶತ್ರು, ಯಕ್ಷಗಾನ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ಟರದ್ದು ಯಕ್ಷಗಾನ ಲೋಕದಲ್ಲಿ ದೊಡ್ಡ ಹೆಸರು. ಕಡಲ ತೀರದ ಭಾರ್ಗವ ಡಾ.ಶಿವರಾಮ ಕಾರಂತರು ಚಿತ್ರೀಕರಿಸಿದ ಯಕ್ಷಗಾನ ಸಿನಿಮಾದಿಂದ ಹಿಡಿದು ಯಕ್ಷಗಾನದ ಯಾವುದೇ ಪ್ರಸಂಗಕ್ಕೂ ಸೈ ಎನ್ನುವ ಭಟ್ಟರನ್ನು ಹಲವು ಪ್ರಶಸ್ತಿ, ಪುರಸ್ಕಾರಗಳು ಅರಸಿಕೊಂಡು ಬಂದಿದೆ. ಈ ಯಕ್ಷರಂಗದ ದಿಗ್ಗಜ ಪತ್ರಿಕೋದ್ಯಮದ ಇನ್ನೋರ್ವ ದಿಗ್ಗಜ ಪ.ಗೋಪಾಲಕೃಷ್ಣರ ಕುರಿತು ಆತ್ಮೀಯತೆಯಿಂದ ಬರೆದ ಪ.ಗೋ. ಕುರಿತಾದ ಭಟ್ಟರ ಮಾತುಗಳು ನಿಮಗಿಷ್ಟವಾದೀತು.

    ———–

    ದಕ್ಷಯಜ್ಞ ನೋಡಿ‌ ಖುದ್ದು ಕ್ರುಶ್ಚೇವ್ ಕೈಕುಲುಕಿದ್ದರು!

    1955 ನೇ ಇಸ್ವಿ ಸೆಪ್ಟೆಂಬರ್ ತಿಂಗಳಲ್ಲಿ ಒಂದು ದಿವಸ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ನಮ್ಮ ಮನೆಯಲ್ಲಿ ಪ್ರತ್ಯಕ್ಷನಾದ. ಆತ ಮೈಸೂರಿನಿಂದ ಬಂದಿದ್ದ. ಪ್ರಸಿದ್ಧ ದಸರಾ (ವಸ್ತು ಪ್ರದರ್ಶನ)ದಲ್ಲಿ ಒಂದು ಯಕ್ಷಗಾನ ಬಯಲಾಟ ಪ್ರದರ್ಶನವನ್ನು ಏರ್ಪಾಡು ಮಾಡುವ ಪೂರ್ವ ಸಿದ್ಧತೆಗಾಗಿ ಆತ ಬಂದಿದ್ದ. ಧರ್ಮಸ್ಥಳ ಮೇಳದ ವ್ಯವಸ್ಥಾಪಕ ಸ್ಥಾನದಲ್ಲಿದ್ದ ಹಿರಿಯ ಕಲಾವಿದ ಕುರಿಯ ವಿಠಲ ಶಾಸ್ತ್ರಿ ಮೊದಲಾದವರನ್ನೆಲ್ಲ ಭೇಟಿ ಮಾಡಿಕೊಂಡೇ, ಆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನನ್ನನ್ನು ಆಹ್ವಾನಿಸಲು ಬಂದಿದ್ದ.

    ಗೆಜ್ಜೆ ಬಿಚ್ಚಿ ಇರಿಸಿದ ದಿನಗಳವು. ಎಂದರೆ ವಾರ್ಷಿಕ ತಿರುಗಾಟ ಮುಗಿಸಿಕೊಂಡು, ‘ಪತ್ತನಾಜೆ’ಗೆ, ದೇವಸ್ಥಾನಕ್ಕೆ ಪೆಟ್ಟಿಗೆ ಸಹಿತ ಹಿಂದಿರುಗಿದ ಮೇಲೆ, ಮುಂದೆ ‘ದೀಪಾವಳಿ’ ತರುವಾಯವೇ ಆಟ-ತಿರುಗಾಟ ಪ್ರಾರಂಭವಾಗುವುದು ಮೇಳದ ಕಟ್ಟಳೆಯಾಗಿತ್ತು. ಈ ಸಂಪ್ರದಾಯವನ್ನು ಮೀರುವುದು ಸಾಧ್ಯವಿರಲಿಲ್ಲ. ಈ ವಿಚಾರ ತಿಳಿದಿದ್ದ ಗೋಪಾಲಕೃಷ್ಣ, ‘ಇದು ಮೇಳ ಅಲ್ಲ, ತಿರುಗಾಟವೂ ಅಲ್ಲ, ಕೆಲವು ಕಲಾವಿದರನ್ನು (ವೇಷಧಾರಿಗಳು) ವೇಷಭೂಷಣ- ಕಿರೀಟ ಇತ್ಯಾದಿ ಸಲಕರಣೆಗಳನ್ನು ಎರವಲು ಪಡೆದುಕೊಂಡು ಹೋಗುತ್ತಿರುವುದು’ ಎಂದಿತ್ಯಾದಿಯಾಗಿ ವಿವರಣೆ ನೀಡಿ ಮೇಳದ ಕೃಪಾ ಪೋಷಕರಾದ ಧರ್ಮಾಧಿಕಾರಿಗಳ ಅಪ್ಪಣೆ ಪಡೆದುಕೊಂಡಿದ್ದ. ಇನ್ನೊಂದು ಪ್ರಬಲವಾದ ಕಾರಣವೆಂದರೆ, ‘ಜಗದ್ವಿಖ್ಯಾತ ಮೈಸೂರು ದಸರಾ’ದಲ್ಲಿ ಆಟ ಆಡಲು ಮೈಸೂರು ಸರಕಾರದ ವತಿಯಿಂದ ಬಂದ ಆಹ್ವಾನವನ್ನು ಮಾನ್ಯ ಮಾಡದೆ ಇರುವುದು ಸೌಜನ್ಯವಲ್ಲ-200 ವರ್ಷಗಳ ಹಿಂದೊಮ್ಮೆ ‘ಅರಮನೆ’ಯ ಆಮಂತ್ರಣದ ಮೇರೆಗೆ, ದರ್ಬಾರ್‌ನಲ್ಲಿ ಆಡಿದ ಬಯಲಾಟದ ತರುವಾಯ ದೊರಕಿದ ಮೊದಲ ಆಹ್ವಾನ ಇದು. ಗೌರವಾಸ್ಪದ ಅಂಶ ಎಂದು ವಿವರಣೆ ನೀಡಿ, ಅವರ ಮನ ಒಲಿಸುವುದರಲ್ಲಿ ಪ.ಗೋ.ಯಶಸ್ವಿಯಾಗಿದ್ದ.

    ಪ್ರಸಂಗವನ್ನು ಎರಡು ಗಂಟೆಗಳ ಮಿತಿಯಲ್ಲಿ ಪ್ರದರ್ಶಿಸಿದ್ದಾಯಿತು. ಆಟ ಚೆನ್ನಾಗಿ ಆಯಿತು. ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು-ಯಕ್ಷಗಾನದ ಭಾಷೆಯಲ್ಲೇ ಹೇಳುವುದಾದರೆ ‘ಜಯಜಯಾ’ ಎನ್ನಿಸಿತು. (ಆ ಪ್ರಸಂಗದಲ್ಲಿ ನಾನು ಹಾಸ್ಯ ಪಾತ್ರವಹಿಸಿದ್ದೆ.) ಮರುದಿನ ಒಂದು ತಾಳಮದ್ದಲೆ ಕಾರ್ಯಕ್ರಮ. ಪಿಟೀಲು ಚೌಡಯ್ಯನವರ ‘ಅಯ್ಯನಾರ್ ಕಲಾಶಾಲೆ’ಯಲ್ಲಿ ನಡೆಯಿತು. ಹಿರಿಯ ಕವಿ ಪ್ರೊ.ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾಗಿದ್ದರು. (ಆಗ ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದ ಎಂ.ಬಿ.ಮರಕಿಣಿ ಮತ್ತು ಕೆ.ಆರ್.ಗೋಪಾಲ ಕೃಷ್ಣಯ್ಯ(ಕೀಲಾರು) ಇವರ ಕೋಣೆಯಲ್ಲಿ ಪ.ಗೋ. ತಾತ್ಕಾಲಿಕವಾಗಿ ಠಿಕಾಣಿ ಹೂಡಿದ್ದು ಈ ಎಲ್ಲ ಸಾಧನೆಗಳ ಹಿಂದೆ ಅವರ ಪೂರ್ಣ ಸಹಯೋಗವಿತ್ತು.)

    WD
    ದಸರೆಯ ಆಟದ ಯಶಸ್ಸಿನ ಸುದ್ದಿ ಬೆಂಗಳೂರಿಗೆ ತಲುಪುವುದು ತಡವಾಗಲಿಲ್ಲ. ಇಷ್ಟರಲ್ಲೇ ರಷ್ಯಾ ದೇಶದ (ಆಗಿನ ಯು.ಎಸ್.ಎಸ್.ಆರ್.) ಪ್ರಧಾನ ಮಾರ್ಶಲ್ ಬುಲ್ಗಾನಿನ್ ಮತ್ತು (ಸರ್ವೋಚ್ಛ ಮುಖಂಡ) ಕಾಮ್ರೇಡ್ ಕ್ರುಶ್ಚೇವ್ ಬೆಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಯಕ್ಷಗಾನ ಬಯಲಾಟವನ್ನು ಪ್ರದರ್ಶಿಸಲು ಆಹ್ವಾನ ಬರಲು, ಮತ್ತೊಮ್ಮೆ ಪ.ಗೋ. ಚುರುಕಾಗಿ ಓಡಾಡಿದ. ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ನಡೆದ ಸಾಂಸ್ಕೃತಿಕ ಸಂಜೆಯಲ್ಲಿ ‘ದಕ್ಷಯಜ್ಞ’ ಪ್ರಸಂಗವನ್ನು ಆಡಿ ತೋರಿಸುವುದಕ್ಕೆ 10 ನಿಮಿಷಗಳ ಕಾಲಾವಧಿಯನ್ನು ನಿಗದಿ ಮಾಡಿದ್ದರು! ( ಆ ರಸ ಸಂಜೆಯಲ್ಲಿನ ಕಾರ್ಯಕ್ರಮಗಳಲ್ಲಿ 10 ನಿಮಿಷದ ಕಾಲಾವಧಿ ವೀಣೆ ದೊರೆಸ್ವಾಮಿಯವರ ಪಂಚವೀಣಾವಾದನಕ್ಕೂ, ಜೌಡಯ್ಯನವರ ಪಿಟೀಲಿಗೂ ದೊರಕಿದ್ದು. ಮೂರನೇ 10 ನಿಮಿಷ ಅವಧಿಯ ಕಾರ್ಯಕ್ರಮವೆಂದರೆ ನಮ್ಮ ದಕ್ಷಯಜ್ಞ ಬಯಲಾಟವೇ. ಚಿತ್ ರ: ಮೈಸೂರು ಸರಕಾರದಿಂದ ಬಂದಿರುವ ಆಮಂತ್ರಣ ಪತ್ರ.).

    ಗೋಪಾಲಕೃಷ್ಣನಿಗಿದ್ದ ಸಿನಿಮಾ ತಯಾರಿಕೆಯ ಅನುಭವದಿಂದ ಒಂದು ಕ್ಷಣವನ್ನೂ ವ್ಯರ್ಥಗೊಳಿಸದೆ ಹತ್ತೇ ನಿಮಿಷಗಳ ಕಾಲಾವಧಿಯಲ್ಲಿ ‘ದಕ್ಷಯಜ್ಞ’ ಕಥಾ ಭಾಗದ ಪ್ರಮುಖ ಘಟನೆಯನ್ನು ಆಡಿ ತೋರಿಸುವುದು ಸಾಧ್ಯವಾಯಿತು- ಅಷ್ಟೇ ಅಲ್ಲದೆ ಆಟದ ಪ್ರದರ್ಶನವನ್ನು ನೋಡಿ ವಿದೇಶೀ ಅತಿಥಿಗಳೂ, ಸಾವಿರಾರು ಪ್ರೇಕ್ಷಕರೂ ಸಂತೋಷ ಭರಿತರಾದರು. ವಿಠಲ ಶಾಸ್ತ್ರಿಗಳು ಈಶ್ವರನ ಪಾತ್ರದಲ್ಲಿ, ಕೋಳ್ಯೂರು ರಾಮಚಂದ್ರ ಪಾರ್ವತಿಯಾಗಿ, ಬಣ್ಣದ ಮಾಲಿಂಗ ವೀರಭದ್ರನಾಗಿ ನೀಡಿದ ಅಭಿನಯ, ಆ ಚೆಂಡೆಮದ್ದಲೆ, ತಾಳ-ಚಕ್ರತಾಳಗಳ ಹಿಮ್ಮೇಳ, ದೀವಟಿಗೆ, ದೊಂದಿ-ರಾಳದ ಹುಡಿಹಾರಿಸಿದ ಕುಣಿತ ಅದ್ಬುತವಾಗಿತ್ತು. ಅತಿಥಿ ಕ್ರುಶ್ಚೇವ್ ಕುಳಿತಲ್ಲಿಂದ ಎದ್ದು ರಂಗಸ್ಥಳದ ಮೇಲೆ ಬಂದು ಕಲಾವಿರ ಕೈಕುಲುಕಿ ಅಭಿನಂದಿಸಿದರು. ಫೋಟೋ ತೆಗೆಸಿದರು. (ದಿನಾಂಕ 29-11-55ರ ತಾಯಿನಾಡು ದಿನ ಪತ್ರಿಕೆಯಲ್ಲಿ ಈ ಚಿತ್ರ ಪ್ರಕಟವಾಯಿತು.)

    ಮರುದಿನ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪೆರ್ವೋಡಿ ಸಂಕಯ್ಯ ಭಾಗವತ ವಿರಚಿತ ಪ್ರಸಂಗವನ್ನೂ, ರಾತ್ರೆ ಮಲ್ಲೇಶ್ವರದ ಕೆನರಾ ಹಾಲ್‌ನಲ್ಲಿ ಕರ್ಣಾವಸಾನ ಪ್ರಸಂಗವನ್ನೂ ಆಡಿ ತೋರಿಸುವ ಮೂಲಕ ಮೈಸೂರು ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ದಕ್ಷಿಣ ಕನ್ನಡದ ‘ಯಕ್ಷಗಾನ ಬಯಲಾಟ’ಕ್ಕೊಂದು ಸ್ಥಿರವಾದ ಸ್ಥಾನ ದೊರಕುವಂತಾಯಿತು. ಈ ರೀತಿ, ಬೆಂಗಳೂರು-ಮೈಸೂರಲ್ಲಿ ಯಕ್ಷಗಾನ ಬಯಲಾಟದ ಕೇಳಿ ಬಡಿದ ಮೊದಲಿಗ ಪ.ಗೋಪಾಲಕೃಷ್ಣ ಎಂಬುದೂ, ಆತ ನನ್ನ ಸಹೋದರ ಎಂಬುದೂ ನನಗೊಂದು ಹೆಮ್ಮೆಯ ವಿಚಾರವಾಗಿರುತ್ತದೆ.

    ಮುಂದೆ ಪ.ಗೋ. ನೇತೃತ್ವದಲ್ಲಿ, ಭಾರತ ಸರಕಾರದ ಆಹ್ವಾನದ ಮೇರೆಗೆ ದೆಹಲಿಯಲ್ಲಿ ಕೂಡ ಬಯಲಾಟ ಪ್ರದರ್ಶನ ನಡೆಯಿತು. ಸುಪ್ರಸಿದ್ಧ ಆಂಗ್ಲ ಸಾಪ್ತಾಹಿಕ ‘ಇಲೆಸ್ಟ್ರೇಟೆಡ್ ವೀಕ್ಲಿ’ ಮೊದಲಾದ ಪತ್ರಿಕೆಗಳಲ್ಲಿ ವಿಸ್ತೃತವಾದ ಸಚಿತ್ರ ಬರಹಗಳೂ ಪ್ರಕಟವಾದವು. ಆಕಾಶವಾಣಿಯಲ್ಲಿ ಅನೇಕ ತಾಳಮದ್ದಳೆ ಕಾರ್ಯಕ್ರಮಗಳನ್ನು ಸಹ ಪ.ಗೋ.ಬಿತ್ತರಿಸಿದರು.

    ಪದ್ಯಾಣ ಗೋಪಾಲಕೃಷ್ಣ (ಪ.ಗೋ.) (1928-1997)

    WD
    ಪದ್ಯಾಣ ಗೋಪಾಲಕೃಷ್ಣ ಅವರ ಹುಟ್ಟೂರು ದಕ್ಷಿಣ ಕನ್ನಡ ಮತ್ತು ಈಗಿನ ಕಾಸರಗೋಡು ಜಿಲ್ಲೆಗಳ ಗಡಿಯಂಚಿನಲ್ಲಿರುವ ಅಡ್ಯನಡ್ಕ. 1928ರಲ್ಲಿ ಜನಿಸಿದ ಅವರು 1956ರಲ್ಲಿ ಕನ್ನಡ ದಿನ ಪತ್ರಿಕೆ ‘ವಿಶ್ವ ಕರ್ನಾಟಕ’ ಮುಖಾಂತರ ಬೆಂಗಳೂರಿನಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ. ಮುಂದೆ ತಾಯಿನಾಡು, ಕಾಂಗ್ರೆಸ್ ಸಂದೇಶ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದರು. ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ ‘ಶಕ್ತಿ’ ಪತ್ರಿಕೆಯ ಬೆಂಗಳೂರಿನ ವರದಿಗಾರರಾಗಿದ್ದವರು ಪ.ಗೋ.

    1959 ರ ಸುಮಾರಿಗೆ ಮಂಗಳೂರಿಗೆ ಬಂದು ನೆಲಸಿ ನವಭಾರತ, ಕನ್ನಡವಾಣಿ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿ, ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಡೆಕ್ಕನ್ ಪತ್ರಿಕೆಗಳ ಮಂಗಳೂರು ವರದಿಗಾರರಾಗಿ ಮುಂದುವರಿದರು. 1963-1964 ರಲ್ಲಿ ಮಂಗಳೂರಿನಲ್ಲಿ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ “ವಾರ್ತಾಲೋಕ”ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗುವ ಮೂಲಕ, ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. 1994 ರಲ್ಲಿ ಕಾರ್ಯನಿರತ ಪತ್ರಿಕೋದ್ಯಮದಿಂದ ನಿವೃತ್ತಿ ಹೊಂದುವ ಮೊದಲು ತಮ್ಮ ಒಂಬತ್ತು ವರ್ಷಗಳನ್ನು ಇಂಗ್ಲಿಷ್ ಪತ್ರಿಕಾರಂಗದ ‘ಟೈಮ್ಸ್ ಆಫ್ ಇಂಡಿಯಾ’ಕ್ಕೆ ಸಲ್ಲಿಸಿ ಪತ್ರಿಕಾರಂಗಕ್ಕೆ ವಿದಾಯ ಹೇಳಿದರೂ ಅಂಕಣ ಬರವಣಿಗೆಯನ್ನು ಕೊನೆ ತನಕ ಮುಂದುವರಿಸಿ ದಿನಾಂಕ 10-8-1997ರಂದು ಈ ಪ್ರಪಂಚಕ್ಕೆ ವಿದಾಯ ಹೇಳಿದರು.

    1956 ರಿಂದ 1997ನೇ ಇಸವಿವರೆಗೆ ನಾಲ್ಕು ದಶಕಗಳಷ್ಟು ದೀರ್ಘ ಕಾಲವಧಿಯಲ್ಲಿ ಹಲವಾರು ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಪ.ಗೋ. ಬರೆದ ಅಂಕಣ ಸಾಹಿತ್ಯವು ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದೆ. ಬೆಳ್ಳಿಯ ಸೆರಗು ಎಂಬ ಸಾಮಾಜಿಕ ಕಾದಂಬರಿ, ಗನ್ ಬೋ ಸ್ಟ್ರೀಟ್ ಎಂಬ ಮತ್ತು ಓ.ಸಿ.67 ಎಂಬ ಪತ್ತೇದಾರಿ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ ಹೆಗ್ಗಳಿಕೆ ಅವರದ್ದು.

    ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾನ್ಯತೆ ಪಡೆದು ಕರ್ನಾಟಕ ರಾಜ್ಯ ವಾರ್ತಾ ಮತ್ತು ವಿದ್ಯುತ್ ಸಚಿವರಿಂದ ವಿಧ್ಯುಕ್ತವಾಗಿ ಉದ್ಘಾಟಿಸಿ 6 ಅಕ್ಟೋಬರ್ 1976ರಂದು ಪ್ರಾರಂಭಗೊಂಡ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಸದಸ್ಯ ಹಾಗೂ ಸಂಘದ ಪ್ರಥಮ ಕಾರ್ಯದರ್ಶಿಯಾಗಿದ್ದವರು ಪ.ಗೋಪಾಲಕೃಷ್ಣ. ಪ್ರತಿ ವರ್ಷ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆಗಾಗಿ ಪ.ಗೋ. ಪ್ರಶಸ್ತಿ ನೀಡಲಾಗುತ್ತಿರುವುದೂ ಇಲ್ಲಿ ಸ್ಮರಣಾರ್ಹ.
    ವೆಬ್ದುನಿಯಾವನ್ನು ಓದಿ
    ಸುದ್ದಿಗಳುಸ್ಯಾಂಡಲ್ ವುಡ್ಕ್ರಿಕೆಟ್‌ ಸುದ್ದಿಜ್ಯೋತಿಷ್ಯಜನಪ್ರಿಯ..

    ಓದಲೇಬೇಕು
    ನಟ ಜಗ್ಗೇಶ್ ಪುತ್ರನಿಗೆ ಆಕ್ಸಿಡೆಂಟ್
    ಸುಖಾಂತ್ಯವಾಯ್ತು ಕಿರಿಕ್ ಪಾರ್ಟಿ ಹಾಡಿನ ವಿವಾದ
    ಅರವಿಂದ್ ಕಣ್ಣೀರಿಟ್ಟಿದ್ದಾದ್ರು ಯಾಕೆ?
    ನಟ ಜಗ್ಗೇಶ್ ಪುತ್ರ ಗುರುರಾಜ್ ಕಾರು ಅಪಘಾತ
    ಸಂಪ್ರದಾಯ ಮೀರಿ ಪತಿಯ ಅಂತ್ಯ ಸಂಸ್ಕಾರ ಮಾಡಿದ ಮಂದಿರಾ ಬೇಡಿ
    ಎಲ್ಲವನ್ನೂ ನೋಡು ತಾಜಾ
    ನಟ ‘ಸಂಚಾರಿ’ ವಿಜಯ್ಗೆ ಗೌರವ ಸಲ್ಲಿಸಿದ ಅಮೆರಿಕದ ಫ್ರಾಂಕ್ಲಿನ್ ಥಿಯೇಟರ್
    ಕೊರಿಯನ್ ಯುವತಿಯ ಹಾಡು ಕೊನೆಗೂ ಪವರ್ ಸ್ಟಾರ್ ಪುನೀತ್ ಕಿವಿ ಮುಟ್ಟಿತು!
    ಆಂಜನೇಯನ ತೋರಿಸಲಾಗದ ಬೇಸರದಲ್ಲಿ ನಟ ಅರ್ಜುನ್ ಸರ್ಜಾ
    ನೋವಿನಲ್ಲಿರುವಾಗ ಸಂಭ್ರಮಿಸುವುದು ಸರಿಯಲ್ಲ: ಗೋಲ್ಡನ್ ಸ್ಟಾರ್ ಗಣೇಶ್
    ಪವರ್ ಸ್ಟಾರ್ ಪುನೀತ್ ಜೇಮ್ಸ್ ಫೈಟಿಂಗ್ ಗೆ ಮುಹೂರ್ತ ಫಿಕ್ಸ್

    ಮುಖ್ಯ ಪುಟ | ನಮ್ಮ ಬಗ್ಗೆ | ಜಾಹೀರಾತು | ಹಕ್ಕುನಿರಾಕರಣೆ | ನಮ್ಮನ್ನು ಸಂಪರ್ಕಿಸಿ
    Copyright 2021, Webdunia.com

LEAVE A REPLY

Please enter your comment!
Please enter your name here

Most Popular

Recent Comments