“ಪಾರ್ತಿಸುಬ್ಬ – ಬದುಕು ಬರಹ”
ಕವಿಯನ್ನು ಕುರಿತು ವಿಶೇಷ ಮಾಹಿತಿಗಳು ಒಂದೆಡೆ ಸಂಗ್ರಹಿತಗೊಂಡ ಕೃತಿ.
ಯಕ್ಷಗಾನ ಅಕಾಡೆಮಿ ಪ್ರಕಟಿಸಿದ ಈ ಹೊತ್ತಗೆ ಗಾತ್ರದಲ್ಲಿ ಕಿರಿದು.(142 ಪುಟ) . ಹೂರಣದಲ್ಲಿ ಹಿರಿದು.
ಕಣ್ಣೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಯಕ್ಷಗಾನ ಅಕಾಡೆಮಿ ಕಳೆದ ವರ್ಷ (2020 ಫೆಬ್ರವರಿ 13,14) ಎರಡು ದಿನಗಳ ವಿಚಾರಗೋಷ್ಠಿಯನ್ನು ನಡೆಸಿತ್ತು. ಯಕ್ಷಗಾನ ಕವಿಯೊಬ್ಬನ ಕೃತಿಗಳನ್ನು ಆಧರಿಸಿದ ವಿಶಿಷ್ಟ ಗೋ಼ಷ್ಠಿ ಇದು. ಎರಡು ದಿನಗಳ ಕಾಲ ಯಕ್ಷಗಾನದ ಹಿರಿಯ ಚಿಂತಕರುಗಳು ಪಾಲ್ಗೊಂಡು ಮಂಥನ ನಡೆಸಿದ್ದರು.ಆ ಚಿಂತನಗಳನ್ನೆಲ್ಲ ಕ್ರೋಢೀಕರಿಸಿ ಅಕಾಡೆಮಿ ಇತ್ತೀಚೆಗೆ ಪುಸ್ತಕ ಒಂದನ್ನು ಪ್ರಕಟಿಸಿದೆ.
ಈ ಗ್ರಂಥದಲ್ಲಿ ಡಾ.ಎಂ ಪ್ರಭಾಕರ ಜೋಶಿ, ಡಾ.ಪಾದೆಕಲ್ಲು ವಿಷ್ಣು ಭಟ್ಟರು, ಗಣರಾಜ ಕುಂಬ್ಳೆ, ಡಾ.ಚಂದ್ರಶೇಖರ ದಾಮ್ಲೆ, ವಾಸುದೇವ ರಂಗಾ ಭಟ್ಟರು, ಎಂ.ನಾ.ಚಂಬಲ್ತಿಮಾರ್, ಡಾ.ಯು ಶಂಕರನಾರಾಯಣ ಭಟ್ಟರು, ಡಾ.ಆನಂದರಾಮ ಉಪಾಧ್ಯ, ಡಾ.ಕೆ ಕಮಲಾಕ್ಷ, ಡಾ. ಧನಂಜಯ ಕುಂಬ್ಳೆ, ದಿವ್ಯಶ್ರೀ ಡೆಂಬಳ, ಡಾ.ಕೆ.ಎಂ.ರಾಘವ ನಂಬಿಯಾರ್ ಇವರುಗಳ ಸಂಶೋಧನಾತ್ಮಕ ಬರಹಗಳಿವೆ. ಯಕ್ಷಗಾನದ ಅಧ್ಯಯನದ ಆಸಕ್ತರಿಗೆ ಉಪಯುಕ್ತವಾದ ಆಕರ ಗ್ರಂಥ .
ಪಾರ್ತಿಸುಬ್ಬನನ್ನು ಕುರಿತ ಪ್ರೌಢ ಚಿಂತನೆಗಳುಳ್ಳ ಕೃತಿ ಯಕ್ಷಗಾನಾಸಕ್ತರೆಲ್ಲ ಸಂಗ್ರಹಿಸಿಟ್ಟುಕೊಳ್ಳಬೇಕಾದ ಕೃತಿ.
ಪ್ರಕಾಶಕರು: ಕರ್ನಾಟಕ ಯಕ್ಷಗಾನ ಅಕಡೆಮಿ ಬೆಂಗಳೂರು.
ಬೆಲೆ ರೂ 75/
ಪುಟಗಳು 142
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions