ವೇದಮೂರ್ತಿ ಚೂಂತಾರು ಲಕ್ಷ್ಮೀನಾರಾಯಣ ಭಟ್ಟರ 80ನೆಯ ಹುಟ್ಟುಹಬ್ಬದ ಸಂಭ್ರಮ ದಿನಾಂಕ 01.03.2021ನೇ ಸೋಮವಾರ ವಿವಿಧ ಧಾರ್ಮಿಕ, ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸುಳ್ಯ ತಾಲೂಕಿನ ಚೊಕ್ಕಾಡಿ ಶ್ರೀ ರಾಮ ದೇವಾಲಯದ ದೇಸಿ ಭವನದಲ್ಲಿ ಈ ಕಾರ್ಯಕ್ರಮ ದಿನ ಪೂರ್ತಿ ನಡೆಯಲಿದೆ.
ಬೆಳಿಗ್ಗೆ 6 ಘಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಬೆಳಿಗ್ಗೆ 10.30 ಘಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಆ ಸಂದರ್ಭದಲ್ಲಿ ಚೂಂತಾರು ಲಕ್ಷ್ಮೀನಾರಾಯಣ ಭಟ್ಟರ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆಯಾಗಲಿದೆ.
ಭೋಜನದ ಅನಂತರ ಮಧ್ಯಾಹ್ನ 2 ಘಂಟೆಯಿಂದ, ರಾಮಾ ಜೋಯಿಸ್ ಬೆಳ್ಳಾರೆ ಸಂಯೋಜಿಸಿದ, ಪ್ರಸಿದ್ಧ ಕಲಾವಿದರ ಕೂಡುವಿಕೆಯ “ತ್ರ್ಯಂಬಕ ರುದ್ರ ಮಹಾತ್ಮೆ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಕಾರ್ಯಕ್ರಮದ ವಿವರ ಈ ಕೆಳಗೆ ಕೊಡಲಾಗಿದೆ.
