‘ಇಲ್ಲಿ ಯಾವುದೇ ಭಿತ್ತಿಪತ್ರಗಳನ್ನು ಅಂಟಿಸಬಾರದು’ ಎಂಬ ಸೂಚನೆಯುಳ್ಳ ಬರಹದ ಸಮೀಪದಲ್ಲಿಯೇ ಭಿತ್ತಿಪತ್ರಗಳನ್ನು ಅಂಟಿಸುತ್ತಾರೆ. ಇಲ್ಲಿ ಮೂತ್ರ ಶಂಕೆ ಮಾಡಬಾರದು ಎಂದು ಬರೆದ ಬರಹದ ಬುಡದಲ್ಲಿಯೇ ಮೂತ್ರಬಾಧೆ ತೀರಿಸಿಕೊಳ್ಳುತ್ತಾರೆ. ಇದು ಕೆಲವು ಜನರ ವಿಕೃತ ಮನೋಭಾವ.
ನಿಜವಾಗಿ ನೋಡಿದರೆ ಸಾರ್ವಜನಿಕ ಸ್ಥಳಗಳಲ್ಲಿ ಇಂತಹಾ ಕೆಲಸಗಳನ್ನು ಮಾಡಬಾರದು ಎಂದು ತಿಳುವಳಿಕೆಯುಳ್ಳವರಿಗೆ ಅರ್ಥ ಆಗಬೇಕು. ಅದಕ್ಕೆ ಸೂಚನೆಯ ಅಗತ್ಯವಿಲ್ಲ.
ಆದರೆ ಸೂಚನೆಯನ್ನು ನೋಡಿಯೂ ನೋಡದವರಂತೆ ಅದನ್ನು ಉಲ್ಲಂಘಿಸುತ್ತಾರೆ ಎಂದಾದರೆ ಅದು ಉದ್ಧಟತನ. ಇಂತಹಾ ಘಟನೆಗಳಿಗೆ ನಿದರ್ಶನಗಳು ಹೇರಳ. ಇಲ್ಲಿ ಅದಕ್ಕೊಂದು ಸಾಕ್ಷಿ.
ಮಡಿಕೇರಿ -ಮಂಗಳೂರು ಹೆದ್ದಾರಿಯಲ್ಲಿ ಮಾಣಿ ಪೇಟೆಯ ಸಮೀಪ ರಸ್ತೆ ಬದಿಯಲ್ಲಿ ಸೂಚನಾ ಫಲಕವೊಂದನ್ನು ಅಳವಡಿಸಿದ್ದಾರೆ. “ನಾಗನ ಸಾನ್ನಿಧ್ಯ ಇರುವುದರಿಂದ ತ್ಯಾಜ್ಯ ವಸ್ತುಗಳನ್ನು ಎಸೆಯಬಾರದು” ಎಂದು ಸ್ಪಷ್ಟವಾಗಿ ಫಲಕದಲ್ಲಿ ಉಲ್ಲೇಖಿಸಿದ್ದಾರೆ.
ಆದರೂ ಸೂಚನಾ ಫಲಕದ ಬುಡದಲ್ಲಿಯೇ ತ್ಯಾಜ್ಯದ ರಾಶಿ ಬಂದು ಬಿದ್ದಿದೆ.(ವೀಡಿಯೋ ನೋಡಿ) ನಾಗನ ಬಗ್ಗೆ ಭಯ ಭಕ್ತಿಯಿರುವ ಆಸ್ತಿಕ ಬಂದವರು ಯಾರೂ ಈ ಕೆಲಸ ಮಾಡಲು ಸಾಧ್ಯವಿಲ್ಲ. ಅಕ್ಕಪಕ್ಕದಲ್ಲಿ ಕಸ, ತ್ಯಾಜ್ಯಗಳಿಲ್ಲ. ಈ ಬೋರ್ಡಿನ ಬುಡದಲ್ಲಿ ಮಾತ್ರ ಕಾಣುತ್ತಿದೆ. ಹಾಗಾದರೆ ಇಲ್ಲಿ ಈ ಕೆಲಸ ಮಾಡುತ್ತಿರುವವರು ಯಾರು ಎಂಬ ಪ್ರಶ್ನೆ ಈ ಪ್ರದೇಶದ ಪ್ರಜ್ಞಾವಂತ ನಾಗರಿಕರನ್ನು ಕಾಡುತ್ತಾ ಇದೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

