Friday, November 22, 2024
Homeಸುದ್ದಿಜಿಲ್ಲೆಸೂಚನಾ ಫಲಕದ ಬುಡದಲ್ಲಿಯೇ ತ್ಯಾಜ್ಯದ ರಾಶಿ - ಕಸ ಎಸೆಯುತ್ತಿರುವವರು ಯಾರು? ವೀಡಿಯೊ ನೋಡಿ 

ಸೂಚನಾ ಫಲಕದ ಬುಡದಲ್ಲಿಯೇ ತ್ಯಾಜ್ಯದ ರಾಶಿ – ಕಸ ಎಸೆಯುತ್ತಿರುವವರು ಯಾರು? ವೀಡಿಯೊ ನೋಡಿ 

‘ಇಲ್ಲಿ ಯಾವುದೇ ಭಿತ್ತಿಪತ್ರಗಳನ್ನು ಅಂಟಿಸಬಾರದು’ ಎಂಬ ಸೂಚನೆಯುಳ್ಳ ಬರಹದ ಸಮೀಪದಲ್ಲಿಯೇ ಭಿತ್ತಿಪತ್ರಗಳನ್ನು ಅಂಟಿಸುತ್ತಾರೆ. ಇಲ್ಲಿ ಮೂತ್ರ ಶಂಕೆ ಮಾಡಬಾರದು ಎಂದು ಬರೆದ ಬರಹದ ಬುಡದಲ್ಲಿಯೇ ಮೂತ್ರಬಾಧೆ ತೀರಿಸಿಕೊಳ್ಳುತ್ತಾರೆ. ಇದು ಕೆಲವು ಜನರ ವಿಕೃತ ಮನೋಭಾವ.

ನಿಜವಾಗಿ ನೋಡಿದರೆ ಸಾರ್ವಜನಿಕ ಸ್ಥಳಗಳಲ್ಲಿ ಇಂತಹಾ ಕೆಲಸಗಳನ್ನು ಮಾಡಬಾರದು ಎಂದು ತಿಳುವಳಿಕೆಯುಳ್ಳವರಿಗೆ ಅರ್ಥ ಆಗಬೇಕು. ಅದಕ್ಕೆ ಸೂಚನೆಯ ಅಗತ್ಯವಿಲ್ಲ.

ಆದರೆ ಸೂಚನೆಯನ್ನು ನೋಡಿಯೂ ನೋಡದವರಂತೆ ಅದನ್ನು ಉಲ್ಲಂಘಿಸುತ್ತಾರೆ ಎಂದಾದರೆ ಅದು ಉದ್ಧಟತನ. ಇಂತಹಾ ಘಟನೆಗಳಿಗೆ ನಿದರ್ಶನಗಳು ಹೇರಳ.  ಇಲ್ಲಿ ಅದಕ್ಕೊಂದು ಸಾಕ್ಷಿ.  

ಮಡಿಕೇರಿ -ಮಂಗಳೂರು ಹೆದ್ದಾರಿಯಲ್ಲಿ ಮಾಣಿ ಪೇಟೆಯ ಸಮೀಪ ರಸ್ತೆ ಬದಿಯಲ್ಲಿ ಸೂಚನಾ ಫಲಕವೊಂದನ್ನು ಅಳವಡಿಸಿದ್ದಾರೆ. “ನಾಗನ ಸಾನ್ನಿಧ್ಯ ಇರುವುದರಿಂದ ತ್ಯಾಜ್ಯ ವಸ್ತುಗಳನ್ನು ಎಸೆಯಬಾರದು” ಎಂದು ಸ್ಪಷ್ಟವಾಗಿ ಫಲಕದಲ್ಲಿ  ಉಲ್ಲೇಖಿಸಿದ್ದಾರೆ.

ಆದರೂ ಸೂಚನಾ ಫಲಕದ ಬುಡದಲ್ಲಿಯೇ ತ್ಯಾಜ್ಯದ ರಾಶಿ ಬಂದು ಬಿದ್ದಿದೆ.(ವೀಡಿಯೋ ನೋಡಿ) ನಾಗನ ಬಗ್ಗೆ ಭಯ ಭಕ್ತಿಯಿರುವ ಆಸ್ತಿಕ ಬಂದವರು ಯಾರೂ ಈ ಕೆಲಸ ಮಾಡಲು ಸಾಧ್ಯವಿಲ್ಲ. ಅಕ್ಕಪಕ್ಕದಲ್ಲಿ ಕಸ, ತ್ಯಾಜ್ಯಗಳಿಲ್ಲ. ಈ ಬೋರ್ಡಿನ ಬುಡದಲ್ಲಿ ಮಾತ್ರ ಕಾಣುತ್ತಿದೆ. ಹಾಗಾದರೆ ಇಲ್ಲಿ ಈ ಕೆಲಸ ಮಾಡುತ್ತಿರುವವರು ಯಾರು ಎಂಬ ಪ್ರಶ್ನೆ ಈ ಪ್ರದೇಶದ ಪ್ರಜ್ಞಾವಂತ ನಾಗರಿಕರನ್ನು ಕಾಡುತ್ತಾ ಇದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments