ತೈಲ ಸಂಸ್ಥೆಗಳು ಬುಧವಾರ ಕೂಡ ತೈಲ ಬೆಲೆಯನ್ನು ಏರಿಕೆ ಮಾಡಿದ್ದು, ಸತತ 9ನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ದರವು ಏರಿಕೆಯನ್ನು ಕಂಡಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 25 ಪೈಸೆ ಹೆಚ್ಚಾಗಿ 89.54 ರೂಪಾಯಿಗೆ ಏರಿದೆ.
ಡೀಸೆಲ್ ದರವು ಕೂಡ ಲೀಟರ್‌ಗೆ 25 ಪೈಸೆ ಏರಿಕೆಗೊಂಡು 79.95 ರೂಪಾಯಿ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್ ಮತ್ತು ರೂಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ.
ಎಲ್ಲಾ ದಿನವೂ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಸರ್ಕಾರಿ ತೈಲ ಸಂಸ್ಥೆಗಳು ಪ್ರಕಟಿಸುತ್ತವೆ. ಪೆಟ್ರೋಲ್, ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ದೇಶದ ಪ್ರಮುಖ ನಾಲ್ಕು ನಗರಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಕೆಳಗೆ ಕೊಡಲಾಗಿದೆ.
ಬೆಂಗಳೂರು – ಪೆಟ್ರೋಲ್ (ಪ್ರತಿ ಲೀಟರ್) ಫೆಬ್ರವರಿ 17: 92.54 (26 ಪೈಸೆ ಏರಿಕೆ) ಫೆಬ್ರವರಿ 16: 92.28 ಫೆಬ್ರವರಿ 15: 88.99 ಫೆಬ್ರವರಿ 14- 88.73ಡೀಸೆಲ್ (ಪ್ರತಿ ಲೀಟರ್) ಫೆಬ್ರವರಿ 17- 84.75 (26 ಪೈಸೆ ಏರಿಕೆ) ಫೆಬ್ರವರಿ 16- 84.49 ಫೆಬ್ರವರಿ 15 – 79.35 ಫೆಬ್ರವರಿ 14 – 79.06

ನವದೆಹಲಿ- ಪೆಟ್ರೋಲ್ (ಪ್ರತಿ ಲೀಟರ್) ಫೆಬ್ರವರಿ 17 – 89.54 (25 ಪೈಸೆ ಏರಿಕೆ) ಫೆಬ್ರವರಿ 19 – 89.29 ಫೆಬ್ರವರಿ 15: 88.99 ಫೆಬ್ರವರಿ 14 – 88.73 ಡೀಸೆಲ್ (ಪ್ರತಿ ಲೀಟರ್) ಫೆಬ್ರವರಿ 17 – 79.95 (25 ಪೈಸೆ ಏರಿಕೆ) ಫೆಬ್ರವರಿ 16 – 79.70 ಫೆಬ್ರವರಿ 15 – 79.35 ಫೆಬ್ರವರಿ 14 – 79.06
ಮುಂಬೈ – ಪೆಟ್ರೋಲ್ (ಪ್ರತಿ ಲೀಟರ್) ಫೆಬ್ರವರಿ 17 – 96.00 (25 ಪೈಸೆ ಏರಿಕೆ) ಫೆಬ್ರವರಿ 16 – 95.75 ಫೆಬ್ರವರಿ 15 – 95.46 ಫೆಬ್ರವರಿ 14 – 95.21 ಡೀಸೆಲ್ (ಪ್ರತಿ ಲೀಟರ್) ಫೆಬ್ರವರಿ 17 – 86.98 (26 ಪೈಸೆ ಏರಿಕೆ) ಫೆಬ್ರವರಿ 16 – 86.72 ಫೆಬ್ರವರಿ 15 – 86.34 ಫೆಬ್ರವರಿ 14 – 86.04
ಚೆನ್ನೈ – ಪೆಟ್ರೋಲ್ (ಪ್ರತಿ ಲೀಟರ್) ಫೆಬ್ರವರಿ 17 – 91.68 (16 ಪೈಸೆ ಏರಿಕೆ) ಫೆಬ್ರವರಿ 16 – 91.45 ಫೆಬ್ರವರಿ 15 – 91.19 ಫೆಬ್ರವರಿ 14 – 90.96 ಡೀಸೆಲ್ (ಪ್ರತಿ ಲೀಟರ್) ಫೆಬ್ರವರಿ 17 – 85.01 (18 ಪೈಸೆ ಏರಿಕೆ) ಫೆಬ್ರವರಿ 16 – 84.77 ಫೆಬ್ರವರಿ 15 – 84.44 ಫೆಬ್ರವರಿ 14 – 84.1