“ತಾಳಮದ್ದಳೆಯೆಂಬುದು ಬಯಲಾಟದ ಇನ್ನೊಂದು ರೂಪ. ಬಯಲಾಟದಿಂದ ಆಹಾರ್ಯವನ್ನೂ ನೃತ್ಯವನ್ನೂ ಕಳೆದುಳಿದ ಸ್ವರೂಪವೇ ತಾಳಮದ್ದಳೆ. ತಾಳಮದ್ದಳೆ ಮೊದಲು ಹುಟ್ಟಿಕೊಂಡಿತೋ ಬಯಲಾಟ ಮೊದಲು ಹುಟ್ಟಿಕೊಂಡಿತೋ ಎಂಬ ಬಗ್ಗೆ ವಿದ್ವಾಂಸರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ.
ಈಗ ನಮಗೆ ಯಾವುದೋ ಒಂದು ರೂಪದಲ್ಲಿ ಕಾಣಸಿಕ್ಕುವ ಜನಪದ ಕಲೆಗಳ ಆದಿರೂಪ ಮತ್ತು ಉಗಮಕಾಲವನ್ನು ಖಚಿತವಾಗಿ ಕಂಡುಕೊಳ್ಳುವುದು ಸಾಧ್ಯವಾಗದ ಸಂಗತಿ. ಒಂದು ಕಲಾರೂಪದಿಂದ ಇನ್ನೊಂದು ಕಲಾರೂಪವು ಹುಟ್ಟಿಕೊಂಡಿತೆಂದು ಭಾವಿಸುವುದು ಅಸಾಧ್ಯವಲ್ಲವಾದರೂ ಯಕ್ಷಗಾನದ ಸಂದರ್ಭದಲ್ಲಿ ಬಯಲಾಟ ಮತ್ತು ತಾಳಮದ್ದಳೆ ಎರಡೂ ಪರಂಪರಾಗತವಾಗಿ ಉಳಿದುಕೊಂಡು ಬಂದಿವೆಯೆಂಬುದರಿಂದ ಎರಡೂ ಬೇರೆಬೇರೆಯಾಗಿಯೇ ಗೌರವಿಸಲ್ಪಡುವ ಅಥವಾ ಗುರುತಿಸಲ್ಪಡುವ ಖಚಿತ ಕಲಾರೂಪಗಳೆಂಬುದನ್ನು ಹೇಳಲೇಬೇಕಾಗುತ್ತದೆ.
ಇವೆರಡರಲ್ಲಿ ಒಂದರಿಂದ ಇನ್ನೊಂದು ಹುಟ್ಟಿರಬಹುದಾದರೂ ಒಂದು ಇನ್ನೊಂದನ್ನು ಬದಿಗೆ ತಳ್ಳಿಲ್ಲ. ಹೇಗಿದ್ದರೂ ಬಯಲಾಟವು ಈ ಕಲೆಯ ಪರಿಪೂರ್ಣರೂಪ. ತಾಳಮದ್ದಳೆಯು ಆಂಶಿಕರೂಪವೇ ಆದರೂ ಬಯಲಾಟದಂತೆಯೇ ಇದೂ ಪರಿಣಾಮಕಾರಿಯಾದ ಕಲೆಯೇ ಆಗಿದೆ. ತನ್ನದೇ ಆದ ಒಂದು ಸ್ವಸಂಪೂರ್ಣಸ್ವರೂಪ ಇದಕ್ಕಿದೆ. (ಡಾ. ಪಾದೇಕಲ್ಲು ವಿಷ್ಣು ಭಟ್ಟರ ‘ಯಕ್ಷಗಾನಾಧ್ಯಯನ’ ಗ್ರಂಥದ ೭೯ನೇ ಪುಟದಲ್ಲಿ)
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions