Thursday, November 21, 2024
Homeಪುಸ್ತಕ ಮಳಿಗೆಲೇಖಕ, ಕಲಾವಿದನ ಕಲ್ಪನೆಯಲ್ಲಿ ತೇಲಿಬಂದ 'ಮುಸ್ಸಂಜೆಯ ಹೊಂಗಿರಣ' - ಕೊರೋನಾ ಪೊಸಿಟಿವ್ ಭಯದ  ನಡುವೆಯೂ ನಾ.ಕಾರಂತರ...

ಲೇಖಕ, ಕಲಾವಿದನ ಕಲ್ಪನೆಯಲ್ಲಿ ತೇಲಿಬಂದ ‘ಮುಸ್ಸಂಜೆಯ ಹೊಂಗಿರಣ’ – ಕೊರೋನಾ ಪೊಸಿಟಿವ್ ಭಯದ  ನಡುವೆಯೂ ನಾ.ಕಾರಂತರ ಧನಾತ್ಮಕ ಕೃತಿ 

ನಿರಾತಂಕವಾಗಿ ಎಗ್ಗಿಲ್ಲದೆ ಸಾಗುತ್ತಿದ್ದ ಬದುಕಿನಲ್ಲಿ ದಿಢೀರನೆ ಕಷ್ಟ ಕಾರ್ಪಣ್ಯಗಳು ಬಂದೆರಗಿ ದಾರಿ ಅಸ್ಪಷ್ಟವಾಗಿ, ಜೀವನವು ಸಂಜೆಯ ಪಥದತ್ತ ಸಾಗುತ್ತಿರುವಾಗ ಎಲ್ಲಿಂದಲೋ ಬಂದ ನೇಸರನ ಸಂಜೆಯ ಕಿರಣಗಳು ಪಥವನ್ನು ತೋರಿ ಮುನ್ನುಗ್ಗಲು ಪ್ರೇರಣೆಯಾಗುತ್ತವೆ. ಲೇಖಕ, ಕಲಾವಿದ ನಾ. ಕಾರಂತ ಪೆರಾಜೆಯವರ ‘ಮುಸ್ಸಂಜೆಯ ಹೊಂಗಿರಣ’ ಎಂಬ ಕೃತಿಯೂ ಕೂಡಾ ಅದೇ ರೀತಿಯ ಸಂದೇಶವನ್ನು ಸಾರುತ್ತದೆ. ಕೃತಿಯ ಹೆಸರಿನಂತೆ ಸಂಜೆಯ ಹೊತ್ತಿನಲ್ಲಿಯೂ ನಮಗೆ ಬದುಕುವ ದಾರಿ ತೋರುವ ಹಲವಾಲು ಕಿರಣ ಸದೃಶ ಸಂಗತಿಗಳು ಇವೆ. ಆದರೆ ನೋಡುವ ಒಳಗಣ್ಣಿನ ಶಕ್ತಿ ಬೇಕು. ಕಾರಂತರ ಒಳಗಣ್ಣಿನ ನೋಟಕ್ಕೆ ಅಂತಹಾ ಹಲವಾರು ಸಂಗತಿಗಳು ಗೋಚರಿಸಿವೆ. ಅದನ್ನೇ ಅವರು ಒಂದು ಸುಂದರ ಕೃತಿಯ ರೂಪದಲ್ಲಿ ಹೊರತಂದಿದ್ದಾರೆ. 

ಆ ಪುಸ್ತಕಕ್ಕೆ ‘ಮುಸ್ಸಂಜೆಯ ಹೊಂಗಿರಣ’ ಎಂಬ ಸುಂದರವಾದ ಅನ್ವರ್ಥನಾಮವನ್ನೇ ಇರಿಸಿದ್ದಾರೆ. ಕೊರೋನಾ ಭಯದಿಂದ ಲೋಕವೇ ಭಯದಿಂದ ಮುದುಡಿ ಮನೆಯ ಕೋಣೆ ಸೇರಿದ ಸಂದರ್ಭದಲ್ಲಿ ಹಲವು ಮನಸ್ಸುಗಳು ಧನಾತ್ಮಕವಾಗಿ ಚಿಂತಿಸಿದ್ದು ಮಾತ್ರವಲ್ಲದೆ ಆ ಯೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸಿದುವು. ಅಂತಹಾ ಹಲವಾರು ನೈಜ ಘಟನೆಗಳ ಗೊಂಚಲಾಗಿ ಈ ಕೃತಿ ಮೂಡಿಬಂದಿದೆ. ಕೊರೋನಾ ಪಾಸಿಟಿವ್ ಭಯದಲ್ಲಿಯೂ ಧನಾತ್ಮಕ ಯೋಚನೆ (Positive thinking) ಹೇಗೆ ಮಾಡಹುದೆಂಬುದನ್ನು ಈ ಪುಸ್ತಕ ತಿಳಿಸಿಕೊಡುತ್ತದೆ. ಈ ಗ್ರಂಥ ನಾ. ಕಾರಂತರ ಒಂದು ಉತ್ತಮ ಪ್ರಯತ್ನದ ಫಲ. ಋಣಾತ್ಮಕ ವಿಚಾರಗಳ ನಡುವೆಯೂ ಧನಾತ್ಮಕವಾಗಿ ಹೇಗೆ ಕೆಲಸ ಮಾಡಬಹುದೆಂಬ ನಿರ್ದೇಶನವನ್ನು ನೀಡುತ್ತದೆ. 

ಪುಸ್ತಕದ ಲೇಖಕರ ವಿಳಾಸ: ನಾ ಕಾರಂತ ಪೆರಾಜೆ, ಉಪಸಂಪಾದಕರು, ಅಡಿಕೆ ಪತ್ರಿಕೆ, ಭಟ್ಸ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು (ಫೋನ್: 9448625794)

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments