ಇಂತಹುದೇ ವೇಷ ಎಂದು ಬ್ರಾಂಡ್ ಆಗದ ಕಲಾವಿದರು ನಮ್ಮ ನಡುವೆ ಹಲವಾರು ಮಂದಿ ಇದ್ದಾರೆ. ಒಂದು ವೇಳೆ ಬ್ರಾಂಡ್ ಆದರೂ ಬೇರೆ ವೇಷಗಳನ್ನೂ ನಿರ್ವಹಿಸುವ ಸಾಮರ್ಥ್ಯ ಇರುವ ಕಲಾವಿದರೂ ಇದ್ದಾರೆ. ಧರ್ಮಸ್ಥಳ ಮೇಳದ ಕಲಾವಿದ ಶ್ರೀ ಹರೀಶ್ ಶೆಟ್ಟಿ ಮಣ್ಣಾಪು ಅಂತಹವರಲ್ಲಿ ಒಬ್ಬರು. ಪ್ರಸ್ತುತ ಬಣ್ಣದ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದರೂ ಹರೀಶ್ ಶೆಟ್ಟಿಯವರು ಎದುರು ವೇಷ ಅಥವಾ ಕಿರೀಟ ವೇಷ, ಪೀಠಿಕೆ ವೇಷಗಳನ್ನೂ ಮಾಡುತ್ತಾರೆ.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ಎಲ್ಲಾ ರೀತಿಯ ವೈವಿಧ್ಯಮಯ ಬಣ್ಣದ ವೇಷಗಳನ್ನು ನಿರ್ವಹಿಸುವ ಹರೀಶ್ ಶೆಟ್ಟಿ ಮಣ್ಣಾಪು ಹಿರಣ್ಯಾಕ್ಷನ ಪಾತ್ರವನ್ನೂ ಮಾಡುತ್ತಾರೆ. ವಿಶ್ವಾಮಿತ್ರ ಮೇನಕೆಯಲ್ಲಿ ರಾಜಾ ಕೌಶಿಕನ ಪಾತ್ರವನ್ನೂ ನಿರ್ವಹಿಸುತ್ತಾರೆ. ದೇವೇಂದ್ರನ ಪಾತ್ರವನ್ನೂ ಮಾಡಬಲ್ಲರು. ಬಣ್ಣದ ವೇಷಧಾರಿಯೊಬ್ಬರು ಈ ರೀತಿಯ ಪಾತ್ರಗಳನ್ನೂ ಮಾಡುವವರು ಬಹಳ ಅಪರೂಪ. ಇಂತಹವರ ಸಂಖ್ಯೆ ಕೇವಲ ಬೆರೆಳೆಣಿಕೆಯಲ್ಲಿ ಮಾತ್ರ. ಇತ್ತೀಚಿಗೆ ಒಂದೆರಡು ತಿಂಗಳುಗಳ ಹಿಂದೆ ವಿವಾಹಿತರಾದ ಹರೀಶ್ ಶೆಟ್ಟಿ ಮಣ್ಣಾಪು ಅವರಿಗೆ ವೈವಾಹಿಕ ಜೀವನದ ಶುಭ ಹಾರೈಕೆಗಳು.

