ಯಕ್ಷಮಿತ್ರರು ಕೈಕಂಬ, ಬಿ.ಸಿ. ರೋಡ್ ಇವರ ವತಿಯಿಂದ ದಿನಾಂಕ 29. 01. 2021ರಂದು ನಡೆದ ಶ್ರೀ ಕೋದಂಡರಾಮ ಕೃಪಾಶ್ರಿತ ಯಕ್ಷಗಾನ ಮಂಡಳಿಯ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ, ಪ್ರಸ್ತುತ ಹಲವಾರು ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ಕಲಾ ಸೇವೆ ಸಲ್ಲಿಸುತ್ತಿರುವ ಶ್ರೀ ಪೆರ್ಲ ಜಗನ್ನಾಥ ಶೆಟ್ಟಿ ಅವರನ್ನು ಯಕ್ಷಮಿತ್ರರು ಕೈಕಂಬ, ಬಿ.ಸಿ. ರೋಡ್ ಇವರು ಸನ್ಮಾನಿಸಿದರು.

ಸನ್ಮಾನಕ್ಕೆ ಉತ್ತರಿಸುತ್ತಾ ಯಕ್ಷಗಾನದ ಆಗುಹೋಗುಗಳ ಬಗ್ಗೆ ಹಾಗೂ ತನ್ನ ಹಿಂದಿನ ಕಲಾ ಜೀವನದ ಬಗ್ಗೆ ಪೆರ್ಲ ಜಗನ್ನಾಥ ಶೆಟ್ಟಿಯವರು ಪ್ರಾಮಾಣಿಕವಾಗಿ ತನ್ನ ಮನದಾಳವನ್ನು ಪ್ರೇಕ್ಷಕರೆದುರು ತೆರೆದಿಟ್ಟರು.