ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರು ಯಕ್ಷಗಾನದ ಬಡಗುತಿಟ್ಟಿನ ಅತ್ಯುತ್ತಮ ಕಲಾವಿದರಲ್ಲೊಬ್ಬರು. ಪ್ರಸ್ತುತ ಅನೇಕ ವರ್ಷಗಳಿಂದ ಶ್ರೇಷ್ಠ ತರಬೇತುದಾರರಾಗಿ ಗುರುತಿಸಿಕೊಂಡಿದ್ದಾರೆ. ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದನಾಗಿ ಮೇಳಗಳಲ್ಲಿ ತಿರುಗಾಟ ನಡೆಸಿದವರು. ನಾಟ್ಯ, ರಂಗತಂತ್ರ, ಭಾಗವತಿಕೆಯನ್ನು ಸಮರ್ಥರಿಂದಲೇ ಅಭ್ಯಸಿಸಿ ಕಲಾ ಸೇವೆಯನ್ನು ಮಾಡಿದ ಕಲಾವಿದರಿವರು. ಖ್ಯಾತ ಭಾಗವತರಾದ ಕಡತೋಕಾ ಶ್ರೀ ಮಂಜುನಾಥ ಭಾಗವತರು, ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರ ಪ್ರತಿಭೆ, ಸಾಹಸವನ್ನು ಗುರುತಿಸಿ ‘ಆಲ್ರೌಂಡರ್ ಕಲಾವಿದ’ ಎಂದೇ ಕರೆಯುತ್ತಿದ್ದರಂತೆ.
ಯಕ್ಷಗಾನ ನಾಟ್ಯವನ್ನು ಶಿರಳಗಿ ಮಂಜುನಾಥ ಭಟ್ಟರಿಂದಲೂ ರಂಗತಂತ್ರವನ್ನು ಹೊಸ್ತೋಟ ಶ್ರೀ ಮಂಜುನಾಥ ಭಾಗವತರಿಂದಲೂ, ಭಾಗವತಿಕೆಯನ್ನು ಬಾಳೆಹದ್ದ ಕೃಷ್ಣ ಭಾಗವತರಿಂದಲೂ ಅಭ್ಯಸಿಸಿದ್ದರು. 2008ರಿಂದ ತೊಡಗಿ ಕಳೆದ ಹನ್ನೊಂದು ವರ್ಷಗಳಿಂದ ಶಿವಮೊಗ್ಗ ವಾಸಿಯಾಗಿ ಅಲ್ಲಿನ ಕಲಿಕಾಸಕ್ತರಿಗೆ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದಾರೆ. ತೆರೆದು ಕಾಣಿಸಿಕೊಳ್ಳದೆ ಸದಾ ಮುಚ್ಚಿಕೊಳ್ಳುವ ಸ್ವಭಾವ ಇವರದು. ಹಾಗಾಗಿಯೇ ಪ್ರಚಾರದಿಂದ ದೂರ ಉಳಿದರೇನೋ ಎಂದೆನಿಸಿದರೆ ತಪ್ಪಾಗಲಾರದು. “ಅವರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಪ್ರಚಾರವನ್ನು ಬಯಸದೆ, ಇದು ನನಗೆ ಕರ್ತವ್ಯ ಎಂಬಂತೆ ತೊಡಗಿಸಿಕೊಂಡಿದ್ದಾರೆ. ಉತ್ತಮ ಕಲಾವಿದನೂ ಹೌದು. ಗುರುವೂ ಹೌದು. ಅವರ ಬಗೆಗೆ ಬರೆಯಲೇ ಬೇಕು” ಇದು ಬಡಗುತಿಟ್ಟಿನ ಅನೇಕ ಕಲಾವಿದರು ನನ್ನೊಡನೆ ಹೇಳಿದ ಮಾತುಗಳು.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ
ಅವರ ಈ ನುಡಿಗಳೇ ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರ ಪ್ರತಿಭೆ, ಪ್ರಯತ್ನಗಳಿಗೆ ಹಿಡಿದ ಕೈಗನ್ನಡಿ. ಇದು ಅವರಿಗೆ ಸಂದ ಶ್ರೇಷ್ಠ ಪ್ರಶಸ್ತಿಯೂ ಹೌದು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಐನಬೈಲು ಎಂಬುದು ಶ್ರೀ ಪರಮೇಶ್ವರ ಹೆಗಡೆಯವರ ಹುಟ್ಟೂರು. 1965ನೇ ಇಸವಿ ಫೆಬ್ರವರಿ 18ರಂದು ಐನಬೈಲು ಶ್ರೀ ಗಣಪತಿ ಹೆಗಡೆ ಮತ್ತು ಶ್ರೀಮತಿ ಸೌಭದ್ರೆ ದಂಪತಿಗಳ ಪುತ್ರನಾಗಿ ಜನನ. ಗಣಪತಿ ಹೆಗಡೆಯವರು ಕಲಾವಿದನಲ್ಲದಿದ್ದರೂ ಕಲಾಸಕ್ತರಾಗಿದ್ದರು. ಬಾಳೆಕಾಯಿ, ಹಲಸಿನಕಾಯಿ ತಿಂದು ಬದುಕನ್ನು ನಡೆಸುವಷ್ಟು ತೀವ್ರವಾಗಿತ್ತು ಬಡತನ. ಬಡತನದಲ್ಲೂ ಯಕ್ಷಗಾನಾಸಕ್ತಿ ಶ್ರೀಮಂತವಾಗಿತ್ತು. ದಿಂಬುಗಳನ್ನು ಸಾಲಾಗಿ ಇರಿಸಿ, ಅದರ ಮೇಲೆ ಹೊದಿಕೆ ಮುಚ್ಚಿ, ಪತ್ನಿಗೆ ಗೊತ್ತಾಗದಂತೆ ಯಕ್ಷಗಾನ ನೋಡಲು ತೆರಳುತ್ತಿದ್ದರಂತೆ. ಯಕ್ಷಗಾನ ಹಾಡುಗಾರಿಕೆ ಎಂದರೆ ಇವರಿಗೆ ಇಷ್ಟದ ವಿಚಾರ. ಭಾಗವತರ ಹಾಡುಗಳನ್ನು ಗಮನವಿಟ್ಟು ಕೇಳುತ್ತಿದ್ದರು.
ಕೇಳುವಿಕೆ ಎಂಬ ಕ್ರಿಯೆಗಳಿಂದಲೇ ಯಕ್ಷಗಾನ ಹಾಡುಗಳು ಕಂಠಪಾಠವಾಗಿತ್ತು. ಭಾಗವತರಲ್ಲಿ ಕೇಳಿ ತಾಳ, ರಾಗಗಳ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಪ್ರಸಂಗ ಪುಸ್ತಕಗಳನ್ನು ಕೇಳಿ ತಂದು ಕೈ ಬರಹದಿಂದ ಸಿದ್ಧಪಡಿಸುತ್ತಿದ್ದರು! ಮಣ್ಣಿನಿಂದ ಗಣಪತಿ ಮೂರ್ತಿಗಳನ್ನು ಮಾಡುವ ಹವ್ಯಾಸವೂ ಇತ್ತು. ತಾನು ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯಿದ್ದರೂ ಅದು ಕೈಗೂಡಿರಲಿಲ್ಲ. ಮಗನನ್ನು ಯಕ್ಷಗಾನ ಕಲಾವಿದನಾಗಲು ಪ್ರೇರೇಪಿಸಿ ಐನಬೈಲು ಗಣಪತಿ ಹೆಗಡೆಯವರು ಆ ನೋವನ್ನು ಕಳೆದುಕೊಂಡಿದ್ದರು. ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರು ಯಕ್ಷಗಾನಾಸಕ್ತರೇ ತುಂಬಿದ್ದ ಪರಿಸರದಲ್ಲಿ ಬೆಳೆದವರು. ಓದಿದ್ದು 7ನೇ ತರಗತಿ ವರೆಗೆ. ಐನಬೈಲು ಮತ್ತು ಬಾಳೆಕೊಪ್ಪ ಶಾಲೆಗಳಲ್ಲಿ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಆಟ ನೋಡುತ್ತಾ ಕಲಾಸಕ್ತಿಯನ್ನು ಬೆಳೆಸಿಕೊಂಡಿದ್ದರು.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ
ನಾಟ್ಯ ಕಲಿತು ವೇಷ ಮಾಡುವ ನಿರ್ಣಯ. ಮೇಳದ ಕಲಾವಿದ ಶಿರಳಗಿ ಮಂಜುನಾಥ ಭಟ್ಟರಿಂದ ಊರ ಕಲಿಕಾಸಕ್ತರೊಡನೆ ನಾಟ್ಯಾಭ್ಯಾಸ. 1975ರ ಸುಮಾರಿಗೆ ಇವರ ತಂದೆ ಐನಬೈಲು ಗಣಪತಿ ಹೆಗಡೆಯವರು ಮಹಾಗಣಪತಿ ಯಕ್ಷಗಾನ ಮಂಡಳಿ ಐನಬೈಲು ಎಂಬ ಮೇಳವನ್ನು ಸ್ಥಾಪಿಸಿದ್ದರು. ಈ ತಂಡದಲ್ಲಿ ಮೂರೂರು ಆರ್.ಎಂ.ಹೆಗಡೆ ಭಾಗವತರಾಗಿದ್ದರು. ಆ ಕಾಲದ ಸಮರ್ಥ ಭಾಗವತರಲ್ಲೊಬ್ಬರು. ಇವರು ನಾರ್ಣಪ್ಪ ಉಪ್ಪೂರರ ಶಿಷ್ಯ. ತಂದೆಯಿಂದ ಕಟ್ಟಲ್ಪಟ್ಟ ಈ ಮೇಳದಲ್ಲಿ ಮಗನಾದ ಪರಮೇಶ್ವರ ಹೆಗಡೆಯವರು ಬಾಲಗೋಪಾಲನಾಗಿ ರಂಗಪ್ರವೇಶ ಮಾಡಿ ಬಳಿಕ ಚಿತ್ರಕೇತ, ಚಿತ್ರವಾಹನ, ಧರ್ಮಾಂಗದ, ವೃಷಕೇತ, ಪ್ರದ್ಯುಮ್ನ ಮೊದಲಾದ ಪಾತ್ರಗಳನ್ನೂ ಮಾಡಿದ್ದರು. ಮೂರು ವರ್ಷಗಳ ಕಾಲ ಈ ಮೇಳವು ಪ್ರದರ್ಶನಗಳನ್ನು ನೀಡಿತ್ತು.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ
ಬಳಿಕ ಗಣಪತಿ ಹೆಗಡೆಯವರು ಮಗನನ್ನು ತರಬೇತಿಗಾಗಿ ಹೊಸ್ತೋಟ ಮಂಜುನಾಥ ಭಾಗವತರ ಬಳಿಗೆ ಕರೆದುಕೊಂಡು ಹೋಗಿ ತರಬೇತಿ ನೀಡಬೇಕೆಂದು ಕೇಳಿಕೊಂಡಿದ್ದರು (ಭಾಗವತಿಕೆಯ ತರಬೇತಿ) ಹೊಸ್ತೋಟದವರು ಪರಮೇಶ್ವರ ಹೆಗಡೆಯವರನ್ನು ಬಾಳೆಹದ್ದ ಕೃಷ್ಣ ಭಾಗವತ ಬಳಿಗೆ ಕರೆದೊಯ್ದು ಭಾಗವತಿಕೆ ಕಲಿಸಲು ಹೇಳಿದ್ದರು. ಬಾಳೆಹದ್ದ ಭಾಗವತರು ಕರ್ನಾಟಕ ಸಂಗೀತ ಅಭ್ಯಾಸ ಮಾಡಿದವರು. ವಯಲಿನ್ ಕೂಡಾ ತಿಳಿದವರು. ನೆಬ್ಬೂರು, ಕಡತೋಕ ಭಾಗವತರ ಜತೆ ವ್ಯವಸಾಯ ಮಾಡಿದವರು. ಲಯ ಸಾಮರ್ಥ್ಯ, ಹಾಡುಗಳಿಗೆ ರಾಗಗಳ ಆಯ್ಕೆ, ಸಾಹಿತ್ಯಜ್ಞಾನ ಉಳ್ಳವರಾಗಿ ಪ್ರಸಿದ್ಧರು. 2 ವರ್ಷಗಳ ಕಾಲ ಮನೆಯ ಸದಸ್ಯನಂತೆಯೇ ಇದ್ದು ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರು ಬಾಳೆಹದ್ದ ಕೃಷ್ಣ ಭಾಗವತರಿಂದ ಭಾಗವತಿಕೆಯನ್ನು ಕಲಿತರು. ಜತೆಗೆ ಸೋಂದಾದಲ್ಲಿ ಹೊಸ್ತೋಟ ಅವರಿಂದ ನಾಟ್ಯ ಕಲಿಕೆ.
ಹೊಸ್ತೋಟದವರ ಸೋಂದಾ ಮೇಳದಲ್ಲಿ ತಿರುಗಾಟ. ಗುರು ಬಾಳೆಹದ್ದ ಕೃಷ್ಣ ಭಾಗವತರ ಪುತ್ರ ಬಾಳೆಹದ್ದ ತಿಮ್ಮಪ್ಪ ಭಾಗವತರು ಮತ್ತು ಐನಬೈಲು ಅವರ ಭಾಗವತಿಕೆ. ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರು ಭಾಗವತಿಕೆ ಮಾಡಿ ವೇಷವನ್ನೂ ಮಾಡುತ್ತಿದ್ದರು. ಸದ್ರಿ ಮೇಳದಲ್ಲಿ ಒಟ್ಟು ಎಂಟು ತಿರುಗಾಟ. ಬಳಿಕ ಮೇಳ ತಿರುಗಾಟ ನಿಲ್ಲಿಸಿತ್ತು. ಮೇಳದ ಪ್ರದರ್ಶನಗಳಿಲ್ಲದ ಸಮಯ ಹವ್ಯಾಸೀ ತಂಡಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ತಾವು ನಡೆಸುತ್ತಿದ್ದ ತರಬೇತಿ ಕೇಂದ್ರಗಳಿಗೆಲ್ಲಾ ಹೊಸ್ತೋಟದವರು ಶಿಷ್ಯ ಐನಬೈಲು ಅವರನ್ನು ನಾಟ್ಯ ಹೇಳಿಕೊಡಲು ಕಳುಹಿಸುತ್ತಿದ್ದರು. ಇದು ಕೂಡಾ ಅನುಕೂಲವೇ ಆಗಿತ್ತು. ಎಲ್ಲಾ ಊರಿನ ಜನರ ಸಂಪರ್ಕಕ್ಕೆ ಅವಕಾಶವಾಗಿತ್ತು. ಹೆಚ್ಚಿನ ಎಲ್ಲಾ ತಂಡಗಳ ಪ್ರದರ್ಶನಗಳಲ್ಲಿ ಭಾಗವತರಾಗಿ ಕಾಣಿಸಿಕೊಂಡರು. ಮುಂದಿನ ದಿನಗಳಲ್ಲಿ ವೇಷ ಮಾಡುವುದನ್ನು ಬಿಟ್ಟು ಭಾಗವತರಾಗಿಯೇ ಮುಂದುವರಿದಿದ್ದರು.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ
1987ರಲ್ಲಿ ಪುರ್ಲೆ ಶ್ರೀ ರಾಮಚಂದ್ರ ಹೆಗಡೆಯವರ ಶಿರಸಿ ಮೇಳದಲ್ಲಿ ತಿರುಗಾಟ. ಸಂಗೀತಗಾರನಾಗಿ ಕಲಾಸೇವೆ. ನೆಬ್ಬೂರು, ಕಪ್ಪೆಕೆರೆ ಸುಬ್ರಾಯ ಭಾಗವತರು, ಕೆರೆಮನೆ ಮಹಾಬಲ ಹೆಗಡೆ, ಬಳ್ಕೂರು ಕೃಷ್ಣಯಾಜಿ, ಭಾಸ್ಕರ ಜೋಶಿ, ಕುಂಜಾಲು ರಾಮಕೃಷ್ಣ, ಕೊಂಡದಕುಳಿ ಮೊದಲಾದವರ ಒಡನಾಟವೂ ಸಿಕ್ಕಿತ್ತು. ಭಾಗವತಿಕೆ ಮಾಡಿ ಅನಿವಾರ್ಯಕ್ಕೆ ವೇಷಗಳನ್ನೂ ಮಾಡುತ್ತಿದ್ದರು. ಇದೇ ಸಮಯಕ್ಕೆ ಸದ್ರಿ ಮೇಳದಲ್ಲಿ ಕಣ್ಣಿಮನೆ ಮತ್ತು ಮೂರೂರು ರಮೇಶ ಭಂಡಾರಿ ಬಾಲಗೋಪಾಲರಾಗಿ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸಿದ್ದರು. 1990ರಿಂದ ತರಬೇತಿ ನೀಡುವ ಕಾರ್ಯವನ್ನು ಐನಬೈಲು ಅವರು ಆರಂಭಿಸಿದ್ದರು. ಹಿಮ್ಮೇಳ ಮತ್ತು ಮುಮ್ಮೇಳಗಳ ತರಬೇತಿಯನ್ನು ನೀಡಿ ಒಂದು ಪರಿಪೂರ್ಣ ಪ್ರದರ್ಶನವನ್ನು ಕೊಡಿಸುವ ನಿಟ್ಟಿನಲ್ಲಿ ಸಾಗಿದರು. ಇದರಿಂದಾಗಿ ಹಲವಾರು ಕಡೆಗಳಿಂದ ಆಹ್ವಾನವೂ ಬಂದಿತ್ತು.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ
ಶಿರಸಿ ಮತ್ತು ಸಿದ್ಧಾಪುರದ ಇಪ್ಪತ್ತು ಕಡೆಗಳಲ್ಲಿ, ಹುಬ್ಬಳ್ಳಿ, ಬೆಳಗಾಂ, ಧಾರವಾಡ, ಅಂಕೋಲಗಳಲ್ಲಿ ಕಲಿಕಾಸಕ್ತರಿಗೆ ತರಬೇತಿ ನೀಡಿದರು. ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಯಕ್ಷಗಾನವನ್ನೇ ನೋಡಿರದ ಸ್ಥಳೀಯ ಮಕ್ಕಳೂ ಐನಬೈಲು ಅವರಿಂದ ಕಲಿತು ರಂಗಪ್ರವೇಶ ಮಾಡಿದ್ದರು! ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಇವರಿಂದ ಯಕ್ಷಗಾನಾಭ್ಯಾಸ ಮಾಡಿದ್ದು ಅನೇಕರು ಒಳ್ಳೆಯ ಕಲಾವಿದರಾಗಿ ಹೆಸರು ಗಳಿಸಿದ್ದಾರೆ.ಸುಮಾರು ಐವತ್ತು ಸ್ಥಳಗಳಲ್ಲಿ ತರಬೇತಿ ನೀಡಿದ ಹಿರಿಮೆ ಇವರದು. ಐನಬೈಲು ಅವರು ಕೃಷಿಯಲ್ಲೂ ಆಸಕ್ತರು. ಅಡಿಕೆ ಕೃಷಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನೂ ಮಾಡಿದ ಅನುಭವಿ. ಗಾರೆ ಕೆಲಸ, ಗಣಪತಿ ಮೂರ್ತಿ ಮಾಡುವುದರಲ್ಲೂ ನಿಪುಣರು.
ಐನಬೈಲು ಪರಮೇಶ್ವರ ಹೆಗಡೆಯವರು ಶಿವಮೊಗ್ಗಕ್ಕೆ ತೆರಳಿದ್ದು 2008ರಲ್ಲಿ. ಐನಬೈಲು ಶ್ರೀ ಪರಮೇಶ್ವರ ಹೆಗಡೆಯವರು ಶಿವಮೊಗ್ಗಕ್ಕೆ ತೆರಳಲು ಕಾರಣರು ಹಲವರು. ತ್ರಿವೇದಿ ಶ್ರೀ ಎಲ್. ಎನ್. ಭಟ್, ಅವರೇ ಕರೆದುಕೊಂಡು ಹೋದುದು. ಆ ಕಾಲದಲ್ಲಿ ಊರಿಂದ ಸಾಗಿ ಶಿವಮೊಗ್ಗದಲ್ಲಿ ನೆಲೆಸಿದ ಮಹನೀಯರ ತಂಡವೊಂದಿತ್ತು. ಅವರು ಯಕ್ಷಗಾನ ಕಾರ್ಯಕ್ರಮಗಳನ್ನು ಅಲ್ಲಿ ಸಂಘಟಿಸುತ್ತಿದ್ದರು. ನಗರದಲ್ಲಿ ಯಕ್ಷಗಾನದ ಕಂಪನ್ನು ಪಸರಿಸಲು ಪರಮಾವಧಿ ಶ್ರಮಿಸುತ್ತಿದ್ದರು. ಇವರಲ್ಲಿ ಹಂದಲಸು ಲಕ್ಷ್ಮೀನಾರಾಯಣ ಭಟ್ ತ್ರಿವೇದಿ, ವೈದ್ಯರಾದ ಮಂಟಪ ರತ್ನಾಕರ ಉಪಾಧ್ಯ, ಪ್ರೊ| ಲಕ್ಷ್ಮೀನಾರಾಯಣ ಕಾಶಿ ಪ್ರಮುಖರು. ಹಂದಲಸು ಲಕ್ಷ್ಮೀನಾರಾಯಣ ಭಟ್ಟರು ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಸಕ್ರಿಯರು. ಎಲ್ಲಾ ಕಾರ್ಯಕ್ರಮಗಳಿಗೂ ಅವರು ಶಿವಮೊಗ್ಗದ ಜನತೆಗೆ ಬೇಕೇ ಬೇಕು.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ
ಇವರೆಲ್ಲರೂ ಶಿವಮೊಗ್ಗದಲ್ಲಿ ಯಕ್ಷಗಾನದ ಬೆಳವಣಿಗೆಗೆ ಕಾರಣರು. ತೆಂಕು, ಬಡಗು ಎಂಬ ಬೇಧವಿಲ್ಲದೆ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದರು. ಮುಮ್ಮೇಳಕ್ಕೆ ಜನ ಇದ್ದರೂ ಹಿಮ್ಮೇಳಕ್ಕೆ ಕಲಾವಿದರಿರಲಿಲ್ಲ. ಕಲಾವಿದರನ್ನು ಸಿದ್ಧಗೊಳಿಸಲೆಂದೇ ಐನಬೈಲು ಪರಮೇಶ್ವರ ಹೆಗಡೆಯವರನ್ನು ಇವರೆಲ್ಲರೂ ಶಿವಮೊಗ್ಗಕ್ಕೆ ಕರೆಸಿಕೊಂಡರು. ವಾಸ್ತವ್ಯಕ್ಕೆ ಅರ್ಚಕರಾದ ಅ.ಪ. ರಾಮ ಭಟ್ಟ ವ್ಯವಸ್ಥೆ ಮಾಡಿದ್ದರು. ಇವರು ಕಲಾಪ್ರೇಮಿಗಳು. ಯಕ್ಷಗಾನಾಸಕ್ತರು. ಪ್ರಾರಂಭದ ವರ್ಷ ವಾರಕ್ಕೆ ಎರಡು ತರಗತಿಗಳನ್ನು ನಡೆಸುತ್ತಿದ್ದರು. ಎರಡನೇ ವರ್ಷ ವಾರಕ್ಕೆ ನಾಲ್ಕು ದಿನಗಳಾಗಿ ವೃದ್ಧಿಯನ್ನು ಹೊಂದಿತ್ತು. ಮೂರನೇ ವರ್ಷ ನಿರಂತರ ತರಗತಿಗಳು ನಡೆಯಲಾರಂಭಿಸಿತು.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ
ಐನಬೈಲು ಪರಮಣ್ಣ ಶಿವಮೊಗ್ಗ ಜನತೆಗೆ, ಕಲಾಪ್ರೇಮಿಗಳಿಗೆ ವರುಷವೊಂದರಲ್ಲೇ ಆತ್ಮೀಯರಾಗಿಬಿಟ್ಟಿದ್ದರು. ಹೌದು. ಅವರು ಸ್ನೇಹಜೀವಿ. ಈ ಸಂದರ್ಭಗಳಲ್ಲಿ ಶಿರಸಿ ಭಾಗದ ತಾಳಮದ್ದಳೆಗಳಲ್ಲೂ ನೆಬ್ಬೂರು ಭಾಗವತರ ಜತೆ ಭಾಗವಹಿಸುತ್ತಿದ್ದರು. ಕಡತೋಕರಂತೆ ನೆಬ್ಬೂರರೂ ಇವರನ್ನು ‘ಏನೋ ಆಲ್ರೌಂಡರ್’ ಎಂದು ಕರೆಯುತ್ತಿದ್ದರಂತೆ. 2010ರಲ್ಲಿ ಐನಬೈಲು ಪರಮೇಶ್ವರ ಹೆಗಡೆ ಸಕುಟುಂಬಿಕರಾಗಿ ಶಿವಮೊಗ್ಗದಲ್ಲಿ ನೆಲೆಸಿದ್ದರು. ಶಿವಮೊಗ್ಗವೇ ಅವರ ಕಾರ್ಯಕ್ಷೇತ್ರವಾಯಿತು. 1988ರಲ್ಲಿ ತ್ರಿವೇಣಿ ಜತೆ ವಿವಾಹ. ಇವರು ಭೀಮನಹಳ್ಳಿ ನಾರಾಯಣ ಹೆಗಡೆ ಮತ್ತು ಶಾರದಾ ದಂಪತಿಗಳ ಸುಪುತ್ರಿ. ಇವರೆಲ್ಲರೂ ಕಲಾಪ್ರಿಯರೂ ಯಕ್ಷಗಾನಾಸಕ್ತರೂ ಆಗಿದ್ದಾರೆ.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ
ಶಿವಮೊಗ್ಗದಲ್ಲಿ ಹಿಮ್ಮೇಳ,ಮುಮ್ಮೇಳ ತರಗತಿಗಳನ್ನು ನಡೆಸಿ ಅನೇಕ ಕಲಾವಿದರನ್ನು ಸಿದ್ಧಗೊಳಿಸಿ ಯಕ್ಷ ಕಲಾ ಮಾತೆಯ ಮಡಿಲಿಗಿಕ್ಕಿದ್ದಾರೆ. “ಶಿಷ್ಯರ ಬಂಧುಗಳೆಲ್ಲಾ ಯಕ್ಷಗಾನ ನೋಡಲು ಬರಲಾರಂಭಿಸಿದರು. ಮಕ್ಕಳನ್ನು ಕಳುಹಿಸಿ ನಾಟ್ಯ ಹೇಳಿ ಕೊಡಲು ಕೇಳಿಕೊಂಡರು. ನಾನು ನನ್ನ ಕರ್ತವ್ಯವನ್ನು ಮಾಡಿದೆ” ಇದು ಐನಬೈಲು ಅವರ ಮನದಾಳದ ಮಾತುಗಳು. “ಯಕ್ಷಗಾನ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿತು. ಬೇರೆ ಕಡೆಗೆ ಗಮನ ಕೊಡದೆ ಉತ್ತಮ ವಿಚಾರಧಾರೆಗಳತ್ತ ಗಮನ ನೀಡುವಂತಾಯಿತು. ಬಿಡುವಿನ ಸಮಯವು ಹಾಳಾಗದೆ ಸದುಪಯೋಗವಾಯಿತು” ಇದು ಕಲಿಕಾಸಕ್ತ ವಿದ್ಯಾರ್ಥಿಗಳ ಅಭಿಪ್ರಾಯ. ಶಿವಮೊಗ್ಗದ ಶಾಲಾ ಕಾಲೇಜುಗಳಲ್ಲೂ ತರಗತಿಗಳನ್ನು ಐನಬೈಲು ಪರಮೇಶ್ವರ ಹೆಗಡೆಯವರು ನಡೆಸಿದರು.
ಶಾರದಾ ದೇವಿ ಅಂಧ ವಿಕಾಸ ಕೇಂದ್ರದ(ಶಿವಮೊಗ್ಗ) ಅಂಧ ವಿದ್ಯಾರ್ಥಿಗಳಿಗೂ ಯಕ್ಷಗಾನ ಕಲಿಸಿದರು. ತರಬೇತಿ ನೀಡಿ ಪ್ರದರ್ಶನಕ್ಕೆ ಸಿದ್ಧಗೊಳಿಸಿದರು. ಇವರಿಂದ ತರಬೇತಿ ಹೊಂದಿದ ಈ ತಂಡ 150ಕ್ಕೂ ಮಿಕ್ಕಿದ ಪ್ರದರ್ಶನಗಳನ್ನು ನೀಡಿದೆ. ಈ ಸಂಸ್ಥೆಯ ಮಕ್ಕಳಿಗೆ ಯಕ್ಷಗಾನಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಶ್ರೀ ಹೊಸ್ತೋಟ ಮಂಜುನಾಥ ಭಾಗವತರೂ ತರಬೇತಿಯನ್ನು ನೀಡಿದ್ದರು. ಮಾತು ಬಾರದ, ಕಿವಿ ಕೇಳಿಸದ ಮಕ್ಕಳಿಗೆ ತರಬೇತಿ ನೀಡಿ ಅವರಿಂದ ಪ್ರದರ್ಶನಗಳನ್ನು ಏರ್ಪಡಿಸಿದ್ದು ಗುರು ಶಿಷ್ಯರಾದ ಹೊಸ್ತೋಟ ಮತ್ತು ಐನಬೈಲು ಅವರ ಸಾಹಸದ ಪ್ರತೀಕ. ಈ ಕಾರ್ಯ ಅಷ್ಟು ಸುಲಭವಲ್ಲ.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ
ಐನಬೈಲು ಪರಮೇಶ್ವರ ಹೆಗಡೆಯವರು ಯಕ್ಷಗಾನ ತರಬೇತಿ ನೀಡಿದ ಶಾಲಾ ವಿದ್ಯಾರ್ಥಿಗಳ ಹೆತ್ತವರು, ಪೋಷಕರು ಮತ್ತು ಅಧ್ಯಾಪಕರು ತಮ್ಮ ಅನುಭವಗಳನ್ನು ಈ ರೀತಿಯಾಗಿ ಹಂಚಿಕೊಳ್ಳುತ್ತಾರೆ. “ಯಕ್ಷಗಾನ ಆರಂಭವಾದ ಮೇಲೆ ಸಾಮಾನ್ಯ ಹುಡುಗರೂ ಬುದ್ಧಿವಂತರಾಗಿದ್ದಾರೆ. ಒಳ್ಳೆಯ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾರೆ. ಶಾಲೆಯಲ್ಲಿ ನೀಡಿದ ಪಾಠವನ್ನು ಕಂಠಪಾಠ ಮಾಡಲು ಕಷ್ಟ ಪಡುತ್ತಾರೆ. ಆದರೆ ಯಕ್ಷಗಾನದ ಹಾಡು ಮತ್ತು ಸಂಭಾಷಣೆಗಳನ್ನು ಬಹುಬೇಗನೆ ಬಾಯಿಪಾಠ ಮಾಡುತ್ತಾರೆ. ಯಕ್ಷಗಾನದ ವಿಚಾರಗಳನ್ನು ಪಟಾಪಟ್ ಗ್ರಹಿಸುತ್ತಾರೆ! ಯಕ್ಷಗಾನ ಕಲೆಯಲ್ಲಿರುವ ಕರ್ಷಕ ಶಕ್ತಿಗೆ ನಾವು ಚಕಿತರಾಗಿದ್ದೇವೆ”
“ಯಕ್ಷಗಾನ ವಿದ್ಯೆಯನ್ನು ಕಲಿಕಾಸಕ್ತರಿಗೆ ನೀಡುವ ಅಧ್ಯಾಪಕನೂ ಯೋಚಿಸಬೇಕು. ಧನಾಪೇಕ್ಷಿಯಾಗಿ ವಿದ್ಯೆ ಹೇಳಿಕೊಡಬಾರದು. ವಿದ್ಯೆಯ ಬಗ್ಗೆಯೇ ಯೋಚಿಸಬೇಕು. ಪಡೆಯುವ ಆಸೆ ಮಾಡಿದರೆ ಕೊಡುವಲ್ಲಿ ಕಡಿಮೆಯಾಗುತ್ತದೆ. ವಿದ್ಯೆ ಹೇಳುವ ಕಡೆಗೇ ಗಮನವಿದ್ದರೆ, ಪ್ರೀತಿ, ಗೌರವ, ಸಂಪತ್ತು ತನ್ನಿಂದ ತಾನೇ ಒದಗಿ ಬರುತ್ತದೆ”. ಇದು ಐನಬೈಲು ಪರಮೇಶ್ವರ ಹೆಗಡೆಯವರ ಅನುಭವದ ಮಾತುಗಳು. 2014ರಲ್ಲಿ ಮಾನವ ಸಹಜವಾಗಿ ಅನಾರೋಗ್ಯಕ್ಕೆ ತುತ್ತಾದರೂ, ಕಲಾಭಿಮಾನಿಗಳ, ಶಿಷ್ಯಂದಿರ ಸಹಕಾರ ಶುಶ್ರೂಷೆಯಿಂದ ಚೇತರಿಸಿಕೊಂಡಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಕೂಡಾ ಸ್ಪಂದಿಸಿ ಸಹಾಯ ನೀಡಿದ್ದರು. ಈಗ ಸಕ್ರಿಯವಾಗಿ ಯಕ್ಷಗಾನ ಕ್ಷೇತ್ರದಲ್ಲಿ ತರಬೇತಿ ನೀಡುತ್ತಾ ಶಿವಮೊಗ್ಗದಲ್ಲಿ ಕಲೆಯ ಕಂಪನ್ನು ಪಸರಿಸುತ್ತಿದ್ದಾರೆ.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ
ಐನಬೈಲು ಪರಮೇಶ್ವರ ಹೆಗಡೆ, ತ್ರಿವೇಣಿ ದಂಪತಿಗಳಿಗೆ ಇಬ್ಬರು ಮಕ್ಕಳು. ಹಿರಿಯ ಪುತ್ರ ರವೀಶ ಹೆಗಡೆ. ಸಂಸ್ಕೃತ ಸ್ನಾತಕೋತ್ತರ ಪದವೀಧರ. ಬೆಂಗಳೂರಲ್ಲಿ ಪ್ರಾಧ್ಯಾಪಕರು. ಯಕ್ಷಗಾನ, ನಾಟಕ ಕಲಾವಿದರೂ ಹೌದು. ದ್ವಿತೀಯ ಪುತ್ರ ಹರೀಶ್ ಹೆಗಡೆ ಬಿ.ಕಾಮ್ ಪದವೀಧರ. ಶಿವಮೊಗ್ಗದಲ್ಲಿ ಉದ್ಯೋಗಿ. ಪುತ್ರಿ ಕೀರ್ತಿ ವಿವಾಹಿತೆ. ಇಷ್ಟೊಂದು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರೂ ತಾನು ಯಕ್ಷಗುರು ಅಲ್ಲ. ಕೇವಲ ತರಬೇತುದಾರ, ಅಧ್ಯಾಪಕ ಎಂದು ಹೇಳುವ ಐನಬೈಲು ಶ್ರೀ ಪರಮೇಶ್ವರ ಹೆಗಡೆ ಅವರಿಂದ ಬಹಳಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯು ಆರೋಗ್ಯವೇ ಮೊದಲಾದ ಸಕಲ ಭಾಗ್ಯಗಳನ್ನೂ ಅನುಗ್ರಹಿಸಿ ಪೊರೆಯಲಿ ಎಂಬ ಹಾರೈಕೆಗಳು.