ಶ್ರೀ ಜಯಾನಂದ ಸಂಪಾಜೆ ಅವರು ಅನೇಕ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವಿ. ಪ್ರಸ್ತುತ ಹನುಮಗಿರಿ ಮೇಳದಲ್ಲಿ ವ್ಯವಸಾಯಿ. ಇವರು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಸುಳ್ಯಕೋಡಿ ಎಂಬಲ್ಲಿ ೧೯೭೩ನೇ ಇಸವಿ ಡಿಸೆಂಬರ್ ೮ರಂದು ಶ್ರೀ ತಿಮ್ಮಯ್ಯ ಗೌಡ ಮತ್ತು ಲಕ್ಷ್ಮಿ ದಂಪತಿಗಳ ಪುತ್ರನಾಗಿ ಜನಿಸಿದರು. ೭ನೇ ಕ್ಲಾಸ್ ವರೆಗೆ ಕಲ್ಲುಗುಂಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪಿಯುಸಿ ತನಕ ಸಂಪಾಜೆ ಪದವಿಪೂರ್ವ ಕಾಲೇಜಿನಲ್ಲಿ ಓದಿದ್ದರು.
ಕಲ್ಲುಗುಂಡಿ ಪ್ರದೇಶ ಯಕ್ಷಗಾನದ ಆಡುಂಬೊಲ. ತೆಂಕು ಮತ್ತು ಬಡಗಿನ ಮೇಳಗಳ ಪ್ರದರ್ಶನಗಳು ನಡೆಯುತ್ತಿತ್ತು. ತೆಂಕಿನ ಮೇಳಗಳ ಪ್ರದರ್ಶನಗಳು ಅನಿವಾರ್ಯಕ್ಕೆ ರದ್ದಾದರೆ ಅಂದು ಕಲ್ಲುಗುಂಡಿಯಲ್ಲಿ ಆಟ ಇರುತ್ತಿತ್ತು. ಯಕ್ಷಗಾನ ಕಲೆಗೆ ಕೊರತೆಯಾಗಬಾರದೆಂಬ ಒಳ್ಳೆಯ ಮನಸಿನಿಂದ ಆಟ ಆಡಿಸುವ ಮಹನೀಯರಿದ್ದರು. ಯಕ್ಷಗಾನಾಸಕ್ತಿ ಅಷ್ಟು ತೀವ್ರವಾಗಿತ್ತು.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಕಲ್ಲುಗುಂಡಿಗಳಲ್ಲಿ ಆಗುತ್ತಿದ್ದ ಆಟಗಳನ್ನು ನೋಡುವುದು, ನೆಲದಲ್ಲೇ ಕುಳಿತು ವೀಕ್ಷಣೆ, ಚೌಕಿಗೆ ಹೋಗಿ ಕಲಾವಿದರನ್ನು ನೋಡುವುದು, ಅವರಲ್ಲಿ ಮಾತನಾಡುವುದು. ಶಾಲೆಯಲ್ಲಿ ಪಾಠ ಕೇಳುವಾಗಲೂ ಆಟ ನೆನಪಾಗುವುದು, ಹತ್ತಾರು ದಿನಗಳ ವರೆಗೂ ಕಲಾವಿದರ ಮಾತು, ಅಭಿನಯಗಳನ್ನು ಮೆಲುಕು ಹಾಕುತ್ತಾ ಅಭಿನಯಿಸುವುದು, ಹೀಗೆ ಸಾಗಿತ್ತು ಜಯಾನಂದರ ಬಾಲ್ಯ ಜೀವನ. ಕಲಾವಿದನಾಗಬೇಕೆಂಬಾಸೆಯೂ ಆಗಿತ್ತು.
ತಾಳಮದ್ದಳೆಯ ಖ್ಯಾತ ಅರ್ಥಧಾರಿ ಶ್ರೀ ಜಬ್ಬಾರ್ ಸಮೋ ಅವರ ಹುಟ್ಟೂರು ಸಂಪಾಜೆ. ಎಳವೆಯಲ್ಲೇ ಅವರು ಕಲಾಸಂಘಟಕರಾಗಿದ್ದರು. ‘ಯಕ್ಷಮಿತ್ರ ಬಳಗ’ ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದರು. ಬಣ್ಣದ ಮಹಾಲಿಂಗ, ಪ್ರಸ್ತುತ ಮಡಿಕೇರಿ ಆಕಾಶವಾಣಿಯ ಉದ್ಯೋಗಿ, ಭಾಗವತರೂ ಆದ ಶ್ರೀ ಸುಬ್ರಾಯ ಸಂಪಾಜೆ, ಜಬ್ಬಾರ್ ಸಮೋ ನೇತೃತ್ವದಲ್ಲಿ ಗಜಾನನ ಯಕ್ಷಗಾನ ಸಂಘವು ಸಕ್ರಿಯವಾಗಿತ್ತು. ಯಕ್ಷಮಿತ್ರ ಬಳಗದ ವತಿಯಿಂದ ನಿತ್ಯವೂ ತಾಳಮದ್ದಳೆ ನಡೆಯುತ್ತಿತ್ತು. ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀ ರಾಮಾ ಜೋಯಿಸ, ಶ್ರೀ ಹರೀಶ ಬಳಂತಿಮೊಗರು, ಶ್ರೀ ಗೋಪಾಲಕೃಷ್ಣ ಮಡಿಕೇರಿ, ಮೊದಲಾದವರು ತಾಳಮದ್ದಳೆಗಳಲ್ಲಿ ಭಾಗವಹಿಸಿ ಕಲಾಸೇವೆ ಮಾಡುತ್ತಿದ್ದರು.

ಜಯಾನಂದ ಅವರು ಇವರೆಲ್ಲರ ಸಂಭಾಷಣೆಗಳನ್ನು ಆಸಕ್ತಿಯಿಂದ ಕೇಳುತ್ತಿದ್ದರು. ಸಣ್ಣಪುಟ್ಟ ಪಾತ್ರಗಳನ್ನೂ ನಿರ್ವಹಿಸುವ ಅವಕಾಶಗಳೂ ಸಿಕ್ಕಿತ್ತು. ಅರ್ಥ ಹೇಳುತ್ತಿದ್ದರು. ಜಯಾನಂದ ಅವರು ಮಾತುಗಾರಿಕೆಯಲ್ಲಿ ಹಿಡಿತ ಸಾಧಿಸಲು ಇದು ಕಾರಣವಾಗಿರಬಹುದು. ಶ್ರೀ ಜಬ್ಬಾರ್ ಸಮೋ ಅವರ ಜತೆ ಕಾಸರಗೋಡಿನ ಶೇಣಿ (ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಹುಟ್ಟೂರು) ವರೆಗೂ ಹೋಗಿ ತಾಳಮದ್ದಳೆ ಕೇಳಿ ಬಂದಿದ್ದರು. ಕಲ್ಲುಗುಂಡಿ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಶ್ರೀ ಮಹಾಲಿಂಗ ಭಟ್ (ಅಜ್ಜಕಾನ, ಶೇಣಿಯವರ ಕುಟುಂಬಸ್ಥರು) ಪಾಠ ಮಾಡುವಾಗ ರಸವತ್ತಾಗಿ ಪುರಾಣದ ಕತೆಗಳನ್ನೂ ಹೇಳುತ್ತಿದ್ದರಂತೆ. ಅವರು ಯಕ್ಷಗಾನಾಸಕ್ತರೂ ಆಗಿದ್ದರು.
ಊರಿನವರೇ ಆದ ಬಣ್ಣದ ಮಹಾಲಿಂಗ, ಸಂಪಾಜೆ ಶೀನಪ್ಪ ರೈಗಳ ಒಡನಾಟವೂ ಸಿಕ್ಕಿತ್ತು. ಈ ಎಲ್ಲಾ ವಿಚಾರಗಳೂ ಜಯಾನಂದ ಸಂಪಾಜೆ ಅವರಲ್ಲಿದ್ದ ಯಕ್ಷಗಾನ ಆಸಕ್ತಿಯನ್ನು ಕೆರಳಿಸಿತು. ಕಲಾವಿದನಾಗಿ ಬೆಳೆಯಲು ಒಂದು ವೇದಿಕೆಯೂ ಆಗಿತ್ತು. ನಾಟ್ಯ ಕಲಿತು ವೇಷಧಾರಿಯಾಗಬೇಕೆಂಬ ಜಯಾನಂದ ಸಂಪಾಜೆ ಅವರ ಆಸೆ ಸಾಕಾರವಾಗುವ ಸಂದರ್ಭ ಒದಗಿತ್ತು. ಶ್ರೀ ಪರಮೇಶ್ವರ ಆಚಾರ್ಯರು ಕಲ್ಲುಗುಂಡಿಯ ಗಜಾನನ ಯಕ್ಷಗಾನ ಸಂಘದ ಆಶ್ರಯದಲ್ಲಿ ನಾಟ್ಯ ತರಬೇತಿ ನೀಡುತ್ತಿದ್ದರು. ಇವರು ಕಟೀಲು, ಬೆಳ್ಮಣ್ಣು, ಅರುವ ಮೊದಲಾದ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವಿ. ಮಕ್ಕಳ ಬಡತನ, ಕಲಿಕಾಸಕ್ತಿಯನ್ನು ಗಮನಿಸಿ ಅವರು ಅರಸಿನಮಕ್ಕಿಯಿಂದ ಕಲ್ಲುಗುಂಡಿಗೆ ಬಂದು ಉಚಿತವಾಗಿ ನಾಟ್ಯ ಹೇಳಿಕೊಡುತ್ತಿದ್ದರಂತೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ನಾಟ್ಯ ಕಲಿತ ಜಯಾನಂದ ಅವರು ಮೊಟ್ಟಮೊದಲು ಅರಸಿನಮಕ್ಕಿಯ ಕುಂಟಾಲ್ ಪಲ್ಕೆಯಲ್ಲಿ ಕಾರ್ತವೀರ್ಯಾರ್ಜುನ ಪ್ರಸಂಗದಲ್ಲಿ ಕಾರ್ತವೀರ್ಯನ ರಾಣಿಯರಲ್ಲಿ ಒಬ್ಬಳಾಗಿ ವೇಷಧರಿಸಿ ರಂಗಪ್ರವೇಶ ಮಾಡಿದರು. ವಿದ್ಯಾರ್ಥಿಯಾಗಿದ್ದಾಗ ಅವಕಾಶ ಸಿಕ್ಕಾಗ ವೇಷ ಮಾಡುತ್ತಿದ್ದರು. ಪಿಯುಸಿ ವಿದ್ಯಾರ್ಜನೆ ಬಳಿಕ ಮಡಿಕೇರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಐಟಿಐ ಮಾಡಿದ್ದರು. ಇದು ಎರಡು ವರ್ಷಗಳ ಕೋರ್ಸ್. ಆದರೆ ಇವರ ತೀವ್ರ ಯಕ್ಷಗಾನಾಸಕ್ತಿ ಮೇಳದ ತಿರುಗಾಟ ಮಾಡುವಲ್ಲಿ ಪರ್ಯಾಪ್ತವಾಗಿತ್ತು. ೧೯೯೨-೯೩ಕ್ಕೆ ಕಟೀಲು ೪ನೇ ಮೇಳ ಆರಂಭವಾಗಿತ್ತು. ಕಲ್ಲುಗುಂಡಿ ವೆಂಕಟೇಶ ಆಚಾರ್ಯರ ಸಹಕಾರದಿಂದ ಕಟೀಲು ಮೇಳ ಸೇರಿದ್ದರು. ಕಟೀಲು ೨ನೇ ಮೇಳದಲ್ಲಿ ತಿರುಗಾಟ. ಕುರಿಯ ಗಣಪತಿ ಶಾಸ್ತ್ರಿ, ಪದ್ಯಾಣ ಶಂಕರನಾರಾಯಣ ಭಟ್, ಕೇದಗಡಿ ಗುಡ್ಡಪ್ಪ ಗೌಡ, ಪುಂಡರೀಕಾಕ್ಷ ಉಪಾಧ್ಯಾಯ, ಗಂಗಯ್ಯ ಶೆಟ್ಟಿ, ಬೆಳ್ಳಾರೆ ಮಂಜುನಾಥ ಭಟ್ ಮೊದಲಾದವರ ಒಡನಾಟ.
ಯಕ್ಷಗಾನದ ಬಗೆಗೆ ಹೆಚ್ಚು ತಿಳಿಯದ ಜಯಾನಂದರಿಗೆ ಇವರೆಲ್ಲರೂ ಹೇಳಿಕೊಟ್ಟು ಪ್ರೋತ್ಸಾಹಿಸಿದ್ದರು. ೨ ವರ್ಷ ತಿರುಗಾಟದ ಬಳಿಕ ೧ನೇ ಮೇಳಕ್ಕೆ. ೧ ವರ್ಷ ಕಲಾಸೇವೆ. ಬಳಿಕ ೨ನೇ ಮೇಳಕ್ಕೆ. ಬಲಿಪರು, ಪೆರುವಾಯಿ ನಾರಾಯಣ ಭಟ್, ಪೆರುವಾಯಿ ನಾರಾಯಣ ಶೆಟ್ಟಿ, ರಾಜೀವ ಶೆಟ್ಟಿ, ರೆಂಜಾಳ ಮೊದಲಾದವರ ಒಡನಾಟ. ಮತ್ತೆ ೧ನೇ ಮೇಳಕ್ಕೆ. ಪೂಂಜರು, ಸುಣ್ಣಂಬಳ, ಸುಬ್ರಾಯ ಹೊಳ್ಳ ಮೊದಲಾದ ಕಲಾವಿದರ ಒಡನಾಟ. ಸುಣ್ಣಂಬಳದವರು ವಿಷ್ಣು ಪಾತ್ರ ಮಾಡುತ್ತಿದ್ದಾಗ ಬ್ರಹ್ಮನಾಗಿ ಅಭಿನಯಿಸಿದ್ದು, ಸುಬ್ರಾಯ ಹೊಳ್ಳರೂ ಇವರೂ ಮಧು ಕೈಟಭರಾಗಿ ಜೊತೆಯಾದದ್ದು ಸಂಪಾಜೆ ಜಯಾನಂದರ ಮರೆಯಲಾಗದ ಅನುಭವವಾಗಿತ್ತು.

೧ನೇ ಮೇಳದಲ್ಲಿ ೩ ವರ್ಷಗಳ ಕಲಾಸೇವೆ. ತಂದೆಯವರ ಮರಣದ ನಂತರ ಜಯಾನಂದ ಸಂಪಾಜೆ ಮೇಳದ ತಿರುಗಾಟ ನಿಲ್ಲಿಸಿದ್ದರು. ಬಳಿಕ ಆರಂಭಿಸಿದ ಹೋಟೆಲ್ ಉದ್ಯಮವೂ ಕೈಕೊಟ್ಟಿತ್ತು. ೩ ವರ್ಷಗಳ ಕಾಲ ಯಕ್ಷಗಾನದಿಂದ ದೂರವೇ ಉಳಿದಿದ್ದರು. ೨೦೦೧ನೇ ಇಸವಿ ಜನವರಿ ೧೯ರಂದು ಕಾಣಿಯೂರು ಶ್ರೀ ಚೆನ್ನಪ್ಪ ಮತ್ತು ಶ್ರೀಮತಿ ಲಕ್ಷ್ಮಿ ದಂಪತಿಗಳ ಪುತ್ರಿ ವಿಜಯಾ ಅವರನ್ನು ವಿವಾಹವಾಗಿ ಗೃಹಸ್ಥಾಶ್ರಮಿಯಾದರು. ಬಳಿಕ ಕುಂಟಾರು ಶ್ರೀ ರವೀಶ ತಂತ್ರಿಗಳ ಕುಂಟಾರು ಮೇಳದಲ್ಲಿ ೩ ವರ್ಷ ತುಳು ಮತ್ತು ಪುರಾಣ ಪ್ರಸಂಗಗಳಲ್ಲಿ ಅಭಿನಯಿಸಿದರು. ಬಳಿಕ ವರ್ಕಾಡಿ ಐತಪ್ಪ ಅವರ ಪುತ್ತೂರು ಮೇಳದಲ್ಲಿ ೧ ವರ್ಷ. ಮರಳಿ ಕಟೀಲು ಮೇಳಕ್ಕೆ. ೪ನೇ ಮೇಳದಲ್ಲಿ ೨ ವರ್ಷ ಮತ್ತು ೧ನೇ ಮೇಳದಲ್ಲಿ ೨ ವರ್ಷ ಪೀಠಿಕೆ ವೇಷಧಾರಿಯಾಗಿ ವ್ಯವಸಾಯ ಮಾಡಿದ್ದರು. ಈ ಹಂತದಲ್ಲಿ ಸಂಪಾಜೆ ಜಯಾನಂದ ಅವರು ನಾಟ್ಯ ಮತ್ತು ಮಾತುಗಾರಿಕೆಯಿಂದ ಪೀಠಿಕೆ ವೇಷಧಾರಿಯಾಗಿ ಗುರುತಿಸಿಕೊಂಡಿದ್ದರು.
ಬಳಿಕ ಹೊಸನಗರ ಮೇಳದಲ್ಲಿ ೮ ವರ್ಷ, ಎಡನೀರು ಮೇಳದಲ್ಲಿ ೧ ವರ್ಷ ತಿರುಗಾಟ ನಡೆಸಿ ಪ್ರಸ್ತುತ ೨ ವರ್ಷಗಳಿಂದ ಹನುಮಗಿರಿ ಮೇಳದ ಕಲಾವಿದನಾಗಿ ವ್ಯವಸಾಯ ಮಾಡುತ್ತಿದ್ದಾರೆ. ಶಾಲಾ ವಿದ್ಯಾರ್ಥಿಯಾಗಿದ್ದಾಗ ಯಕ್ಷಗಾನ ಮತ್ತು ಕಲಾವಿದರನ್ನು ಅತೀವ ಪ್ರೀತಿಸುತ್ತಿದ್ದ ಶ್ರೀ ದಾಮೋದರ ಮಾಸ್ತರ್ ಸಂಪಾಜೆ ಜಯಾನಂದರನ್ನು ಪ್ರೋತ್ಸಾಹಿಸಿದ್ದರು. ಶಿವಪ್ಪ ಆಚಾರ್ಯ, ಎಡ್ಪಣೆ ಕೃಷ್ಣಪ್ಪ ಪೂಜಾರಿ, ಕೊರಗಪ್ಪ ಮಣಿಯಾಣಿ ಇವರೂ ಸಹಕಾರ ನೀಡಿದ್ದರು. ಕಾಲೇಜು ಉಪಾನ್ಯಾಸಕರಾದ ಶ್ರೀ ಗೋಪಾಲ್ ಪೆರ್ಮುದೆ ಅವರು ಅರ್ಥಗಾರಿಕೆಯಲ್ಲಿ ಸಹಕರಿಸಿದ್ದರು.(ಗೋಪಾಲ್ ಪೆರ್ಮುದೆ ಅರ್ಥಧಾರಿಯೂ, ವೇಷಧಾರಿಯೂ ಆಗಿದ್ದರು.) ಹೊಸನಗರ, ಎಡನೀರು ಮತ್ತು ಹನುಮಗಿರಿ ಮೇಳದಲ್ಲಿ ಸರ್ವ ಕಲಾವಿದರೂ ಸಹಕರಿಸಿದ್ದಾರೆ. ಚೆನ್ನಪ್ಪ ಶೆಟ್ರು ನಮ್ಮಿಂದ ದೂರವಾದುದು ತುಂಬಲಾರದ ನಷ್ಟ. ಅವರು ಹೇಳಿಕೊಟ್ಟು ನನ್ನನ್ನು ತಿದ್ದಿದ್ದಾರೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ನನ್ನನ್ನು ವ್ಯಕ್ತಿಯಾಗಿ ರೂಪಿಸಿದವರು, ಕಾಣಿಸಿಕೊಳ್ಳಲು ಕಾರಣರು ಡಾ. ಶ್ರೀ ಟಿ. ಶ್ಯಾಮ್ ಭಟ್ಟರು. ಬದುಕಿನ ಪುನರುತ್ಥಾನಕ್ಕೆ ಅವರು ಕಾರಣರು. ಕೇಳಿದ್ದನ್ನು ಇಲ್ಲ ಎಂದು ಹೇಳಿಲ್ಲ. ಅವರ ಮನೆಯ ಸದಸ್ಯನಂತೇ ನೋಡಿದ್ದಾರೆ. ಅವರು ಕಲಾವಿದರ ಪಾಲಿಗೆ ಕಲ್ಪವೃಕ್ಷ. ಇದು ಜಯಾನಂದ ಸಂಪಾಜೆ ಅವರ ಮನದ ಮಾತುಗಳು. ಸಂಪಾಜೆ ಜಯಾನಂದರು ಉತ್ತಮವಾಗಿ ಭಾಷಣ ಮಾಡಬಲ್ಲರು. ಕನ್ನಡ ಭಾಷೆಯಲ್ಲಿ ಉತ್ತಮ ಹಿಡಿತವಿದ್ದು ನಾಟ್ಯ ಮತ್ತು ಹಿತವಾದ ಮಾತುಗಳಿಂದ ಪೀಠಿಕೆ ವೇಷಗಳನ್ನು ಧರಿಸಿ ಕಲಾಸೇವೆ ಮಾಡುತ್ತಿದ್ದಾರೆ. ಹೆಚ್ಚಿನ ಎಲ್ಲಾ ಪ್ರಸಂಗಗಳಲ್ಲಿ ದೇವೇಂದ್ರನೇ ಮೊದಲಾದ ಪ್ರಸಂಗದ ಮೊದಲ ವೇಷಗಳು ಇವರಿಗೇ ಮೀಸಲು. ಹಾಗಾಗಿ ಕಲಾಭಿಮಾನಿಗಳಿಂದ ‘ಅಭಿನವ ದೇವೇಂದ್ರ’ ಎಂದು ಕರೆಸಿಕೊಂಡಿದ್ದಾರೆ. ಗೂನಡ್ಕದ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಮೈಸೂರಿನ ಕರಾವಳೀ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಯಕ್ಷಗಾನ ನಾಟ್ಯ ಮತ್ತು ಸಂಭಾಷಣೆಗಳ ಬಗೆಗೆ ತರಬೇತಿಯನ್ನೂ ನೀಡುತ್ತಿದ್ದಾರೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
“ಯಕ್ಷಗಾನಕ್ಕೆ ನಾಟ್ಯವೇ ಮುಖ್ಯವಲ್ಲ. ಪ್ರೌಢ ಮಾತುಗಾರಿಕೆಯೂ ಬೇಕು. ಸಂಭಾಷಣೆಗಳು ಭಾವನಾತ್ಮಕವಾಗಿರಬೇಕು. ಅಭಿನಯ ಮತ್ತು ಮಾತುಗಳಲ್ಲಿ ರಸಸೃಷ್ಟಿಯಾಗಲೇ ಬೇಕು. ಅಭ್ಯಾಸಿಗಳು ಆ ನಿಟ್ಟಿನಲ್ಲಿ ಗಮನ ಹರಿಸಲೇ ಬೇಕು. ಆಧುನಿಕತೆಯ ಶೈಲಿಯಲ್ಲಿ ಯಕ್ಷಗಾನವನ್ನು ಪ್ರದರ್ಶಿಸಬಾರದು. ಹಿಮ್ಮೇಳ ಮತ್ತು ಮುಮ್ಮೇಳಗಳು ಒಂದಕ್ಕೊಂದು ಪೂರಕವಾಗಿರಬೇಕು. ಯಕ್ಷಗಾನದ ಪಾತ್ರಗಳ ವೇಗಕ್ಕೆ ಕಡಿವಾಣ ಹಾಕಬೇಕು. ಈಗ ಅಪಘಾತದ ವೇಗವಿರುವುದನ್ನು ಕಾಣಬಹುದು. ಫೋಟೋಗಳಿಗೆ ಫೋಸ್ ಕೊಟ್ಟವ ಕಲಾವಿದನಲ್ಲ. ಪಾತ್ರದ ಒಳಹೊಕ್ಕು ಆ ಪಾತ್ರವಾಗಿಯೇ ಅಭಿನಯಿಸಿದವ ಕಲಾವಿದ. ಕಲಾವಿದರ ಜತೆ ಪ್ರೇಕ್ಷಕನೂ ಪ್ರಬುದ್ಧನಾಗಿರಬೇಕು. ರಸಾಸ್ವಾದನೆ ಮಾಡುವ, ಪ್ರತಿಭೆಯನ್ನು ನಿರ್ಣಯಿಸುವ ಪ್ರೇಕ್ಷಕರೇ ಯಕ್ಷಗಾನಕ್ಕೆ ಆಸ್ತಿ. ಅನಕ್ಷರಸ್ಥರಾಗಿದ್ದ ಹಿಂದಿನ ಕಾಲದ ಪ್ರೇಕ್ಷಕರು ಯಕ್ಷಗಾನವನ್ನು ಆಸ್ವಾದಿಸುವಲ್ಲಿ ಪ್ರಬುದ್ಧರಾಗಿದ್ದರು. ಆ ಅನುಭವ ನಮಗಾಗಿದೆ. ಪಾತ್ರವು ಮೇಳಯಿಸಬೇಕಾದರೆ ಪಾತ್ರಧಾರಿ ಪಾತ್ರದ ಒಳ ಹೊಕ್ಕರೆ ಸಾಲದು. ಪ್ರೇಕ್ಷಕನೂ ಆ ಪಾತ್ರದ ಒಳ ಹೋಗಿರಬೇಕು. ಪಾತ್ರಧಾರಿಗೆ ವಾದ ಮತ್ತು ಸಂವಾದದ ಅಂತರವು ತಿಳಿದಿರಬೇಕು. ವಾದ ಮಾಡುವಲ್ಲಿ ಸಂವಾದ ಮಾಡಿದರೆ, ಸಂವಾದ ಮಾಡುವಲ್ಲಿ ವಾದ ಮಾಡಿದರೆ ಪರಿಣಾಮ ಕೆಡುಕಾಗುತ್ತದೆ. ಕಲಾವಿದ ಕವಿಯ ಆಶಯವನ್ನು ಮೀರಿ ನಡೆಯಬಾರದು. ನಡೆದರೆ ಕವಿಯ ಆಶಯವು ಪ್ರಕಟವಾಗದೆ ಪ್ರಸಂಗವು ಸೋಲುವುದು” ಎಂಬ ನಿಲುಮೆಗಳನ್ನು ಹೊಂದಿರುವ ಸಂಪಾಜೆ ಜಯಾನಂದರು ಪಾವಂಜೆ ಯಕ್ಷಧ್ರುವ ಪ್ರಶಸ್ತಿ ಮತ್ತು ಅರಸು ಸಂಕಲ ಪ್ರಶಸ್ತಿಯನ್ನು ಪಡೆದಿರುತ್ತಾರೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಅಲ್ಲದೆ ಅನೇಕ ಕಡೆ ಸನ್ಮಾನಿತರಾಗಿದ್ದಾರೆ. ಅಭಿನವ ದೇವೇಂದ್ರ ಶ್ರೀ ಜಯಾನಂದ ಸಂಪಾಜೆ ಸಂಸಾರಿಕವಾಗಿಯೂ ತೃಪ್ತರು. ಜಯಾನಂದ ಮತ್ತು ವಿಜಯಾ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕು| ಭ್ರಾಮರೀ II PUC ವಿದ್ಯಾರ್ಥಿನಿ. ಪುತ್ರ ಮಾ| ನೈಋತ್ಯ I PUC ವಿದ್ಯಾರ್ಥಿ. ಮಕ್ಕಳಿಬ್ಬರ ಬಾಳು ಬಂಗಾರವಾಗಲಿ. ಸಂತಸದಿಂದ ಕೂಡಿರಲಿ. ಸಂಪಾಜೆ ಜಯಾನಂದರ ಕಲಾಸೇವೆಯು ನಿರಂತರವಾಗಿರಲಿ. ಕಲಾಮಾತೆಯ ಅನುಗ್ರಹ ಸದಾ ಇರಲಿ. ಕಲಾಭಿಮಾನಿಗಳ ಪರವಾಗಿ ಶುಭಹಾರೈಕೆಗಳು.
