ನಿಡ್ಲೆ ಗೋವಿಂದ ಭಟ್ 1958 ಅಕ್ಟೋಬರ್ 2ರಂದು ಈಶ್ವರ ಭಟ್ಟ ಮತ್ತು ಶಂಕರಿ ದಂಪತಿಗಳ ಪುತ್ರರಾಗಿ ನಿಡ್ಲೆಯಲ್ಲಿ ಜನಿಸಿದರು. ತನ್ನ ವಿದ್ಯಾಭ್ಯಾಸವನ್ನು ಏಳನೆಯ ತರಗತಿಗೆ ಮೊಟಕುಗೊಳಿಸಿ ಯಕ್ಷಗಾನ ಕಲೆಯತ್ತ ಆಕರ್ಷಿತರಾದರು. 1971ರಲ್ಲಿ ಧರ್ಮಸ್ಥಳ ಯಕ್ಷಗಾನ ಕೇಂದ್ರ ಪ್ರಥಮ ವರ್ಷದ ವಿದ್ಯಾರ್ಥಿಯಾಗಿ ಯಕ್ಷಗಾನದ ಶಿಕ್ಷಣ ಪಡೆದರು.
ಆಗ ಕೇಂದ್ರದಲ್ಲಿ ನಾಟ್ಯ ಶಿಕ್ಷಕರಾಗಿದ್ದ ಶ್ರೀ ಕುರಿಯ ವಿಠಲ ಶಾಸ್ತ್ರಿ ಮತ್ತು ಶ್ರೀ ಪಡ್ರೆ ಚಂದುರವರಿಂದ ಯಕ್ಷಗಾನ ನಾಟ್ಯವನ್ನು ಕಲಿತರು. ಅವರೀರ್ವರ ಗರಡಿಯಲ್ಲಿ ಪಳಗಿದ ನಿಡ್ಲೆ ಗೋವಿಂದ ಭಟ್ ಮುಂದೆ ಯಕ್ಷಗಾನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯಾಗಿ ಪರಿಗಣಿಸಲ್ಪಟ್ಟರು. ಯಕ್ಷಗಾನ ಕಲಿಕೆಯ ನಂತರ ವೇಣೂರು ಮೇಳದಲ್ಲಿ ಸುಮಾರು 12 ವರ್ಷಗಳ ಕಾಲ ತಿರುಗಾಟ ನಡೆಸಿದರು. ಕೋಡಂಗಿ ವೇಷಧಾರಿಯಾಗಿ ರಂಗ ಪ್ರವೇಶಿಸಿದ ಗೋವಿಂದ ಭಟ್ಟರು ಮುಂದಕ್ಕೆ ನಿತ್ಯವೇಷಗಳನ್ನು ಮಾಡಿ ಬಳಿಕ ಸುಬ್ರಹ್ಮಣ್ಯ, ಕರ್ನಾಟಕ, ಪುತ್ತೂರು, ಗೀತಾಂಬಿಕಾ ಯಕ್ಷಗಾನ ಮಂಡಳಿ, ಮುಂಬಯಿ, ಬಪ್ಪನಾಡು ಮೇಳಗಳಲ್ಲಿ ಕೂಡಾ ಕಲಾವಿದನಾಗಿ ತಿರುಗಾಟ ನಡೆಸಿದ್ದರು.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ತಮ್ಮ ಕಲಾಜೀವನದಲ್ಲಿ ಸ್ತ್ರೀಪಾತ್ರಗಳನ್ನು ಹೊರತುಪಡಿಸಿ ಹೆಚ್ಚಿನೆಲ್ಲಾ ಪಾತ್ರಗಳನ್ನು ನಿರ್ವಹಿಸಿದ ಕೀರ್ತಿ ಶ್ರೀಯುತ ನಿಡ್ಲೆಯವರಿಗೆ ಸಲ್ಲುತ್ತದೆ. ಅವರ ಶರೀರ, ಶಾರೀರಗಳು ಸ್ತ್ರೀಪಾತ್ರಕ್ಕೆ ಹೊಂದುವುದಿಲ್ಲವೆಂದು ತಾನು ಸ್ತ್ರೀಪಾತ್ರವನ್ನು ಇಷ್ಟಪಡುತ್ತಿರಲಿಲ್ಲವೆಂದು ಗೋವಿಂದ ಭಟ್ಟರು ಹೇಳುತ್ತಾರೆ. ಆ ನಂತರ ಧರ್ಮಸ್ಥಳ ಮೇಳವೊಂದರಲ್ಲೇ ಸುದೀರ್ಘ ಸಮಯದ ಕಾಲ ತಿರುಗಾಟ ನಡೆಸಿ ಮೇಳದಿಂದ ಸ್ವಯಂ ನಿವೃತ್ತಿ ಬಯಸಿ ಕೃಷಿ ಹಾಗೂ ಯಕ್ಷಗಾನ ಎರಡನ್ನೂ ಸಮನ್ವಯತೆಯಿಂದ ಮುಂದುವರಿಸಿಕೊಂಡು ಹೋಗುತ್ತಾ ಇದ್ದಾರೆ.

ಪ್ರಮುಖ ಪಾತ್ರಧಾರಿಯಾಗಿ ಗುರುತಿಸಲ್ಪಟ್ಟು ಸುಮಾರು 23 ವರ್ಷಗಳಷ್ಟು ಕಾಲ ಧರ್ಮಸ್ಥಳ ಮೇಳವೊಂದರಲ್ಲೇ ಕಲಾಸೇವೆ ಮಾಡಿದ್ದರು. ಇಂದ್ರಜಿತು, ದಕ್ಷ, ವಿಶ್ವಾಮಿತ್ರ, ಕೌಂಡ್ಲಿಕ, ರಾವಣ, ಕೌರವ, ಕಂಸ, ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆಯ ಮುಸಲ್ಮಾನ ವ್ಯಾಪಾರಿ, ಕರ್ಣ ಮೊದಲಾದ ಪಾತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಪ್ರಸಿದ್ಧಿಯಾದರು. ಇಂತಹ ವೇಷಗಳಲ್ಲಿ ಹೆಸರು ಮಾಡಿದರೂ ನಿಡ್ಲೆಯವರು ನಿರ್ವಹಿಸದ ಪಾತ್ರಗಳಿಲ್ಲ. ಮಹಿಷಾಸುರನೇ ಮೊದಲಾದ ಹಲವಾರು ಬಣ್ಣದ ವೇಷಗಳಲ್ಲೂ ವಲಲ ಭೀಮ, ಘಟೋತ್ಕಜ ಪಾತ್ರಗಳಲ್ಲೂ ಮಿಂಚಿದವರು. ಅವರು ಎಲ್ಲ ಬಗೆಯ ಪಾತ್ರಗಳಿಗೂ ಸೈ ಎನ್ನುವವರು.

ಪ್ರಚಾರಪ್ರಿಯರಾಗದೆ ತನ್ನ ಕೆಲಸ ತಾನು ಮಾಡಿಕೊಂಡು ಹೋಗುವ ಕಲಾವಿದ. ಆದರೂ ಹಲವಾರು ಸಂಘ-ಸಂಸ್ಥೆಗಳು ಅವರನ್ನು ಗುರುತಿಸಿ ಸನ್ಮಾನ, ಪ್ರಶಸ್ತಿಗಳನ್ನೂ ನೀಡಿ ಗೌರವಿಸಿದೆ. ಮಳೆಗಾಲದಲ್ಲಿ ಪರವೂರುಗಳಲ್ಲಿ ತಿರುಗಾಟ ನಡೆಸುತ್ತಿದ್ದ ತನ್ನದೇ ಪ್ರವಾಸೀ ತಂಡವಾದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ’ಯನ್ನು ಸ್ಥಾಪಿಸಿದ್ದರು. ಇಷ್ಟರವರೆಗೆ ಸುಮಾರು 33 ವರ್ಷಗಳ ಕಾಲ ಮಳೆಗಾಲದ ತಿರುಗಾಟವನ್ನೂ ಅವರ ಈ ಯಕ್ಷಗಾನ ಮಂಡಳಿಯು ಯಶಸ್ವಿಯಾಗಿ ಪೂರೈಸಿತ್ತು.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಮಂಡಳಿ ಪ್ರಾರಂಭಿಸಿದ ವರ್ಷದಲ್ಲಿ ಕೇವಲ 15 ಆಟಗಳು ಮಾತ್ರ ಸಿಕ್ಕಿತ್ತು. ಆಮೇಲೆ ಹೆಚ್ಚಾಗುತ್ತಾ ಹೋಗಿ ಬೆಳೆಯುತ್ತಾ ಬೆಳೆಯುತ್ತಾ ತನ್ನ ಕಾರ್ಯ ವ್ಯಾಪ್ತಿ ವಿಸ್ತಾರಗೊಳಿಸಿ ಮಳೆಗಾಲದ ಅವಧಿಯಲ್ಲಿ 122 ಯಕ್ಷಗಾನ ಪ್ರದರ್ಶನಗಳನ್ನು ಮಾಡಿದ್ದು ನಿಡ್ಲೆಯವರ ಯಕ್ಷಗಾನ ಮಂಡಳಿಯ ಸಾಧನೆ. ಮೈಸೂರು, ಬೆಂಗಳೂರು, ಚೆನ್ನೈ, ಕೊಯಂಬತ್ತೂರು, ಹೈದರಾಬಾದ್, ಮಂತ್ರಾಲಯ, ವಿಜಯವಾಡ, ವಿಶಾಖಪಟ್ಟಣ, ಕಲ್ಕತ್ತಾ, ಬೀದರ್, ಗುಲ್ಬರ್ಗಾ, ಹಂಪೆ ಕನ್ನಡ ವಿ.ವಿ., ಹಾವೇರಿ ಗೊಟಗೋಡಿ ಜನಪದ ವಿ.ವಿ., ಪೂನಾ, ಬಾಗಲಕೋಟೆ, ಅಥಣಿ, ನೀಲೇಶ್ವರ, ಶ್ರೀಶೈಲಂ ಮೊದಲಾದ ಕಡೆಗಳಲ್ಲಿ ನಿಡ್ಲೆ ಗೋವಿಂದ ಭಟ್ಟರ ತಂಡವು ಯಶಸ್ವೀ ಪ್ರದರ್ಶನಗಳನ್ನು ನೀಡಿತ್ತು.

ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ ಈ ಸಂಸ್ಥೆಗೆ 34ರ ಹರೆಯ. ಮೇಳದ ತಿರುಗಾಟವನ್ನು ಮುಗಿಸಿದ ನಂತರ ಮಳೆಗಾಲದಲ್ಲಿ ಕೆಲಸವಿಲ್ಲದೆ ಇರುತ್ತಿದ್ದ ಅನೇಕ ಕಲಾವಿದರಿದ್ದರು. ಅದೂ ಅಲ್ಲದೆ ತನ್ನ ಆರ್ಥಿಕ ಪರಿಸ್ಥಿತಿಯೂ ಆಗ ಅಷ್ಟೇನೂ ಉತ್ತಮವಾಗಿರಲಿಲ್ಲ ಎಂದು ಗೋವಿಂದ ಭಟ್ಟರು ಹೇಳುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಆಲೋಚನೆಯೊಂದು ಹೊಳೆಯಿತು. ಮನದಲ್ಲಿ ರೂಪುರೇಷೆ ಸಿದ್ಧವಾಯಿತು. ಯೋಚಿಸಿದ ಕೆಲಸಕ್ಕೆ ಸಹೋದರ ಶ್ರೀ ನಾರಾಯಣ ಭಟ್ಟರ ಸಹಕಾರವೂ ಸಿಕ್ಕಿತು. ಆ ಆಲೋಚನೆಗಳ ಕಾರ್ಯರೂಪವೋ ಎಂಬಂತೆ ‘ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ’ಯು ಜನ್ಮ ತಾಳಿತು.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಮೊದಲೇ ಹೇಳಿದಂತೆ ಪ್ರಥಮ ವರ್ಷದಲ್ಲಿ ಕೇವಲ 15 ಆಟಗಳು ನಿಗದಿಯಾದುವು (ಅದರಲ್ಲಿ ಕೆಲವು ರದ್ದಾಗಿವೆ). ಆಮೇಲೆ ಬೆಳೆಯುತ್ತಾ ಹೋಗಿ ವರ್ಷಕ್ಕೆ 125 ಆಟಗಳಷ್ಟು ನಿಗದಿಯಾದದ್ದೂ ಇದೆ ಎಂದು ನಿಡ್ಲೆಯವರು ಹೇಳುತ್ತಾರೆ. ಪ್ರಯತ್ನಪಟ್ಟರೆ ಇನ್ನೂ ಹೆಚ್ಚು ಆಟಗಳನ್ನು ಪ್ರದರ್ಶಿಸಲು ಸಾಧ್ಯವಿದೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ. ಆದರೆ ಮನೆಯ, ಕೃಷಿಯ ಕೆಲಸಗಳಿಂದಾಗಿ ಆ ಕಡೆಗೂ ಗಮನ ಕೊಡಬೇಕಾಗುತ್ತದೆಯಂತೆ. ಹೆಚ್ಚಿನೆಲ್ಲಾ ಹಿರಿಯ, ಕಿರಿಯ ಕಲಾವಿದರು ನಿಡ್ಲೆಯವರ ತಂಡದಲ್ಲಿ ತಿರುಗಾಟ ನಡೆಸಿದ್ದಾರೆ.

ಪ್ರಸ್ತುತ ಧರ್ಮಸ್ಥಳ ಸಮೀಪ ನಿಡ್ಲೆಯಲ್ಲಿ ವಾಸವಾಗಿರುವ ಗೋವಿಂದ ಭಟ್ಟರದು ಕೃಷಿಕ ಕುಟುಂಬ. ಚಿಕ್ಕ ಸಂಸಾರ, ಚೊಕ್ಕ ಸಂಸಾರ. ಮಗ ಈಶ್ವರಚಂದ್ರ ನಿಡ್ಲೆ ಮತ್ತು ಮಗಳು ವಿದ್ಯಾಶಂಕರಿ. ಪತ್ನಿ ವಸಂತಿ ಪತಿಯ ಕಾರ್ಯಗಳಿಗೆ ಸಹಕಾರಿಯಾಗಿ ಸಂಸಾರ ತೂಗಿಸುವ ಆದರ್ಶ ಗೃಹಿಣಿ.
ಲೇಖನ: ಮನಮೋಹನ್ ವಿ.ಎಸ್.