ದೇರಾಜೆ ಸೀತಾರಾಮಯ್ಯನವರ ವಿಶಿಷ್ಟ ಕೃತಿ ‘ಕುರುಕ್ಷೇತ್ರಕ್ಕೊಂದು ಆಯೋಗ’ ಪುಸ್ತಕವು ತನ್ನ ತೃತೀಯ ಮುದ್ರಣದ ಸೌಭಾಗ್ಯವನ್ನು ಕಂಡಿದೆ.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ಖ್ಯಾತ ಸಾಹಿತಿಯೂ, ವಿದ್ವಾಂಸರೂ, ತಾಳಮದ್ದಳೆ ಅರ್ಥಧಾರಿಗಳೂ ಆಗಿದ್ದ ದಿ| ದೇರಾಜೆ ಸೀತಾರಾಮಯ್ಯನವರ ಈ ಕೃತಿಯು ಕನ್ನಡ ಸಾರಸ್ವತ ಲೋಕಕ್ಕೊಂದು ಅಮೂಲ್ಯ ಕೊಡುಗೆಯಾಗಿತ್ತು. ಮಹಾಭಾರತ ಪುರಾಣ ಕಥೆಯ ಪಾತ್ರಗಳ ಒಳಹೊಕ್ಕು ನೋಡಿ ಅದನ್ನು ಅತಿ ವಿಶಿಷ್ಟವಾಗಿ ಅಭಿವ್ಯಕ್ತಿಗೊಳಿಸಿದ ಹಾಗೂ ಪುರಾಣ ಘಟನೆಗಳನ್ನು ವಿಮರ್ಶಾತ್ಮಕವಾಗಿ ಅದರ ಮೇಲೆ ಹೊಸತನದ ಬೆಳಕನ್ನು ಚಿತ್ರಿಸಿದ ದೇರಾಜೆ ಸೀತಾರಾಮಯ್ಯನವರ ಕೃತಿಯೇ ‘ಕುರುಕ್ಷೇತ್ರಕ್ಕೊಂದು ಆಯೋಗ’.

ಮೂರನೇ ಮುದ್ರಣವನ್ನು ಬಿಡುಗಡೆಗೊಳಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಇಂತಹಾ ಗ್ರಂಥಗಳಿಂದ ಧಾರ್ಮಿಕ ಜಾಗೃತಿಯು ಪ್ರಚೋದಿಸಲ್ಪಡುತ್ತದೆ ಎಂದು ಶುಭ ಹಾರೈಸಿದರು.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ಈ ಪುಸ್ತಕವು ಉಜಿರೆಯ ಮಂಜುಶ್ರೀ ಪ್ರಿಂಟರ್ಸ್ ನಲ್ಲಿ ಇದೀಗ ಮುದ್ರಣಗೊಡಿದೆ. ಮುಂಬೈಯ ಉದ್ಯಮಿ ಕೊಳಚೂರುಗುತ್ತು ಜಗನ್ನಾಥ ಎನ್. ಶಟ್ಟಿ ಹಾಗೂ ಅವರ ಪತ್ನಿ, ಮಗ, ಸೊಸೆ ಹಾಗೂ ಶಾಂತಿವನ ಟ್ರಸ್ಟಿನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ, ಡಾ. ಶ್ರೀನಾಥ್ ಎಂ.ಪಿ ಕಾರ್ಯಕ್ರಮದಲ್ಲಿ ಹಾಜರಿದ್ದರು.