ಅಳಿಕೆ ರಾಮಯ್ಯ ರೈ – ಸಂಕ್ಷಿಪ್ತ ಮಾಹಿತಿ ಹೆಸರು: ಅಳಿಕೆ ರಾಮಯ್ಯ ರೈ ಜನನ: 1915ನೇ ಇಸವಿ ಮಾರ್ಚ್ 17ರಂದು ಜನನ ಸ್ಥಳ: ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅಳಿಕೆ ಗ್ರಾಮ. ತಂದೆ ತಾಯಿ: ತಂದೆ: ಅಳಿಕೆ ಮೋನಪ್ಪ ರೈ ತಾಯಿ: ಶ್ರೀಮತಿ ಮಂಜಕ್ಕೆ ವಿದ್ಯಾಭ್ಯಾಸ: 4ನೇ ತರಗತಿ ವರೆಗೆ
ಯಕ್ಷಗಾನ ಗುರುಗಳು: ತಂದೆ ಅಳಿಕೆ ಮೋನಪ್ಪ ರೈಯವರೇ ನಾಟ್ಯಮತ್ತು ಮಾತುಗಾರಿಕೆಗೆ ಮೊದಲ ಗುರುಗಳು.ಅಳಿಕೆ ರಾಮಯ್ಯ ರೈಗಳ ಅಜ್ಜ ಅಟ್ಟೆಪ್ಪಿಲ ರಾಮಣ್ಣ ರೈಗಳು ಆ ಕಾಲದ ಉತ್ತಮ ಭಾಗವತರಾಗಿದ್ದರು. ಹೀಗಾಗಿ ಯಕ್ಷಗಾನ ಕಲೆಯು ಅಳಿಕೆ ರಾಮಯ್ಯ ರೈಗಳಿಗೆ ರಕ್ತಗತ. ಭಾಗವತಿಕೆಗೆ ಗುರುಗಳು: ಮವ್ವಾರು ಕಿಟ್ಟಣ್ಣ ಭಾಗವತರು ರಂಗಪ್ರವೇಶ: 1927ನೇ ಇಸವಿ ಜನವರಿಯಲ್ಲಿ ತನ್ನ ಹನ್ನೊಂದನೆಯ ವಯಸ್ಸಿನಲ್ಲಿ ಮಾಂಬಾಡಿ ನಾರಾಯಣ ಭಾಗವತರಿಂದ ಗೆಜ್ಜೆ ಪಡೆದು ಕೂಡ್ಲು ಶ್ರೀ ಗೋಪಾಲಕೃಷ್ಣ ದೇವರ ಸಾನ್ನಿಧ್ಯದಲ್ಲಿ ರಂಗಪ್ರವೇಶ ಮಾಡಿದ್ದರು.

ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : ಆ ಕಾಲದ ಪ್ರಸಿಧ್ಧ ವೇಷಧಾರಿಗಳಿಂದ
ಅನುಭವ: ಕೊಡಿಯಾಲಗುತ್ತು ಶಂಭು ಹೆಗ್ಗಡೆ ಸಂಚಾಲಕತ್ವದ ಕದ್ರಿ ಮೇಳದಲ್ಲಿ ತಿರುಗಾಟ, ಕದ್ರಿ ಮೇಳದ ನಂತರ ರಾಮಯ್ಯ ರೈಗಳ ತಿರುಗಾಟ ಕಟೀಲು ಮೇಳದಲ್ಲಿ, ನಂತರ ಕರ್ನಾಟಕ ಮೇಳದಲ್ಲಿ. ಕರ್ನಾಟಕ ಮೇಳವು ತಿರುಗಾಟವನ್ನು ನಿಲ್ಲಿಸಿದಾಗ ಮತ್ತೆ ಕಟೀಲು ಮೇಳದಲ್ಲಿ ವ್ಯವಸಾಯ. ಒಟ್ಟು ಕಲಾಸೇವೆ 1926ರಿಂದ ತೊಡಗಿ 1984ರ ವರೆಗೆ. ಒಟ್ಟು ೫೮ ವರ್ಷಗಳು. ಆಮೇಲೆ ಸ್ವಯಂ ನಿವೃತ್ತಿ. ಮಕ್ಕಳು: ಇಬ್ಬರು ಗಂಡು ಮಕ್ಕಳು ಉದ್ಯೋಗಸ್ಥರಾಗಿ ಮತ್ತು ನಾಲ್ವರು ಹೆಣ್ಣು ಮಕ್ಕಳು ವಿವಾಹಿತೆಯರಾಗಿ ತಮ್ಮ ತಮ್ಮ ಕುಟುಂಬದೊಂದಿಗೆ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ. ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ತೆಂಕುತಿಟ್ಟಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದ ಮೊದಲ ಕಲಾವಿದ. ಕೇಂದ್ರ ಸಂಗೀತ – ನಾಟಕ ಅಕಾಡೆಮಿಯ ಪ್ರಶಸ್ತಿ, ಮತ್ತು ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.

ಅಳಿಕೆ ರಾಮಯ್ಯ ರೈಗಳ ವಿಶೇಷತೆ:ಅಳಿಕೆಯವರು ಸಮರ್ಥ ಭಾಗವತರಾಗಿ ಪ್ರದರ್ಶನವನ್ನು ಮುನ್ನಡೆಸಬಲ್ಲವರಾಗಿದ್ದರು. ಆ ಸಾಮರ್ಥ್ಯವನ್ನು ಮಾಡಿ ತೋರಿಸಿದ್ದರು. ಪುಂಡುವೇಷ, ಸ್ತ್ರೀವೇಷ, ರಾಜವೇಷ ಅಥವಾ ಎದುರುವೇಷ ಹೀಗೆ ಎಲ್ಲದರಲ್ಲಿಯೂ ಅದ್ವಿತೀಯರಾಗಿ ಮೆರೆದವರು ಅಳಿಕೆ ರಾಮಯ್ಯ ರೈ. ರಾಜ್ಯಪ್ರಶಸ್ತಿ ಪಡೆದ ಮೊದಲ ತೆಂಕಿನ ಕಲಾವಿದನೆಂಬ ಹೆಗ್ಗಳಿಕೆ. ಜೋಡಾಟಗಳ ಪ್ರವೀಣ. ಪ್ರಸಿದ್ಧಿ ತಂದುಕೊಟ್ಟ ಪಾತ್ರಗಳು: ದುಷ್ಯಂತ, ನಳ, ಅತಿಕಾಯ, ಹಿರಣ್ಯಾಕ್ಷ, ಇಂದ್ರಜಿತು, ಋತುಪರ್ಣ, ಕರ್ಣ, ಹನೂಮಂತ, ಕೌರವ, ರಕ್ತಬೀಜ, ಅರ್ಜುನ, ಕೀಚಕ, ಅಭಿಮನ್ಯು, ಬಭ್ರುವಾಹನ, ಶ್ವೇತಕುಮಾರ, ಚಂದ್ರಮತಿ, ದಮಯಂತಿ, ಶಕುಂತಲೆ, ಅಂಬೆ, ಮಂಡೋದರಿ ನಿಧನ: ಆಗಸ್ಟ್ 21, 1989.
ಲೇಖನ: ಮನಮೋಹನ್ ವಿ. ಎಸ್