Saturday, January 18, 2025
Homeಪುಸ್ತಕ ಮಳಿಗೆಯಕ್ಷಗಾನ ಗುರುಕುಲದ ರೂವಾರಿ - ಕವಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ

ಯಕ್ಷಗಾನ ಗುರುಕುಲದ ರೂವಾರಿ – ಕವಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ

ಶೀರ್ಷಿಕೆಯೇ ಸೂಚಿಸುವಂತೆ ಈ ಹೊತ್ತಗೆಯು ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಬಗೆಗೆ ಬರೆಯಲ್ಪಟ್ಟಿತು. ಈ ಪುಸ್ತಕದ ಲೇಖಕರು ಶ್ರೀ ಚಂದ್ರಶೇಖರ ಮಂಡೆಕೋಲು. ಪತ್ರಕರ್ತರಾದ ಶ್ರೀಯುತರು ಸಾಹಿತ್ಯ ಮತ್ತು ಯಕ್ಷಗಾನಾಸಕ್ತರೂ ಹೌದು. ಸಂಗ್ರಹಿಸುವುದು ಒಂದು ಸಾಹಸ ಕಾರ್ಯವೇ ಸರಿ. ಕೀರಿಕ್ಕಾಡು ಮಾಸ್ತರರ ಬಗೆಗೆ ವಿಚಾರಗಳನ್ನು ಸಂಗ್ರಹಿಸಿ ಅದನ್ನು ಅಕ್ಷರ ರೂಪಕ್ಕಿಳಿಸಿ ಈ ಪುಸ್ತಕವನ್ನು ಓದುಗರಿಗೆ ನೀಡಿರುತ್ತಾರೆ. ‘ಯಕ್ಷಗಾನ ಗುರುಕುಲದ ರೂವಾರಿ – ಕವಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ’ ಎಂಬ ಈ ಪುಸ್ತಕದ ಪ್ರಕಾಶಕರು ಕನ್ನಡ ಸಂಘ ಕಾಂತಾವರ. ಇದು 2015ರಲ್ಲಿ ಪ್ರಕಟವಾಗಿತ್ತು. ಸದ್ರಿ ಸಂಘದ ‘ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಾಗಿ ಹೊರಬಂದಿತ್ತು. ಸಂಘದ ಅಧ್ಯಕ್ಷ ಡಾ. ನಾ. ಮೊಗಸಾಲೆ ಅವರೂ. ಸಂಪಾದಕ ಡಾ.ಬಿ. ಜನಾರ್ದನ ಭಟ್ ಅವರೂ ಲೇಖನಗಳ ಮೂಲಕ ಅನಿಸಿಕೆಗಳನ್ನು ವ್ಯಕ್ತಪಡಿಸಿರುತ್ತಾರೆ. ಬಳಿಕ ಮಹಾನ್ ಸಾಧಕರಾದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಬದುಕು, ಸಾಧನೆ, ವ್ಯಕ್ತಿತ್ವಗಳ ಬಗೆಗೆ ವಿವರಗಳನ್ನು ಶ್ರೀ ಚಂದ್ರಶೇಖರ ಮಂಡೆಕೋಲು ಅವರು ತಮ್ಮ ಬರಹದಲ್ಲಿ ಓದುಗರಿಗೆ ತಿಳಿಸಿದ್ದಾರೆ.

ಅತ್ತ ಯುದ್ಧದ ಬಯಲು, ಇತ್ತ ಈ ಮನೆಯ ಜಗುಲಿ, ನಿರ್ಮಲ ಜಲಸಮೀಪದಿ ಮಾಡಿಕೊಂಡರು ಪರ್ಣಶಾಲೆಯ, ಅಮ್ಮ ಹೇಳುತ್ತಿದ್ದ ಕಥೆಗಳು, ಮೊದಲ ರಂಗಸ್ಥಳ ಕೀರಿಕ್ಕಾಡು ಗುಡ್ಡ, ಮನೆತನದ ಶಾಲೆಗೆ ಗುರುವಾಗಿದ್ದು, ಮಾಸ್ತರರ ಸರ್ವೋದಯ ಭಾವ, ಶಾಲೆಯೇ ಬದುಕಿನ ಪ್ರಯೋಗ ರಂಗ, ಶ್ವೇತಕುಮಾರ ಚರಿತೆಯನ್ನು ಬರೆದದ್ದು, ಕೀರಿಕ್ಕಾಡಿನಿಂದ ಬನಾರಿಗೆ ಪಯಣ, ಮಾಡಿಕೊಂಡರು ಪರ್ಣಶಾಲೆಯ, ಗಾಂಧೀಜಿಯ ಸತ್ಯಾಗ್ರಹ, ಶಿಷ್ಯಂದಿರ ಬದುಕಿಗೂ ನೆರವಾದರು, ಆ ನೆಲದಲ್ಲಿ ಕೃಷ್ಣ ಸಿಕ್ಕಿದ್ದ, ನಿಜದ ನಾಡೋಜ, ಯಕ್ಷಗಾನ ನಾಟಕವೆಂಬ ಪರಿಕಲ್ಪನೆ, ಅಧಿಕಾರಿಗಳಲ್ಲೂ ಕಲೆಯ ಬೆಳಗು, ಪೊರೆವ ಮಣ್ಣೂ ಔಷಧಿಯಾದಾಗ, ಅಕ್ಷರಗಳಲ್ಲಿ ಎದೆಯ ದನಿ, ಶರಣನ ದರ್ಪಣ, ಎದೆ ತಟ್ಟುವ ಪದ ನಾದ, ಪ್ರಸಂಗ ಸಾಹಿತ್ಯದಲ್ಲೊಂದು ದಾಖಲೆ!, ಮೇರು ಕಲಾವಿದನೂ ಎದ್ದು ಬಂದು ನಮಿಸಿದನೆಂದರೆ, ಪ್ರತ್ಯೇಕ ಶೈಲಿಯನ್ನೇ ಸೃಜಿಸಿದ ಅರ್ಥಗಾರಿಕೆ, ಕೀರಿಕ್ಕಾಡು ಮೀಮಾಂಸೆ, ದಾರಿ ತೋರುವ ಗೆಳೆಯ, ಯಕ್ಷಲೋಕದ ತಲೆಮಾರುಗಳ ಒಡನಾಟ, ಪ್ರೌಢ ಲಾಲಿತ್ಯದ ಭಾಷೆ, ಕೆಂಬುಡೆ ಹೂ ಚಟ್ನಿ ಕುದನೆಗೊಜ್ಜಿ ಕಾಟು ಕೇನೆ ಸಾಸಮೆ, ಅಜ್ಜನ ಶಾರದಾ ಡೈರಿ,ಇದು ಬರಿಯ ರಂಗಸ್ಥಳವಲ್ಲ, ತಂದೆಯಂತೆ ಮಕ್ಕಳು, ಈ ನಿಷ್ಠೆ ನಿರಂತರವಾಗಿರಲಿ ಎಂಬ ವಿಚಾರಗಳಡಿ ಶ್ರೀ ಚಂದ್ರಶೇಖರ ಮಂಡೆಕೋಲು ಅವರು ಈ ಹೊತ್ತಗೆಗೆ ರೂಪವನ್ನು ನೀಡಿರುತ್ತಾರೆ. ಅಲ್ಲದೆ ‘ಅನುಬಂಧಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ, ಡಾ. ಅಮೃತ ಸೋಮೇಶ್ವರ, ಮಂದಾರ ಕೇಶವ ಭಟ್ಟ, ಪೆರ್ಲ ಕೃಷ್ಣ ಭಟ್, ರಾಮಚಂದ್ರ ಉಚ್ಚಿಲ, ಕೆದಂಬಾಡಿ ಜತ್ತಪ್ಪ ರೈ, ಶೇಣಿ ಗೋಪಾಲಕೃಷ್ಣ ಭಟ್, ಕೇದಗಡಿ ಗುಡ್ಡಪ್ಪ ಗೌಡ ಅವರ ಅನಿಸಿಕೆಗಳನ್ನು ನೀಡಲಾಗಿದೆ. ಪುಸ್ತಕದ ಕೊನೆಯಲ್ಲಿ ಕನ್ನಡ ಸಂಘ ಕಾಂತಾವರದ ನಾಡಿಗೆ ನಮಸ್ಕಾರ ಗ್ರಂಥಮಾಲೆಯಡಿ ಪ್ರಕಟಗೊಂಡ ಪುಸ್ತಕಗಳ ವಿವರಗಳನ್ನು ನೀಡಲಾಗಿದೆ. ಪುಸ್ತಕದ ಹೊರ ಆವರಣದಲ್ಲಿ ಲೇಖಕ ಶ್ರೀ ಚಂದ್ರಶೇಖರ ಮಂಡೆಕೋಲು ಅವರ ಸಾಹಿತ್ಯಾಸಕ್ತಿಯ ಬಗೆಗೆ ಶ್ರೀ ಬಿ. ಜನಾರ್ದನ ಭಟ್ ಅವರು ಪ್ರಶಂಸಿಸಿ ಶುಭ ಹಾರೈಸಿದ ಬರಹವನ್ನು ನೀಡಲಾಗಿದೆ.

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments