‘ಶಿವಾನಂದ ಕವಿ ವಿರಚಿತ ಕನ್ನಡ ಬಯಲಾಟ, ನಿಜಗುಣ ಶಿವಯೋಗಿ (ಡಪ್ಪಿನಾಟ-ಸಣ್ಣಾಟ)’ ಈ ಕೃತಿಯು ಪ್ರಕಟವಾದುದು 2017ನೇ ಇಸವಿಯಲ್ಲಿ. ಇದರ ಪ್ರಕಾಶಕರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ. ಸಿ.ಕೆ. ನಾವಲಗಿ ಅವರು ಈ ಪುಸ್ತಕದ ಸಂಪಾದಕರು. ಇದು ಒಟ್ಟು ನೂರಾ ಎಂಬತ್ತೈದು ಪುಟಗಳಿಂದ ಕೂಡಿದೆ.
ಪ್ರಸಂಗವನ್ನು ಪದ್ಯ ಮತ್ತು ಸಂಭಾಷಣೆಗಳ ಸಹಿತ ನೀಡಲಾಗಿದೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿದ್ದ ನಾಡೋಜ ಬೆಳಗಲ್ಲು ವೀರಣ್ಣ ಅವರು ‘ಅಧ್ಯಕ್ಷರ ಮಾತು’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ. ಅವರು ತಮ್ಮ ಬರಹದಲ್ಲಿ ದೊಡ್ಡಾಟ, ಸಣ್ಣಾಟಗಳೆಂದರೇನು? ಅದು ಯಾವ ಭಾಗದಲ್ಲಿ ಪ್ರಚಲಿತವಾಗಿದೆ, ಕಲಾವಿದರು ಧರಿಸುವ ವೇಷಭೂಷಣಗಳು, ಕುಣಿತ ಮೊದಲಾದ ವಿಚಾರಗಳ ಬಗ್ಗೆ ತಿಳಿಸಿರುತ್ತಾರೆ. ಅಲ್ಲದೆ ಉತ್ತರ ಕರ್ನಾಟಕದ ಕಲಾಪ್ರದರ್ಶನಗಳ ಬಗ್ಗೆಯೂ ಮಾಹಿತಿಗಳನ್ನು ನೀಡಿರುತ್ತಾರೆ.
ನಿಜಗುಣ ಶಿವಯೋಗಿ ಎಂಬ ಬಯಲಾಟ ಪ್ರಸಂಗವನ್ನು ಬರೆದವರು ಶ್ರೀ ಯಲ್ಲಪ್ಪ ಮಾಸ್ತರರು. ಅವರು ‘ಶಿವಾನಂದ’ ಎಂಬ ಕಾವ್ಯನಾಮವನ್ನು ಹೊಂದಿದ್ದು ‘ನಿಜಗುಣ ಶಿವಯೋಗಿ’ ಎಂಬುದು ಉತ್ತರ ಕರ್ನಾಟಕದಲ್ಲಿ ಜನಜನಿತವಾದ ಡಪ್ಪಿನಾಟ ಎಂಬುದನ್ನೂ ಲೇಖನದಲ್ಲಿ ತಿಳಿಸಿದ್ದಾರೆ. ಈ ಕೃತಿಯಲ್ಲಿ ಅಕಾಡೆಮಿಯ ರಿಜಿಸ್ಟ್ರಾರರಾದ ಎಸ್.ಎಚ್.ಶಿವರುದ್ರಪ್ಪ ಅವರು ‘ಪ್ರಕಾಶಕರ ಮಾತು’ಎಂಬ ಶೀರ್ಷಿಕೆಯಡಿಯಲ್ಲಿ ಲೇಖನವನ್ನು ಬರೆದಿರುತ್ತಾರೆ.
ಸಂಪಾದನ ಡಾ. ಸಿ.ಕೆ.ನಾವಲಗಿ ಅವರಿಂದ. ಶ್ರೀಯುತರು ‘ಪ್ರಸ್ತಾವನೆ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿದ್ದಾರೆ. ಅವರು ತಮ್ಮ ಬರಹದಲ್ಲಿ ದೊಡ್ಡಾಟ, ಸಣ್ಣಾಟ ಅಲ್ಲದೆ ಉತ್ತರ ಕರ್ನಾಟಕದ ಕಲಾ ಪ್ರಕಾರಗಳ ಬಗೆಗೆ ಸವಿವರವಾಗಿ ತಿಳಿಸಿರುತ್ತಾರೆ. ಅಲ್ಲದೆ ‘ನಿಜಗುಣ ಶಿವಯೋಗಿ’ ಕಥಾನಕದ ಕವಿ ಶ್ರೀ ಯಲ್ಲಪ್ಪ ಮಾಸ್ತರರ ಬಗ್ಗೆ ಸವಿವರವಾಗಿ ತಿಳಿಸಿರುತ್ತಾರೆ. ಯಲ್ಲಪ್ಪ ಮಾಸ್ತರರ ಎಲ್ಲಾ ಬಯಲಾಟ ಕೃತಿಗಳೂ ‘ಶಿವಾನಂದ’ ಕಾವ್ಯನಾಮದಿಂದಲೇ ಬರೆಯಲ್ಪಟ್ಟಿವೆ. ಸಿದ್ದೇಶ್ವರನು ಕವಿಯ ಇಷ್ಟದೇವರಾಗಿದ್ದ ಎಂಬ ವಿಚಾರವನ್ನೂ ತಿಳಿಸಿದ್ದಾರೆ.
ಬಳಿಕ ಕೃತಿಪರಿಚಯವನ್ನೂ, ಕಥೆಯಲ್ಲಿ ಬರುವ ಪಾತ್ರಗಳ ವಿಶೇಷತೆಯನ್ನೂ ಡಾ.ಸಿ.ಕೆ. ನಾವಲಗಿ ಅವರು ತಮ್ಮ ಬರಹದಲ್ಲಿ ತಿಳಿಸಿದ್ದಾರೆ. ಶಿವಾನಂದ ಕವಿಯ ವಂಶಾವಳಿಯನ್ನು ಈ ಪುಸ್ತಕದಲ್ಲಿ ನೀಡಲಾಗಿದೆ.
ಕನ್ನಡ ನಾಡಿನ ಖರೆ ಜನಪದ ವಿದ್ವಾಂಸರ ಮತ್ತು ಖರೆ ಜನಪದ ಕಲಾವಿದರ ದಿವ್ಯ ಸ್ಮರಣೆಗೆ ಈ ಕೃತಿಯನ್ನು ಅರ್ಪಿಸಲಾಗಿದೆ. ನಿಜಗುಣ ಶಿವಯೋಗಿ ಎಂಬ ಈ ಕಥಾನಕವು ನಿಜಗುಣಿಯ ಪ್ರವೇಶ, ದೂತೆಯ ಪ್ರವೇಶ, ಶಂಭುಲಿಂಗನ ಪ್ರವೇಶ,ಪ್ರೇಮಲಾ ಪ್ರವೇಶ,ಬೀಸು ಪ್ರವೇಶ, ಕುರುಡಿ ಮುದುಕಿಯ ಪ್ರವೇಶ, ಭೂತ ಪ್ರವೇಶ ಎಂಬ ಏಳು ಹಂತಗಳಲ್ಲಿದೆ.
ಲೇಖನ: ರವಿಶಂಕರ್ ವಳಕ್ಕುಂಜ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions