Saturday, January 18, 2025
Homeಲೇಖನಬ್ರೇಕಿಂಗ್ ನ್ಯೂಸ್  - ನಟಿ ಸಂಜನಾ ಬಂಧನ 

ಬ್ರೇಕಿಂಗ್ ನ್ಯೂಸ್  – ನಟಿ ಸಂಜನಾ ಬಂಧನ 

ಇಂದು ಮುಂಜಾನೆ ಸ್ಯಾಂಡಲ್ ವುಡ್ ನಟಿ ಸಂಜನಾ ಗಿಲ್ರಾನಿ ಮನೆಗೆ ದಾಳಿ ನಡೆಸಿದ್ದ  ಸಿಸಿಬಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಸತತ ಮೂರು ಘಂಟೆಗಳ ಕಾಲ ಸಂಜನಾ ನಿವಾಸದಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು ನಂತರ ನಟಿಯನ್ನು ಬಂಧಿಸಿ ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.    ಇಂದು ಬೆಳಕು ಹರಿಯುವ ಮುನ್ನವೇ ಆರು ಅಧಿಕಾರಿಗಳ ತಂಡ ಮೂರು ಕಾರುಗಳಲ್ಲಿ ಸಂಜನಾ ವಾಸಿಸುತ್ತಿರುವ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಸಂಜನಾ ಆಪ್ತ ಎನ್ನಲಾದ ರಾಹುಲ್ ಎಂಬಾತ ಈಗಾಗಲೇ ಸಿಸಿಬಿ ವಶದಲ್ಲಿದ್ದು ಅವನನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಅವನ ಹೇಳಿಕೆಯ ಆಧಾರದ ಮೇಲೆಯೇ ನಟಿ ಸಂಜನಾ ನಿವಾಸಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.  ಇದ್ದೆಗ ನಟಿ ಸಂಜನಾ ಸಿಸಿಬಿ ಅಧಿಕಾರಿಗಳ ವಶದಲ್ಲಿದ್ದಾರೆ. 

RELATED ARTICLES

1 COMMENT

  1. ಯಕ್ಷಗಾನ ಕ್ಕೆ ಸಂಬಂಧ ಇಲ್ಲದ ಇಂತಹ ವಾರ್ತೆಗಳು ಇಲ್ಲಿ ಬೇಕೇ??

LEAVE A REPLY

Please enter your comment!
Please enter your name here

Most Popular

Recent Comments