ನಮ್ಮ ಕರಾವಳಿಯ ಗಂಡು ಕಲೆ ಯಕ್ಷಗಾನ. ಯಕ್ಷಗಾನ ರಂಗದಲ್ಲಿ ಅನೇಕ ಯುವ ಕಲಾವಿದರು ನಮಗೆ ನೋಡಲು ಸಿಗುತ್ತಾರೆ ಅದರಲ್ಲಿ ಒಬ್ಬರು ಯುವ ಚಂಡೆ ಮದ್ದಳೆ ವಾದಕರು ಶ್ರವಣ್ ಕುಮಾರ್ ಕೊಳಂಬೆ. ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನಕ್ಕೆ ಮನಸೋತು ಯಕ್ಷರಂಗಕ್ಕೆ ಅನೇಕ ಯುವ ಕಲಾವಿದರನ್ನು ಕೊಟ್ಟ ಯಕ್ಷರಂಗದ ಗುರು ಹರಿನಾರಾಯಣ ಬೈಪಾಡಿತ್ತಾಯ ಇವರಿಂದ ಚೆಂಡೆ ಹಾಗೂ ಮದ್ದಳೆ ಅಭ್ಯಾಸ ಮಾಡಿರುತ್ತಾರೆ.
ದಿನಾಂಕ 07.09.1989 ಸೆಪ್ಟೆಂಬರನಲ್ಲಿ ಇವರ ಜನನ. ತಂದೆ ದಿವಂಗತ ಪ್ರಭಾಕರ್ ರಾವ್ ಕೊಳಂಬೆ ಹಾಗೂ ತಾಯಿ ರಾಜೇಶ್ವರಿ ಪಿ. ಇವರ ತಂದೆ ಸ್ವತಃ ತಲಕಳ ದೇವಸ್ಥಾನದ ಹಾಗೂ ಮೇಳದ ಪೂಜೆಯವರು ಆಗಿದ್ದರು. ಅಲ್ಲದೆ ಕೊಳಂಬೆ ಪೋಸ್ಟ್ ನ ಪೋಸ್ಟ್ ಮಾಸ್ಟರ್ ಕೂಡ ಆಗಿದ್ದರು. ಇವರು ಕೂಡ ಭಾಗವತಿಗೆ , ಚೆಂಡೆ , ಮದ್ದಳೆ ನುಡಿಸುತ್ತಿದ್ದರು ಹಾಗೂ ಯಕ್ಷಗಾನದಲ್ಲಿ ವೇಷ ಕೂಡ ಮಾಡುತ್ತಿದ್ದರು. ಹೀಗೆ ಇವರ ಮನೆಯೇ ಒಂದು ಯಕ್ಷಗಾನದ ಪರಿಸರ.
ಆಟೋಮೊಬೈಲ್ ಡಿಪ್ಲೋಮಾ ಪದವಿಯನ್ನು ಪಡೆದಿರುವ ಇವರು ಮಂಗಳೂರಿನಲ್ಲಿ ಯುನೈಟೆಡ್ ಟೊಯೊಟಾ ಕಂಪೆನಿಯಲ್ಲಿ ಅಸಿಸ್ಟೆಂಟ್ ಮನೇಜರ್ ವೃತ್ತಿಯಲ್ಲಿ ಇದ್ದಾರೆ. ಇದರ ಜೊತೆಗೆ ಪೆನ್ಸಿಲ್ ಡ್ರಾಯಿಂಗ್ ನಲ್ಲಿ ಪರಿಣತರು. ಉತ್ತಮ ಹಾಡುಗಾರರು ಆದ ಇವರು ನಕ್ಷತ್ರ ಲೋಕ ಯೂಟ್ಯೂಬ್ ಚಾನೆಲ್ ನಲ್ಲಿ ನಡೆಯುವ ಕರಾವಳಿ ಗಾನ ಕೋಗಿಲೆ Season 1 ಇದರ ತೀರ್ಪುಗಾರರೂ ಆಗಿದ್ದರೆ. ರಾಜ್ಯದ ಹಲವಾರು ಕಡೆ ಹಲವಾರು ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಮಾಡಿರುವ ಇವರು ಒಂದು ಉತ್ತಮ ನಿರೂಪಕರು ಕೂಡ. ಹೀಗೆ ಇವರು ಒಬ್ಬರು ಬಹುಮುಖ ಪ್ರತಿಭೆ. ಇಷ್ಟೆಲ್ಲಾ ಇದ್ದರೂ ಶ್ರವಣ್ ಕುಮಾರ್ ಕೊಳಂಬೆಯವರಲ್ಲಿ ನಿಮಗೆ ಏನು ತುಂಬಾ ಇಷ್ಟ ಅಂತ ಕೇಳಿದ್ರೆ ಯಕ್ಷಗಾನ ಹಾಗೂ ಚೆಂಡೆ ಮದ್ದಳೆ ವಾದನ ಅಂತ ಹೇಳುತ್ತಾರೆ.
12.12.2018 ರಲ್ಲಿ ವಿದುಷಿ ರೂಪಶ್ರೀ ಇವರನ್ನು ವಿವಾಹ ಆಗಿ ಸುಂದರ ಸಂಸಾರ ನಡೆಸುತ್ತಿದ್ದಾರೆ. ಇವರ ಶ್ರೀಮತಿ ಶಾಸ್ತ್ರೀಯ ಸಂಗೀತದಲ್ಲಿ ಅನೇಕ ಸಾಧನೆಯನ್ನ ಮಾಡಿದ್ದು ಅನೇಕ ಟಿವಿ ಚಾನೆಲ್ ಗಳಲ್ಲಿ ಇವರ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗಿವೆ , ರಾಜ್ಯದ ಹಲವಾರು ಕಡೆ ಸಂಗೀತ ಕಾರ್ಯಕ್ರಗಳನ್ನು ನೀಡಿದ ಇವರಿಗೆ ಹಲವಾರು ಪ್ರಶಸ್ತಿಗಳು ದೊರೆತಿರುತ್ತದೆ, ಅಲ್ಲದೆ ಬಜ್ಪೆಯಲ್ಲಿ ಶಾಸ್ತ್ರೀಯ ಸಂಗೀತದ ತರಗತಿಯನ್ನು ಮಾಡುತ್ತ ಸಂಗೀತ ಕಲಿಯುವ ಸಾಕಷ್ಟು ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಇದ್ದಾರೆ. ಅಲ್ಲದೆ *ರೂಪಾಶ್ರವಣ್* ಕೊಳಂಬೆ ಎಂಬ ಆರ್ಕೆಸ್ಟ್ರಾ ತಂಡವನ್ನು ಕೂಡ ನಡೆಸುತ್ತಾ ಇದಾರೆ.
ಶ್ರೀಯುತ ಶ್ರವಣ್ ಕುಮಾರ್ ಕೊಳಂಬೆ ಇವರ ಯಕ್ಷಗಾನ ಹಾಗೂ ಸಂಗೀತ ಕ್ಷತ್ರದಲ್ಲಿ ಇನಷ್ಟು ಸಾಧನೆ ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ.
ಲೇಖಕ: ಶ್ರಾವಣ ಕಾರಂತ್ ಕೆ. ಶಕ್ತಿನಗರ, ಮಂಗಳೂರು.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು