ಆಕಾಶವಾಣಿ ಮಂಗಳೂರು ನಿಲಯದಿಂದ ಪ್ರತಿ ಶುಕ್ರವಾರ ಪ್ರಸಾರವಾಗುವ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಈ ವಾರ ಕರ್ನಾಟಕ ಯಕ್ಷ ಭಾರತಿ ಬೆಟ್ಟಂಪಾಡಿ, ಪುತ್ತೂರು ತಂಡವು ‘ರಾಜಾ ದಿಲೀಪ’ ಎಂಬ ಯಕ್ಷಗಾನ ಪ್ರಸಂಗವನ್ನು ಪ್ರಸ್ತುತ ಪಡಿಸಲಿದೆ. ಈ ಕಾರ್ಯಕ್ರಮ ಇದೇ ಮೇ.7 ಶುಕ್ರವಾರ ರಾತ್ರಿ 9.30 ಕ್ಕೆ ಬಾನುಲಿಯಲ್ಲಿ ಪ್ರಸಾರವಾಗುವುದು.
ದೇವಲೋಕದ ಕಾಮಧೇನುವನ್ನು ನಿರ್ಲಕ್ಷಿಸಿದ ಕಾರಣದಿಂದ ಸಂತಾನ ಹೀನನಾದ ಸೂರ್ಯವಂಶದ ಚಕ್ರವರ್ತಿ ದಿಲೀಪ ಮಹಾರಾಜ ವಶಿಷ್ಠಾಶ್ರಮದಲ್ಲಿ ಗೋಪೂಜೆ ಮಾಡಿದ ಫಲ ರೂಪವಾಗಿ ಕುಲದೀಪಕನಾದ ರಘುವನ್ನು ಮಗನಾಗಿ ಪಡೆಯುವ ವಿಶಿಷ್ಟ ಕಥಾ ಹಂದರದ ‘ರಾಜಾ ದಿಲೀಪ’ ಯಕ್ಷಗಾನದಲ್ಲಿ ಹೆಸರಾಂತ ಕಲಾವಿದರಾದ ಭಾಸ್ಕರ ರೈ ಕುಕ್ಕುವಳ್ಳಿ (ದಿಲೀಪ), ಎಂ.ಕೆ. ರಮೇಶಾಚಾರ್ಯ (ನಂದಿನಿ), ಗಣರಾಜ ಕುಂಬಳೆ (ರುಧಿರಾಕ್ಷ), ರಮೇಶ್ ಸಾಲ್ವಣ್ಕರ್ (ವಶಿಷ್ಠ), ಮತ್ತು ಉಮೇಶ ಗೇರುಕಟ್ಟೆ (ಸುದಕ್ಷಿಣೆ) ಅರ್ಥಧಾರಿಗಳಾಗಿ ಭಾಗವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಪದ್ಯಾಣ ಗಣಪತಿ ಭಟ್ ಅವರ ಹಾಡುಗಾರಿಕೆಗೆ ಪಿ.ಟಿ ಜಯರಾಮ ಭಟ್, ಕೋಳ್ಯೂರು ಭಾಸ್ಕರ ಮತ್ತು ಹರಿಶ್ಚಂದ್ರ ಮಾಡೂರು ಅವರ ಹಿಮ್ಮೇಳವಿದೆ. ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ಮಾಪಕ ಸೂರ್ಯನಾರಾಯಣ ಭಟ್ ಪಿ.ಎಸ್. ಇದನ್ನು ಧ್ವನಿಮುದ್ರಿಸಿ ಪ್ರಸಾರಕ್ಕೆ ಅಳವಡಿಸಿದ್ದಾರೆ.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ