ಯಕ್ಷಗಾನ ಕಲಾರಂಗದ ಒಂದು ವರ್ಷದ ಚಟುವಟಿಕೆಗಳ ಕುರಿತ ಅಪೂರ್ವ ಮಾಹಿತಿವುಳ್ಳ “ಕಲಾಂತರಂಗ 2020”ನ್ನು ನಿಟ್ಟೂರು ಪ್ರೌಢಶಾಲೆಯ ರಜತ ಸಭಾಭವನದಲ್ಲಿ ಎಪ್ರಿಲ್ 16, 2021ರಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಂ.ಎಸ್. ಮತ್ತು ಶಾಸಕರಾದ ಕೆ. ರಘುಪತಿ ಭಟ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಾಬಲೇಶ್ವರ ಎಂ.ಎಸ್. ಕಲಾರಂಗ ಎಲ್ಲಾ ಸಂಸ್ಥೆಗಳಿಗೂ ಮಾದರಿಯಾಗಿದ್ದು, ಕರ್ಣಾಟಕ ಬ್ಯಾಂಕ್ ಕಲಾರಂಗದ ಚಟುವಟಿಕೆಗಳಿಗೆ ತನ್ನಿಂದಾದ ನೆರವನ್ನು ನೀಡಲು ಸದಾ ಸಿದ್ಧವಿದೆ ಎಂದರು.
ಶಾಲಾ ಸಂಚಾಲಕರಾದ ಕೆ.ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಧ್ಯಕ ಎಂ. ಗಂಗಾಧರ ರಾವ್ ವಂದಿಸಿದರು. ಕಲಾರಂಗದ ನಿಕಟ ಪೂರ್ವಅಧ್ಯಕ್ಷ ಕೆ. ಗಣೇಶ್ ರಾವ್ , ಪಿ. ಸದಾಶಿವ ರಾವ್, ಕೋಶಾಧಿಕಾರಿ ಕೆ ಮನೋಹರ್, ಕಲಾರಂಗದ ಉಪಾಧ್ಯಕ್ಷ ವಿ.ಜಿ ಶೆಟ್ಟಿ, ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ, ಹೆಚ್. ಎನ್. ಶೃಂಗೇಶ್ವರ, ಬಿ. ನಾರಾಯಣ, ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಅಜಿತ್‍ಕುಮಾರ್, ದಿನೇಶ್ ಪೂಜಾರಿ, ಅಶೋಕ್ ಎಂ, ಮತ್ತು ಮುಖ್ಯೋಪಾಧ್ಯಾಯಿನಿ ಶ್ರಿಮತಿ ಅನಸೂಯ ಉಪಸ್ಥಿತರಿದ್ದರು.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
