Friday, November 22, 2024
Homeಯಕ್ಷಗಾನಯಕ್ಷಗಾನ ತರಭೇತಿ ಶಿಬಿರದ ವಿದ್ಯಾರ್ಥಿಗಳು ಪ್ರದರ್ಶಿಸಿದ “ ಕೃಷ್ಣಗಾರುಡಿ” ಯಕ್ಷಗಾನ

ಯಕ್ಷಗಾನ ತರಭೇತಿ ಶಿಬಿರದ ವಿದ್ಯಾರ್ಥಿಗಳು ಪ್ರದರ್ಶಿಸಿದ “ ಕೃಷ್ಣಗಾರುಡಿ” ಯಕ್ಷಗಾನ


ನಿನ್ನೆ ದಿನಾಂಕ 20-03-2021 ರ ಸಂಜೆ ಚಿಕ್ಕಲ್ಲಸಂದ್ರದ ಕೆ ಎಸ್ ಆರ್ ಟಿ ಸಿ ಬಡಾವಣೆಯ ಶ್ರೀ ಸಿದ್ಧಿ ಗಣಪತಿ ದೇವಾಲಯದ ಮನೋರಂಜಿನಿ ಸಭಾಂಗಣದಲ್ಲಿ ಕಲಾಕದಂಬ ಆರ್ಟ್ ಸೆಂಟರ್ ನಡೆಸಿದ 2020-21 ರ ಸಾಲಿನ ಯಕ್ಷಗಾನ ತರಭೇತಿ ಶಿಬಿರದ ವಿದ್ಯಾರ್ಥಿಗಳು ಡಾ. ರಾಧಾಕೃಷ್ಣ ಉರಾಳರ ನಿರ್ದೇಶನದಲ್ಲಿ ಪ್ರದರ್ಶಿಸಿದ “ ಕೃಷ್ಣಗಾರುಡಿ” ಯಕ್ಷಗಾನದ ಪ್ರದರ್ಶನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ಆಯುರ್ವೇದ ಪ್ರತಿಷ್ಟಾನ ದ ಅಧ್ಯಕ್ಷರಾದ ಡಾ. ಸಿ ಎ ಕಿಶೋರ್ ಮಾತನಾಡುತ್ತಾ ನಮ್ಮ ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನವು ಹಲವಾರು ಪೌರಾಣಿಕ ಕಥೆಗಳನ್ನು ಮನದಟ್ಟು ಮಾಡಿಕೊಡುವುದರಲ್ಲಿ ಅಲ್ಲದೇ ನೀತಿ ಸಾರವನ್ನು ತಿಳಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರಲ್ಲಿ ಒಂದು ಪರಿಣಾಮಕಾರಿ ಕಲಾಮಾಧ್ಯಮವಾಗಿದ್ದು ಮಕ್ಕಳನ್ನು ಇಂತಹ ಕಲೆಗಳಲ್ಲಿ ತೊಡಗಿಸಿ ಒಂದು ಒಳ್ಳೆಯ ಕೆಲಸವನ್ನು ಕಲಾಕದಂಬ ಸಂಸ್ಥೆಯು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಮತ್ತೊಬ್ಬ ಅತಿಥಿ ಚಂದನ ವಾಹಿನಿಯ ನಿರೂಪಕಿ ಸ್ನೇಹಾ ನೀಲಪ್ಪಗೌಡ ಮಾತನಾಡುತ್ತ ಯಕ್ಷಗಾನ ಒಂದು ಗಂಡುಮೆಟ್ಟಿನ ಕಲೆಯಾಗಿದ್ದರು ಹೆಚ್ಚೆಚ್ಚು ಹೆಣ್ಣುಮಕ್ಕಳು ಈ ಕಲೆಯಲ್ಲಿಆಸಕ್ತಿ ತೋರಿಸಿ ಯಶಸ್ಸನ್ನು ಕಾಣುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಎಲ್ಲಾ ದೃಷ್ಯ ಮಾಧ್ಯಮಗಳು ಇಂತಹ ಒಂದು ಪ್ರಾಚೀನ ಕಲೆಯ ಪ್ರಸಾರಕ್ಕೆ ಹೆಚ್ಚು ಒತ್ತು ಕೊಟ್ಟು ಈ ಕಲೆಯ ಬೆಳವಣಿಗೆಗೆ ಸಹಕರಿಸಬೇಕು ಅಲ್ಲದೇ ಯಕ್ಷಗಾನದಲ್ಲಿ ರೈತಾಪಿ ವರ್ಗದವರ ಕುರಿತ ಕಥೆಗಳನ್ನು ಅಳವಡಿಸಿ ಪ್ರದರ್ಶಿಸುವ ನಿಟ್ಟಿನಲ್ಲಿ ಕಲಾಕದಂಬ ಸಂಸ್ಥೆಯು ಪ್ರಯತ್ನ ಪಡಲಿ ಎಂದು ಹಾರೈಸಿದರು.

ಕಲಾಕದಂಬದ ನಿರ್ದೇಶಕರಾದ ಡಾ.ರಾಧಾಕೃಷ್ಣ ಉರಾಳರು ಕಲಾಕದಂಬ ಸಂಸ್ಥೆಯು ನಡೆದು ಬಂದ ದಾರಿ ಮುಂದಿನ ಯೋಜನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ವೇದಿಕೆಯಲ್ಲಿ ನಿರೂಪಕರಾದ ಕೆ.ಎನ್.ಅಡಿಗರು ಹಾಗೂ ಶ್ರೀ ಸಿದ್ಧಿ ಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಶ್ರಿ ಸಚ್ಚಿದಾನಂದ ಮೂರ್ತಿಯವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಮುರಳೀಧರ ನಾವಡ ನಿರ್ವಹಿಸಿದರು.

ಕೃಷ್ಣನಾಗಿ ಏಳರ ವಯಸ್ಸಿನ ಚಿತ್ಕಲ ಐತಾಳ್ ತನ್ನ ಕುಣಿತ ಹಾಗೂ ಅಭಿನಯದ ಮೂಲಕ ಗಮನ ಸೆಳೆದಳು. ಧರ್ಮರಾಯನಾಗಿ ಅನರ್ಘ್ಯ ಆಚಾರ್ಯ, ಭೀಮನಾಗಿ ವರ್ಷ, ಅರ್ಜುನನಾಗಿ ಶುಭದ, ನಕುಲ ಹಾಗೂ ಸಹದೇವರಾಗಿ ಶ್ರೀಹರಿ ಹೆಬ್ಬಾರ್ ಹಾಗೂ ಶ್ರೀ ವತ್ಸಹೆಗ್ದೆ, ನಾರದನಾಗಿ ಜಾಹ್ನವಿ ಕಾಮತ್, ಮೋಹಿನಿಯಾಗಿ ಪ್ರಣತಿ ಭಟ್, ಘೋರ ಮೋಹಿನಿಯಾಗಿ ಶರಣ್ಯ ಜಿ ರಾವ್ ಹಾಗೂ ಗಾರುಡಿಗಳಾಗಿ ಪೂಜಾ ಆಚಾರ್ಯ, ಪ್ರತೀಕ್ ಆಚಾರ್ಯ,ನಿತ್ಯಾ ಗೌಡ, ಚಿರಾಗ್, ತೇಜಸ್ ಪ್ರಶಂಸೆಗೆ ಪಾತ್ರರಾದರು.

ಈ ಒಂದು ಯಕ್ಷಗಾನ ಪ್ರಸಂಗಕ್ಕೆ ಹಿಮ್ಮೇಳ ಧ್ವನಿ ಮುದ್ರಣದಲ್ಲಿ ಭಾಗವತರಾಗಿ ಸುಬ್ರಾಯ ಹೆಬ್ಬಾರ್, ಮದ್ದಲೆಯಲ್ಲಿ ಅನಂತ ಪದ್ಮನಾಭ್ ಪಾಠಕ್ ಹಾಗೂ ಚಂಡೆಯಲ್ಲಿ ಶ್ರೀನಿವಾಸ ಪ್ರಭು ಸಹಕರಿಸಿದರು.


ಯಕ್ಷಗಾನ ಕಾರ್ಯಕ್ರಮಕ್ಕೂ ಮೊದಲು ಕಲಾಕದಂಬ ಆರ್ಟ್ ಸೆಂಟರ್ ನ ಕಲಾಗುಡಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಂಟಕಿ ಕಸಾಸುರ ಎನ್ನುವ ಪ್ರಹಸನವು ಮೆಚ್ಚುಗೆಯನ್ನು ಪಡೆಯುವುದರಲ್ಲಿ ಯಶಸ್ವೀಯಾಯಿತು. ನೇಪಥ್ಯದಲ್ಲಿ ವಿಶ್ವನಾಥ ಉರಾಳ, ಅದಿತಿ ಉರಾಳ, ಮಧುಮಿತ, ರಜತ್, ಸುರೇಶ್, ಪವನ್ ಸಹಕರಿಸಿದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments