Friday, September 20, 2024
Homeಯಕ್ಷಗಾನಮಜ್ಜಿಗೆಬೈಲು ಆನಂದ ಶೆಟ್ಟಿಯವರಿಗೆ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ 2021

ಮಜ್ಜಿಗೆಬೈಲು ಆನಂದ ಶೆಟ್ಟಿಯವರಿಗೆ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ 2021

ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಲ್ಲೋರ್ವರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸಾಹಿತಿ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ 2021 ರ ಸಾಲಿನ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದರಾದ ಮಜ್ಜಿಗೆಬೈಲು ಆನಂದ ಶೆಟ್ಟಿಯವರಿಗೆ ನೀಡಿ ಗೌರವಿಸಲಾಗುವುದು.

ಸಾಲಿಗ್ರಾಮ ಮಕ್ಕಳ ಮೇಳ ಟ್ರಸ್ಟ್ ನ ಕಾರ್ಯಾಧ್ಯಕ್ಷ ಕೆ. ಮಹೇಶ ಉಡುಪ ಮಂದರ್ತಿ, ಅಧ್ಯಕ್ಷ ಬಲರಾಮ ಕಲ್ಕೂರ, ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆಯವರನ್ನೊಳಗೊಂಡ ಸಮಿತಿ, ಉಡುಪ ಪ್ರಶಸ್ತಿಗೆ ಆನಂದ ಶೆಟ್ಟಿಯವರನ್ನು ಆಯ್ಕೆಮಾಡಿದೆ.

ಸುಮಾರು 76 ರ ಹರಯದ ಆನಂದ ಶೆಟ್ಟಿಯವರು ಕೊಡವೂರು, ಪೆರ್ಡೂರು, ಗೋಳಿಗರಡಿ, ಅಮೃತೇಶ್ವರಿ, ಸಾಲಿಗ್ರಾಮ, ಮಾರಣಕಟ್ಟೆ, ಮಂದರ್ತಿ ಮೇಳಗಳಲ್ಲಿ ಸುಮಾರು 50 ವರ್ಷಗಳ ಕಾಲ ಹಾರಾಡಿ-ಮಟ್ಪಾಡಿ ಯಕ್ಷ ತಿಟ್ಟುಗಳ ಸಮನ್ವಯ ಸಾಧಿಸಿ ರಂಗದಲ್ಲಿ ಮೆರೆದವರು. ಮೇಳದಿಂದ ನಿವೃತ್ತರಾದರೂ ಅವರ ಪುಷ್ಕಳ, ಕೃಷ್ಣ, ಜಾಂಬವ, ಕರ್ಣ, ಮಾರ್ತಾಂಡ ತೇಜ, ರಾವಣ, ಚಿತ್ರಸೇನ ಮೊದಲಾದ ಪಾತ್ರ ಜನಮಾನಸದಲ್ಲಿ ನೆಲೆನಿಂತಿವೆ.

ಜನವರಿ 14, 2021 ಗುರುವಾರದಂದು ಗಣ್ಯರ ಸಮ್ಮುಖದಲ್ಲಿ ಆನಂದ ಶೆಟ್ಟಿಯವರನ್ನು ಗೌರವ ಧನದೊಂದಿಗೆ ಉಡುಪ ಪ್ರಶಸ್ತಿಯಿತ್ತು ಗೌರವಿಸಲಾಗುವುದೆಂದು ಸಾಲಿಗ್ರಾಮ ಮಕ್ಕಳ ಮೇಳ ಟ್ರಸ್ಟ್ ಕಾರ್ಯದರ್ಶಿ ಸುಜಯೀಂದ್ರ ಹಂದೆ ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments