Sunday, November 24, 2024
Homeಯಕ್ಷಗಾನಬಡಗುತಿಟ್ಟು ಯಕ್ಷಗಾನದ ಹಾರಾಡಿ ತಿಟ್ಟು ಹಾಗೂ ಮಟಪಾಡಿ ತಿಟ್ಟುಗಳ ದಾಖಲೀಕರಣ - ಕರ್ನಾಟಕ ಯಕ್ಷಗಾನ ಅಕಾಡೆಮಿಯ...

ಬಡಗುತಿಟ್ಟು ಯಕ್ಷಗಾನದ ಹಾರಾಡಿ ತಿಟ್ಟು ಹಾಗೂ ಮಟಪಾಡಿ ತಿಟ್ಟುಗಳ ದಾಖಲೀಕರಣ – ಕರ್ನಾಟಕ ಯಕ್ಷಗಾನ ಅಕಾಡೆಮಿಯ ವಿಶಿಷ್ಟ ಕಾರ್ಯಕ್ರಮ 

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಮಿತ್ರ ಸಂಗಮ (ರಿ), ಬೀಜಾಡಿ, ಗೋಪಾಡಿ ಇದರ ಸಹಯೋಗದೊಂದಿಗೆ ವಿಶಿಷ್ಟವಾದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಬಡಗು ತಿಟ್ಟು ಯಕ್ಷಗಾನ ಪರಂಪರೆಯ ಹಾರಾಡಿ ತಿಟ್ಟು ಮತ್ತು ಮಟಪಾಡಿ ತಿಟ್ಟುಗಳ ದಾಖಲೀಕರಣ ಪ್ರಕ್ರಿಯೆಯನ್ನು ಮೇಲಿನ ಎರಡೂ ಸಂಸ್ಥೆಗಳ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮ ೨೦. ೧೨. ೨೦೨೦ ರ ಆದಿತ್ಯವಾರದಂದು ಮದ್ಯಾಹ್ನ ಘಂಟೆ ೨. ೩೦ ರಿಂದ ಆರಂಭವಾಗಲಿದ್ದು ಉದ್ಘಾಟನಾ ಸಮಾರಂಭ, ಸಭಾ ಕಾರ್ಯಕ್ರಮಗಳ ನಂತರ ವಿಷಯ ಮಂಡನೆ, ಉಭಯ ತಿಟ್ಟುಗಳ ಪ್ರಾತ್ಯಕ್ಷಿಕೆ ನಡೆಯಲಿದ್ದು ಕೊನೆಯಲ್ಲಿ ಬಡಗು ತಿಟ್ಟಿನ ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಈ ಕಾರ್ಯಕ್ರಮವು ಕುಂದಾಪುರದ ವಡೇರ ಹೋಬಳಿಯಲ್ಲಿರುವ ಶ್ರೀ ವ್ಯಾಸರಾಜ ಮಠದಲ್ಲಿ ನಡೆಯಲಿದೆ. ಕಲಾಸಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments