ಶೀರ್ಷಿಕೆಯೇ ಸೂಚಿಸುವಂತೆ ಈ ಹೊತ್ತಗೆಯು ಸಾಲಿಗ್ರಾಮ ಮಕ್ಕಳ ಮೇಳದ ರಜತ ಸಂಚಿಕೆಯಾಗಿ 2002ರಲ್ಲಿ ಪ್ರಕಟವಾಗಿತ್ತು. ‘ಬಾಲಗೋಪಾಲ’ ಎಂಬ ಶೀರ್ಷಿಕೆಯಡಿ ಪ್ರಕಟವಾದ ಈ ರಜತ ಸಂಚಿಕೆಯು ನೂರಾ ಅರುವತ್ತನಾಲ್ಕು ಪುಟಗಳಿಂದ ಕೂಡಿದೆ.
ಈ ಕೃತಿಯ ಪ್ರಕಾಶಕರು ಸಾಲಿಗ್ರಾಮ ಮಕ್ಕಳ ಮೇಳ (ರಿ), ಪಟೇಲರ ಮನೆ, ಕೋಟ. ಪ್ರಧಾನ ಸಂಪಾದಕರು ಪ್ರೊ| ಸಿ. ಉಪೇಂದ್ರ ಸೋಮಯಾಜಿ. ಗೌರವ ಸಂಪಾದಕರು ಶ್ರೀ ಕೆ.ಎಂ.ಉಡುಪ,ಮಂದಾರ್ತಿ. ಈ ರಜತ ಸಂಚಿಕೆಯನ್ನು ಮಕ್ಕಳ ಮೇಳದ ಪ್ರಧಾನ ರೂವಾರಿ, ರಾಜ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿದ್ದ ಕಾರ್ಕಡ ಶ್ರೀನಿವಾಸ ಉಡುಪರಿಗೆ ಅರ್ಪಿಸಲಾಗಿದೆ.
ಸಂಪಾದಕ ಪ್ರೊ| ಸಿ. ಉಪೇಂದ್ರ ಸೋಮಯಾಜಿ ಅವರು ‘ಮೊದಲ ಮಾತು’ ಎಂಬ ತಮ್ಮ ಲೇಖನದಲ್ಲಿ ಅನಿಸಿಕೆಗಳನ್ನು ತಿಳಿಸಿ, ಸಹಕರಿಸಿದವರಿಗೆಲ್ಲಾ ಕೃತಜ್ಞತೆಗಳನ್ನು ತಿಳಿಸಿರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ.ವೀರೇಂದ್ರ ಹೆಗ್ಗಡೆ, ಶ್ರೀ ಕೆ.ಕೆ.ಪೈ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕೆ.ಜಯಪ್ರಕಾಶ ಹೆಗ್ಡೆ ಅವರುಗಳ ಶುಭಸಂದೇಶಗಳನ್ನೂ ನೀಡಲಾಗಿದೆ.
ಬಳಿಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಶ್ರೀಧರ ಉಪ್ಪೂರು, ಡಾ. ಸಿ.ಆನಂದರಾಮ ಉಪಾಧ್ಯ, ಕಂದಾವರ ರಘುರಾಮ ಶೆಟ್ಟಿ, ಎಚ್.ಸುಬ್ಬಣ್ಣ ಭಟ್ಟ, ಪ್ರೊ| ಉದ್ಯಾವರ ಮಾಧವ ಆಚಾರ್ಯ, ಕೆ. ಮೋಹನ್, ಎಂ. ಸುಧೀಂದ್ರ ಹೊಳ್ಳ, ಕಾರ್ಕಡ ರಾಮಚಂದ್ರ ಉಡುಪ, ಪಿ.ವಿ.ಐತಾಳ, ಮಣೂರು ನರಸಿಂಹ ಮಧ್ಯಸ್ಥ, ಡಾ.ಎಂ.ಪ್ರಭಾಕರ ಜೋಶಿ, ಎಚ್. ಸುಜಯಿಂದ್ರ ಹಂದೆ, ಅಂಬಾತನಯ ಮುದ್ರಾಡಿ, ಡಾ. ಆರ್. ಗಣೇಶ್ ಶತಾವಧಾನಿ, ಕೆ.ಎಂ.ರಾಘವ ನಂಬಿಯಾರ್, ಪ್ರೊ| ಸಿ. ಉಪೇಂದ್ರ ಸೋಮಯಾಜಿ,
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 27-11-2024ರಿಂದ 12-12-2024ರ ವರೆಗೆ
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
ಸ್ವಾಮಿ ಪುರುಷೋತ್ತಮಾನಂದ, ಗಿರೀಶ ಕಾಸರವಳ್ಳಿ, ಡಾ| ಎಚ್.ಕೆ.ರಂಗನಾಥ್, ಡಾ| ಭಾನುಮತಿ, ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಜಾನ್ ಆರ್. ಮರ್, ಕೂರಾಡಿ ಸದಾಶಿವ ಕಲ್ಕೂರ, ದಯಾನಂದ ಬಳ್ಕೂರು, ಬಿ. ರಮೇಶ್ ಭಟ್, ಕೆ.ಎಂ. ಉಡುಪ, ಎಚ್.ಶ್ರೀಧರ ಹಂದೆ, ಇವರುಗಳ ಲೇಖನಗಳನ್ನು ನೀಡಲಾಗಿದೆ.
ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ