Saturday, November 23, 2024
Homeಪುಸ್ತಕ ಮಳಿಗೆಹಾಸ್ಯಗಾರನ ಅಂತರಂಗ - ಪೆರುವಡಿ ನಾರಾಯಣ ಭಟ್ಟರ ಆತ್ಮಕಥನ 

ಹಾಸ್ಯಗಾರನ ಅಂತರಂಗ – ಪೆರುವಡಿ ನಾರಾಯಣ ಭಟ್ಟರ ಆತ್ಮಕಥನ 

‘ಹಾಸ್ಯಗಾರನ ಅಂತರಂಗ’ ಎಂಬ ಕೃತಿಯು ಖ್ಯಾತ ಹಾಸ್ಯಗಾರರಾದ ಶ್ರೀ ಪೆರುವಡಿ ನಾರಾಯಣ ಭಟ್ಟರ ಆತ್ಮಕಥನವಾಗಿ ಪ್ರಕಟಗೊಂಡು ಓದುಗರ ಕೈ ಸೇರಿದೆ. 2002ರಲ್ಲಿ ಇದು ಪ್ರಕಟವಾಗಿತ್ತು. ಪೆರುವಡಿ ಹಾಸ್ಯಗಾರರು ಸಂಘಟಕರಾಗಿಯೂ ಕಲಾಸೇವೆಯನ್ನು ಮಾಡಿದವರು. ಅನೇಕ ವರ್ಷಗಳ ಕಾಲ ಮುಲ್ಕಿ ಮೇಳವನ್ನು ನಡೆಸಿದ್ದರು.

ಹಿರಿಯ ಹಾಸ್ಯಗಾರರ ಬಗೆಗೆ ಹೀಗೊಂದು ಆತ್ಮಕಥನವು ಪ್ರಕಟಗೊಂಡದ್ದು ಸಂತೋಷದ ವಿಚಾರವು. ಈ ಕೃತಿಯ ನಿರೂಪಕರು ಶ್ರೀ ನಾ. ಕಾರಂತ ಪೆರಾಜೆ. ಪ್ರಕಾಶಕರು- ಕನ್ನಡ ಪ್ರಪಂಚ ಪ್ರಕಾಶನ, ಪುತ್ತೂರು. ‘ನಿರೂಪಕನ ಅಂತರಂಗ’ ಎಂಬ ಬರಹದಲ್ಲಿ ಶ್ರೀ ನಾ. ಕಾರಂತರು ತಮ್ಮ ಮನದ ಮಾತುಗಳನ್ನು ಅಕ್ಷರರೂಪಕ್ಕಿಳಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿರುತ್ತಾರೆ.

‘ಹಾಸ್ಯಗಾರನ ಅಂತರಂಗ’ ಎಂಬ ಈ ಆತ್ಮಕಥನವು, ಹಿಂದೆ, ಧರ್ಮಸ್ಥಳ ಮೇಳದವನಾದೆ, ಹಾಸನದಲ್ಲಿ ಹಾಸ್ಯದ ನಂಟು ನಂಟಿತು, ಕಿರೀಟ ಪತನ-ಅವಸಾನದ ಆಹ್ವಾನ-ನಂಬಿಕೆ-ನಿರ್ದೇಶನ, ಧರ್ಮಸ್ಥಳ ಮೇಳಕ್ಕೆ ವಿದಾಯ, ಮೂಲ್ಕಿ ಮೇಳದ ದಿಗ್ವಿಜಯ, ಋಣಾನುಬಂಧ, ಜೋಡಾಟ-ಮೇಲಾಟ, ವಿವಿಧ ಮೇಳಗಳಲ್ಲಿ ತಿರುಗಾಟ, ಮುಂದೆ…? ಎಂಬ ಹತ್ತು ವಿಭಾಗಗಳಿಂದ ಕೂಡಿದ್ದು ಶ್ರೀ ನಾ. ಕಾರಂತರು ಸುಂದರವಾಗಿ, ಸರಳವಾಗಿ ಓದುಗರಿಗೆ ಮನಮುಟ್ಟುವಂತೆ ನಿರೂಪಿಸಿದ್ದಾರೆ.

ಬಳಿಕ ರಾಜಹಾಸ್ಯ, ಬಡಗಿನವರಿಗೆ ತೆಂಕಿನ ಹಾಸ್ಯದ ರುಚಿ ಹಿಡಿಸಿದ ಹಾಸ್ಯಗಾರ, ಹಾಸ್ಯ ಸಂಶೋಧಕ, ಪಾಪಣ್ಣ ಭಟ್ಟರು, ಗುರು ಸಮಾನ ಹಿರಿಯ ಒಡನಾಡಿ, ವೈಚಾರಿಕ ಹಾಸ್ಯಗಾರ, ಆತ್ಮೀಯ ಸ್ನೇಹಿತ, ಸಹಜ ಹಾಸ್ಯ ಕೃತಕವಲ್ಲ, ಪ್ರಾಮಾಣಿಕ ಹಾಸ್ಯಗಾರ, ಸರ್ವಾಂಗೀಣ ಕಲಾವಿದ, ಒಡನಾಟದ ನೆನಪು, ಚಿಂತನಶೀಲ ವಿದೂಷಕ, ರಂಗತಂತ್ರಜ್ಞ ಭಾಗವತ, ಮೇಳದ ತಂತ್ರಜ್ಞ ಹಾಸ್ಯಗಾರ ಎಂಬ ಹದಿನಾಲ್ಕು ಲೇಖನಗಳಿವೆ. ಲೇಖನಗಳನ್ನು ಬರೆದವರು ಕ್ರಮವಾಗಿ ಎಚ್. ಸುಬ್ಬಣ್ಣ ಭಟ್, ಎಚ್. ಶ್ರೀಧರ ಹಂದೆ, ಪಾತಾಳ ವೆಂಕಟ್ರಮಣ ಭಟ್, ಎಚ್. ಜನಾರ್ದನ ಹಂದೆ, ಮಧೂರು ಗಣಪತಿ ರಾವ್, ಕೆ. ಗೋವಿಂದ ಭಟ್, ಕೊಳಗಿ ಅನಂತ ಹೆಗಡೆ, ಕಡತೋಕಾ ಮಂಜುನಾಥ ಭಾಗವತ, ಹಿರಿಯಡಕ ಗೋಪಾಲ ರಾವ್, ವರದರಾಯ ಪೈ, ಎಂ.ಕೆ ರಮೇಶಾಚಾರ್ಯ, ಅರುವ ನಾರಾಯಣ ಶೆಟ್ಟಿ, ಮತ್ತು ಶೇಣಿ ಗೋಪಾಲಕೃಷ್ಣ ಭಟ್ಟರು. ಅಲ್ಲದೆ ಹನ್ನೊಂದು ಬಣ್ಣದ ಛಾಯಾಚಿತ್ರಗಳನ್ನೂ ನೀಡಲಾಗಿದೆ. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments