Friday, September 20, 2024
Homeಪುಸ್ತಕ ಮಳಿಗೆ'ಮಹಾ ಬಲ' - ಕೆರೆಮನೆ ಮಹಾಬಲ ಹೆಗಡೆ ಜೀವನ ಚರಿತ್ರೆ

‘ಮಹಾ ಬಲ’ – ಕೆರೆಮನೆ ಮಹಾಬಲ ಹೆಗಡೆ ಜೀವನ ಚರಿತ್ರೆ

ಶೀರ್ಷಿಕೆಯೇ ಸೂಚಿಸುವಂತೆ ಈ ಕೃತಿಯು ಬಡಗುತಿಟ್ಟು ಯಕ್ಷಗಾನದ ಮೇರು ಕಲಾವಿದ ಶ್ರೀ ಮಹಾಬಲ ಹೆಗಡೆಯವರ ಜೀವನ ಚರಿತ್ರೆಯು. ಯಕ್ಷಗಾನ ಕಲೆಯಲ್ಲಿ ಮಹಾ ಬಲಶಾಲಿಯಾಗಿ ಬೆಳೆದು ಕಾಣಿಸಿಕೊಂಡವರು ಶ್ರೀ ಕೆರೆಮನೆ ಮಹಾಬಲ ಹೆಗಡೆಯವರು. ‘ಯಕ್ಷಗಾನ ಸಂಗೀತವನ್ನು ರಾಗಜ್ಞಾನ ಸಹಿತವಾಗಿ ಕಿವಿಗೆ ಹಿತವಾಗಿ ಹಾಡಬಲ್ಲ ನರ್ತಕರು ಇಂದು ಇದ್ದರೆ ಅವರೇ’ ಈ ರೀತಿಯಾಗಿ ಡಾ. ಶಿವರಾಮ ಕಾರಂತರಿಂದ ಹೊಗಳಿಸಿಕೊಂಡವರು.

ಶ್ರೀಯುತರ ಜೀವನ ಚರಿತ್ರೆ ‘ಮಹಾ ಬಲ’ ಎಂಬ ಈ ಹೊತ್ತಗೆಯು ಪ್ರಕಟವಾದುದು 2008ರಲ್ಲಿ. ಪ್ರಕ್ಷಕರು ಸುಮುಖ ಪ್ರಕಾಶನ, ಬೆಂಗಳೂರು. ಲೇಖಕರು ಶ್ರೀ ಎಲ್.ಎಸ್.ಶಾಸ್ತ್ರಿಗಳು. ಮೊದಲಿಗೆ ಶ್ರೀ ಸಚ್ಚಿದಾನಂದ ಹೆಗಡೆ ಅವರ ಲೇಖನವಿದೆ. ‘ಲೇಖಕನಾಗಿ ಹೇಳಬೇಕೆನಿಸಿದ್ದು’ ಎಂಬ ಶೀರ್ಷಿಕೆಯಡಿ  ಶ್ರೀ ಎಲ್.ಎಸ್.ಶಾಸ್ತ್ರಿಗಳು ತಮ್ಮ ಮನದ ಮಾತುಗಳನ್ನು ಅಕ್ಷರರೂಪಕ್ಕಿಳಿಸಿರುತ್ತಾರೆ. ಒಟ್ಟು ನೂರಾ ಒಂಭತ್ತು ಪುಟಗಳಿಂದ ಕೂಡಿದ ಹೊತ್ತಗೆಯಿದು. ಕೆರೆಮನೆ ಶ್ರೀ ಮಹಾಬಲ ಹೆಗಡೆಯವರ ಜೀವನ ಚರಿತ್ರೆ ‘ಮಹಾ ಬಲ’ ಎಂಬ ಈ ಕೃತಿಯು ಒಟ್ಟು ಹನ್ನೆರಡು ವಿಭಾಗಗಳಡಿ ಮೂಡಿಬಂದಿರುತ್ತದೆ.

ಹುಡುಗಾಟದ ಹುಡುಗ, ಕುಮಾರ ಪರ್ವ, ಕಾರಂತರ ಒಡನಾಟದಲ್ಲಿ, ಪಾತ್ರ ಪ್ರಪಂಚ, ಸಂಗೀತ-ಸಾಹಿತ್ಯ-ನೃತ್ಯ, ದೃಷ್ಟಿ-ಧೋರಣೆ, ಕೊಡುಗೆಗಳು, ಅವರು-ಇವರು ಕಂಡಂತೆ, ಮಾನ ಸನ್ಮಾನ, ಮೇಳಗಳು-ಕಲಾವಿದರು, ಕೆಲ ವಿಶಿಷ್ಟ ಘಟನೆಗಳು, ಕೌಟುಂಬಿಕ ನೆಲೆ, ವ್ಯಕ್ತಿತ್ವ ಎಂಬ ವಿಭಾಗಗಳಡಿ ಮಾಹಿತಿಗಳನ್ನು ನೀಡಲಾಗಿದೆ. ಬಳಿಕ ಕೆರೆಮನೆ ಮಹಾಬಲ ಹೆಗಡೆ- ಕೆಲವು ಮುಖ್ಯ ಮಾಹಿತಿಗಳು ಮತ್ತು ಗ್ರಂಥ ಋಣ ಎಂಬ ವಿಚಾರಗಳ ಬಗೆಗೆ ವಿವರಗಳನ್ನು ನೀಡಿರುತ್ತಾರೆ. ಕೃತಿಯ ಹೊರ ಆವರಣದಲ್ಲಿ ಗೌರೀಶ ಕಾಯ್ಕಿಣಿ, ದೇರಾಜೆ ಸೀತಾರಾಮಯ್ಯ, ಪೆರ್ಲ ಕೃಷ್ಣ ಭಟ್ಟ, ನಾರ್ಣಪ್ಪ ಉಪ್ಪೂರ, ಹಿರಿಯಡ್ಕ ಗೋಪಾಲ ರಾವ್, ವೀರಭದ್ರ ನಾಯಕ, ಕೆರೆಮನೆ ಶಂಭು ಹೆಗಡೆ, ಇವರುಗಳ ನಲ್ನುಡಿಗಳನ್ನು ನೀಡಲಾಗಿದೆ.

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments