Thursday, December 5, 2024
Homeಸುದ್ದಿವಿಟ್ಲದ ರಿಕ್ಷಾ ಚಾಲಕ ನಾಪತ್ತೆ - ಉಪ್ಪಿನಂಗಡಿಯಲ್ಲಿ ನಿಂತುಕೊಂಡಿರುವ ಖಾಲಿ ರಿಕ್ಷಾ

ವಿಟ್ಲದ ರಿಕ್ಷಾ ಚಾಲಕ ನಾಪತ್ತೆ – ಉಪ್ಪಿನಂಗಡಿಯಲ್ಲಿ ನಿಂತುಕೊಂಡಿರುವ ಖಾಲಿ ರಿಕ್ಷಾ

ರಿಕ್ಷಾ ಚಾಲಕರೊಬ್ಬರು ವಿಟ್ಲದಿಂದ ಕಾಣೆಯಾಗಿದ್ದಾರೆ. ಆಟೋ ಚಾಲಕನೊಬ್ಬ ಕಾಣೆಯಾದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಣೆಯಾದ ಆಟೋ ಚಾಲಕ ವೀರಕಂಬ ಗ್ರಾಮದ ಬಾಯಿಲ ನಿವಾಸಿ ಪದ್ಮನಾಭ ನಾಯ್ಕ ಅವರ ಪುತ್ರ ಧನರಾಜ್‌( 28) ಎಂಬವರು.

ನವೆಂಬರ್ 28 ರಂದು ಎಂದಿನಂತೆ ತಮ್ಮ ಮನೆಯಾದ ಬಾಯಿಲದಿಂದ ಬೆಳಿಗ್ಗೆ 8.30 ಘಂಟೆಗೆ ತನ್ನ ಅಟೋ ರಿಕ್ಷಾವನ್ನು ತೆಗೆದುಕೊಂಡು ಬಾಡಿಗೆಗೆಂದು ಹೇಳಿ ಹೋದವರು ನಿನ್ನೆ ಡಿಸೆಂಬರ್
3 ರವರೆಗೂ ಮನೆಗೆ ಬಂದಿರುವುದಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.

ಇದರ ವಿಚಾರವಾಗಿ ಎಲ್ಲಾ ಕಡೆ ಅಂದರೆ ನೆರೆಹೊರೆ, ಬಂಧುಗಳು, ಸ್ನೇಹಿತರೇ ಮೊದಲಾದವರಲ್ಲಿ ವಿಚಾರಿಸಿದ್ದಾರೆ. ಆದರೆ ಎಲ್ಲಿಯೂ ಸಿಗದೆ ಕಣ್ಮರೆಯಾಗಿರುತ್ತಾರೆ.

ಧನರಾಜ್ ಅವರ ಮೊಬೈಲ್‌ ನಂಬ್ರ ಸ್ವೀಚ್‌ ಆಫ್‌ ಆಗಿದೆ. ಆದರೆ ಅವರ ರಿಕ್ಷಾ ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದೆ.

ಮನೆಗೂ ಹೋಗದೆ, ಬೇರೆಲ್ಲೂ ಸಿಗದೆ ಕಾಣೆಯಾದ ಧನರಾಜ್‌ನನ್ನು ಹುಡುಕಿ ಕೊಡುವಂತೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments