ಹದಿಹರೆಯದವರ ಕುರುಡು ಪ್ರೀತಿಗೆ ಮತ್ತೊಂದು ಬಲಿಯಾಗಿದೆ. ಯುವಕನೊಬ್ಬ ತಾನು ಪ್ರಿತಿಸುವ ಹುಡುಗಿಯನ್ನೇ ಕೊಂದಿದ್ದಾನೆ. ಘಟನೆ ನಡೆದದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ.
ಹುಡುಗಿಯನ್ನು ಚಾಕುವಿನಿಂದ ಹಲವಾರು ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಆಕೆಯ ಪ್ರಿಯಕರನೇ ತನ್ನ ಗೆಳತಿಯನ್ನು ಈ ರೀತಿಯಲ್ಲಿ ಹತ್ಯೆ ಮಾಡಿದ್ದಾನೆ.
ಬೆಂಗಳೂರಿನಲ್ಲಿ ದಿನೇದಿನೇ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಯುವತಿಯೊಬ್ಬಳನ್ನು ಆಕೆಯ ಪ್ರಿಯಕರನೇ ಚಾಕು ಇರಿದು ದಾರುಣವಾಗಿ ಕೊಲೆ ಮಾಡಿರುವ ಘಟನೆ ಇಂದಿರಾ ನಗರದ ಅಪಾರ್ಟ್‍ಮೆಂಟಿನಲ್ಲಿ ನಡೆದಿದೆ.
ಅಸ್ಸಾಂ ಮೂಲದ ಮಾಯಾ ಗೊಗಾಯ್ ಎಂದು ಕೊಲೆಯಾದ ಯುವತಿಯನ್ನು ಗುರುತಿಸಲಾಗಿದೆ. ಈ ಯುವತಿಯು ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಳು.
ಕೊಲೆಗೆ ಕಾರಣವೇನೆಂದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
ಕೊಲೆ ನಡೆದ ಜಾಗಕ್ಕೆ ಇಂದಿರಾ ನಗರದ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ
- ರಕ್ಷಣಾ ಸಚಿವಾಲಯದ ಅಧಿಕಾರಿಯಾಗಿದ್ದ ಹಾಗೂ ಮೂರು ತಿಂಗಳ ಗರ್ಭಿಣಿಯಾಗಿದ್ದ ಯುವತಿಯ ಅಕಾಲಿಕ ಸಾವು; ಅತ್ತೆ-ಮಾವಂದಿರ ವಿರುದ್ಧ ತನಿಖೆ
- ಗರ್ಭಪಾತದ ನಂತರ 3 ತಿಂಗಳ ಭ್ರೂಣವನ್ನು ಬಾತ್ರೂಮ್ ಕಿಟಕಿಯಿಂದ ಹೊರಗೆ ಎಸೆದ ಯುವತಿ
- ಸಹಪಾಠಿಯೊಬ್ಬನ ಕಿರುಕುಳ ಮತ್ತು ಬ್ಲ್ಯಾಕ್ಮೇಲ್ನಿಂದ ಬೇಸತ್ತು ಯುವತಿ ಆತ್ಮಹತ್ಯೆ
- ಆಫ್ರಿಕಾದ ದೂರದ ಹಳ್ಳಿಯೊಂದರಲ್ಲಿ ರೈತನೊಬ್ಬನಿಗೆ ಮಣ್ಣಿನಲ್ಲಿ ಚಿನ್ನ ಸಿಕ್ಕ ವಿಷಯ ವೈರಲ್, ಚಿನ್ನಕ್ಕಾಗಿ ಭಾರೀ ನೂಕುನುಗ್ಗಲು. ದೂರದೂರದಿಂದ ಜನರ ಆಗಮನ
- ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬದ ಹತ್ಯೆ: ಕೃತ್ಯದ ನಂತರವೂ ಮನೆಯಲ್ಲೇ ಉಳಿದು ‘ಯಾಬಾ’ ಸೇವಿಸಿದ್ದ ಆರೋಪಿಗಳು; ಬೆಚ್ಚಿಬೀಳಿಸುವ ವಿವರಗಳು ಬಹಿರಂಗ

