ನವವಿವಾಹಿತೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವರದಕ್ಷಿಣೆ ಬೇಡಿಕೆಗೆ ರೋಸಿಹೋಗಿ ನವವಿವಾಹಿತೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗುಮ್ಮನಹಳ್ಳಿಯಲ್ಲಿ ಘಟಿಸಿದೆ.
ರೂಪಾ (29) ಆತ್ಮಹತ್ಯೆ ಮಾಡಿಕೊಂಡ ಯುವತಿ. 2 ವರ್ಷಗಳ ಹಿಂದೆ ಸುರೇಶ್ ಎಂಬ ಯುವಕನನ್ನು ಪ್ರೇಮ ವಿವಾಹವಾಗಿದ್ದಳು. ಸುರೇಶ್ ಸಾಸಲು ಪಂಚಾಯಿತಿಯಲ್ಲಿ ಡಾಟಾ ಎಂಟ್ರಿ ಆಪರೇಟಿಂಗ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ರೂಪಾ ಬರೆದಿಟ್ಟ ಡೆತ್ ನೋಟ್ ನಲ್ಲಿ, ನನ್ನ ಸಾವಿಗೆ ಗಂಡ ಸುರೇಶ್, ಮಾವ ನರಸಿಂಹಮೂರ್ತಿ ಅತ್ತೆ ದೇವಮ್ಮ ಕಾರಣ ಎಂದು ಬರೆಯಲಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವ ಪೊಲೀಸರು ಆರೋಪಿ ಸುರೇಶ್‌ನನ್ನು ವಶಕ್ಕೆ ಪಡೆದಿದ್ದಾರೆ.
ಮದುವೆ ಸಮಯದಲ್ಲಿ ರೂಪಾ ಕುಟುಂಬದವರು 100 ಗ್ರಾಂ ಚಿನ್ನದ ಒಡವೆ ನೀಡಿದ್ದರು ಎಂದು ತಿಳಿದುಬಂದಿದೆ. ಸುರೇಶ್ ಮನೆಯವರು ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ.
ಆ ಹಣವನ್ನು ಕೊಡಬೇಕು ಎಂದು ಆಕೆಗೆ ಒತ್ತಡ ಹೇರಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ರೂಪಾ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗುತ್ತಿದೆ.
- ಇಮ್ರಾನ್ ಖಾನ್ ಜೀವಂತವಾಗಿದ್ದಾರೆಯೇ? ಜೈಲಿನಲ್ಲಿಯೇ ಸಾವಿನ ಸಂದೇಹ
- ನೆಟ್ಫ್ಲಿಕ್ಸ್ನ ‘ಲವ್ ಈಸ್ ಬ್ಲೈಂಡ್’ (Love Is Blind) ಈಗ ಬಹು ಜನಪ್ರಿಯ
- 3.7 ಮಿಲಿಯನ್ ಪೌಂಡ್ (47 ಕೋಟಿ ರೂಪಾಯಿ) ಮೌಲ್ಯದ ಫೆರಾರಿ ಕಾರು ಪೊಲೀಸ್ ಕಾರ್ಯಾಚರಣೆಯಲ್ಲಿ ವಶಕ್ಕೆ
- ಉಜಿರೆಯಲ್ಲಿ ಕೆಎಸ್ಆರ್ ಟಿಸಿ ಬಸ್ ಮತ್ತು ಬೈಕ್ ಢಿಕ್ಕಿ – ಯುವಕ ಸಾವು: UJIRE
- ಒಂದೇ ದೋಣಿಯಲ್ಲಿ ಕುಳಿತು ಇಂಗ್ಲಿಷ್ ಕಾಲುವೆಯನ್ನು ದಾಟಿದ 230 ಜನರು!

