ನಾಟಕ ತಂಡವನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಕಣ್ಣೂರಿನ ಕೆಳಕಂ ಎಂಬಲ್ಲಿ ನಡೆದಿದೆ.
ಮೃತರಿಬ್ಬರನ್ನು ಕಾಯಂಕುಲಂನ ಅಂಜಲಿ ಮತ್ತು ಕರುನಾಗಪಲ್ಲಿಯ ಜೆಸ್ಸಿ ಮೋಹನ್ ಎಂದು ಗುರುತಿಸಲಾಗಿದೆ. ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.
ನಿನ್ನೆ ಕಣ್ಣೂರಿನಲ್ಲಿ ನಾಟಕ ತಂಡದ ಕಾರ್ಯಕ್ರಮವಿತ್ತು. ಇಂದು ಬತ್ತೇರಿಯಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ತಂಡವು ಆರಂಭದಲ್ಲಿ ಕೆಳಕಂನಿಂದ ನೆಡುಂಪೋಯಿಲ್ ಪಾಸ್ ಮೂಲಕ ವಯನಾಡ್‌ಗೆ ಪ್ರವೇಶಿಸಲು ಪ್ರಯತ್ನಿಸಿತು. ಆದರೆ, ಪಾಸ್‌ನಲ್ಲಿ ಭೂಕುಸಿತದ ಭೀತಿಯಿಂದಾಗಿ ಸಂಚಾರವನ್ನು ನಿಷೇಧಿಸಲಾಗಿದೆ.
ಶಾರ್ಟ್‌ಕಟ್ ಮೂಲಕ ವಯನಾಡ್‌ಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
- ತಲೆ ತುಂಡಾದ ಸ್ಥಿತಿಯಲ್ಲಿ, ದೇಹದ ಭಾಗಗಳು ರಸ್ತೆಯಲ್ಲಿ: ಡೆಹ್ರಾಡೂನ್ನಲ್ಲಿ 6 ಸ್ನೇಹಿತರ ಪಾರ್ಟಿ ಮಾರಣಾಂತಿಕ ರಸ್ತೆ ಅಪಘಾತದಲ್ಲಿ ಅಂತ್ಯ
- ನಾಟಕ ತಂಡ ಪ್ರಯಾಣಿಸುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ ಇಬ್ಬರು ಮಹಿಳೆಯರು ಸಾವು
- ಸಾವಿನಲ್ಲಿಯೂ ಸಾರ್ಥಕ್ಯ – ಎಲ್ಲಾ ಅಂಗಾಂಗಗಳನ್ನು ದಾನ ನೀಡಿದ ಕಾಲೇಜು ಉಪಾನ್ಯಾಸಕಿ
- ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭ
- ಯಕ್ಷಸಿಂಚನ – ಪ್ರಶಸ್ತಿ ಪ್ರದಾನ, ಯಕ್ಷಗಾನ ಪ್ರದರ್ಶನ