ಯು. ಶ್ರೀಧರ್ ಅವರು ಬರೆದ ‘ಉಡುಪಿ ಪರ್ಯಾಯವೂ, ಮಟ್ಟಿ (ವಾದಿರಾಜ) ಗುಳ್ಳವೂ ಮತ್ತು ಇತರ ಆಯ್ದ ಲೇಖನಗಳು’ ಪುಸ್ತಕ ಎಪ್ರಿಲ್ 21ರಂದು ಲೋಕಾರ್ಪಣೆ ಗೊಂಡಿತು.
ಯಕ್ಷಗಾನ ಕಲಾರಂಗದ ನೂತನ ಕಟ್ಟಡದಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಕೃತಿ ಬಿಡುಗಡೆ ಮಾಡಿ ಯು. ಶ್ರೀಧರರು ಇಳಿ ವಯಸ್ಸಿನಲ್ಲೂ ಮಾಡುತ್ತಿರುವ ಸಾಹಿತ್ಯ ಮತ್ತು ಸಾಮಾಜಿಕ ಕೆಲಸಗಳನ್ನು ಮೆಚ್ಚಿಕೊಂಡರು.
ವರ್ಷದ ಹಿಂದೆ ಗತಿಸಿದ ತಮ್ಮ ಪತ್ನಿ ಸುಗುಣಾಳ ನೆನಪಿಗೆ ಈ ಕೃತಿಯನ್ನು ಸಮರ್ಪಿಸಿದ ಲೇಖಕರು ಮಾರಾಟದಿಂದ ಬಂದ ಹಣವನ್ನು ವಿದ್ಯಾಪೋಷಕ್ ಗೆ ನೀಡುವುದಾಗಿ ಹೇಳಿದರು.
ಇದು ಈ ಲೇಖಕರ ಹತ್ತನೆಯ ಕೃತಿಯಾಗಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಯು. ಹರಿಶ್ಚಂದ್ರ, ರವಿ .ಎಂ ಅಮೀನ್, ನಾರಾಯಣ ಎಂ. ಹೆಗಡೆ, ಡಾ. ವಿರೂಪಾಕ್ಷ ದೇವರುಮನೆ, ಎಚ್. ಎನ್. ವೆಂಕಟೇಶ್ ಉಪಸ್ಥಿತರಿದ್ದರು.
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 27-11-2024ರಿಂದ 12-12-2024ರ ವರೆಗೆ
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ