
ನಮ್ಮ ಬೆಳವಣಿಗೆಗೆ ದೈಹಿಕ ಆರೋಗ್ಯದಷ್ಟೆ ಮಾನಸಿಕ ಆರೋಗ್ಯವೂ ಮುಖ್ಯ ಕಲಾ ಪ್ರಕಾರಗಳು ಮನಸ್ಸಿನ ಆರೋಗ್ಯವನ್ನು ಕಾಪಾಡುವ ಜತೆಯಲ್ಲಿ ಸಂಸ್ಕಾರವನ್ನು ಹೆಚ್ಚಿಸುವಲ್ಲಿ ಸಹಕಾರಿ,
ಮನೆಗಳಲ್ಲಿ ನಡೆಸುವ ಧಾರ್ಮಿಕ ಕಾರ್ಯಗಳೊಂದಿಗೆ ಕಲಾ ಸೇವೆಯನ್ನು ಮಾಡುವುದು ಸಂಘಟಕರ ಹೃದಯ ಶ್ರೀಮಂತಿಕೆಯನ್ನು ಸೂಚಿಸುತ್ತದೆ ಎಂದು ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ಉಪನ್ಯಾಸಕ ಹೆಚ್ ಸುಜಯೀಂದ್ರ ಹಂದೆ ಹೇಳಿದರು.
ಅವರು ಇತ್ತೀಚೆಗೆ ಕೋಟ ಜಯಲಕ್ಷ್ಮಿ ಮತ್ತು ಚಂದ್ರಶೇಖರ ಉರಾಳ ದಂಪತಿಗಳ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಹಮ್ಮಿಕೊಂಡ ಕರ್ಣಾರ್ಜುನ ತಾಳಮದ್ದಳೆ ಮತ್ತು ಪ್ರಸಿದ್ಧ ಚಂಡೆವಾದಕ ಮಂದಾರ್ತಿ ರಾಮಕೃಷ್ಣರ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದಿಸಿ ಮಾತನಾಡಿದರು.
ನಿವೃತ್ತ ಶಿಕ್ಷಕ ಶಿವಾನಂದ ಮಯ್ಯ ಮಹಾಬಲೇಶ್ವರ ಉರಾಳ, ಚಂದ್ರಶೇಖರ ಉರಾಳ ದಂಪತಿಯರು ಉಪಸ್ಥಿತರಿದ್ದರು. ಆನೆಗುಡ್ಡೆ ವಿನಾಯಕ ದೇವಳದ ನಿವೃತ್ತ ಮೆನೆಜರ್ ಆನಂದರಾಮ ಉರಾಳ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು.
ಬಳಿಕ ಯಕ್ಷದೇಗುಲ (ರಿ.), ಬೆಂಗಳೂರು ಇವರ ಸಂಯೋಜನೆಯಲ್ಲಿ ಕೆ.ಜೆ. ಗಣೇಶ್, ಲಂಬೊದರ ಹೆಗಡೆ, ಗಣೇಶ್ ನಾವಡ, ರಾಘವೇಂದ್ರ ಹೆಗಡೆ, ಶಿವಾನಂದ ಕೋಟ, ಸುದೀಪ್ ಉರಾಳ, ಉಜಿರೆ ಅಶೋಕ ಭಟ್, ಸುಜಯೀಂದ್ರ ಹಂದೆ, ಡಾ. ವೈಕುಂಠ ಹೇರ್ಳೆ ಸತೀಶ್ ಮೂಡುಬಗೆ ಅವರನ್ನು ಒಳಗೊಂಡ ತಾಳಮದ್ದಳೆ ಸಂಪನ್ನಗೊಂಡಿತು
ಕೋಟ ಸುದರ್ಶನ ಉರಾಳ
ಮೊ: 9448547237