ಈ ಕೃತಿಯು ಎರಡನೇ ಬಾರಿ ಮುದ್ರಿಸಲ್ಪಟ್ಟಿದೆ. 1974ರಲ್ಲಿ ಮೊದಲ ಬಾರಿ ಪ್ರಕಟವಾಗಿತ್ತು. ಈ ಕೃತಿಯು ಇತ್ತೀಚಿಗೆ ಎಡನೀರು ಶ್ರೀ ಮಠದಲ್ಲಿ ಬಿಡುಗಡೆಯಾಗಿತ್ತು. ಇದರ ಪ್ರಕಾಶಕರು ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿ, ‘ಗೋಕುಲ’, ಲಕ್ಷ್ಮೀನಗರ, ಬಿಜೈ, ಮಂಗಳೂರು.
132 ಪುಟಗಳನ್ನು ಹೊಂದಿದ ಈ ಪುಸ್ತಕದ ಬೆಲೆ ರೂಪಾಯಿ 250. ಮೊದಲ ಮುದ್ರಣದ ಪ್ರಕಾಶಕರು ದೇರಾಜೆ ಸೀತಾರಾಮಯ್ಯ ಸನ್ಮಾನ ಸಮಿತಿ, ಬಾಳಿಲ, ಸುಳ್ಯ, ದ.ಕ. ಪ್ರಥಮ ಮುದ್ರಣದ ಮುಖ್ಯ ವಿಚಾರಗಳನ್ನು ಚಿತ್ರ ಸಹಿತ ಈ ಕೃತಿಯಲ್ಲಿ ನೀಡಿರುತ್ತಾರೆ.
ಈ ಕೃತಿಯಲ್ಲಿ ಡಾ. ಶಿವರಾಮ ಕಾರಂತ, ಭಾಗವತ ಅಜ್ಜನಗದ್ದೆ ಗಣಪಯ್ಯ ಚೊಕ್ಕಾಡಿ, ಕೆ.ಮಹಾಬಲ ಭಂಡಾರಿ, ಪೆರ್ಲ ಕೃಷ್ಣ ಭಟ್, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಗೌರೀಶ ಕಾಯ್ಕಿಣಿ ಗೋಕರ್ಣ, ಯು. ನಾರಾಯಣಯ್ಯ ಕಲ್ಮಡ್ಕ, ವಿದ್ವಾನ್ ಸೊಡಂಕೂರು ತಿರುಮಲೇಶ್ವರ ಭಟ್ಟ, ಕಡತೋಕಾ ಮಂಜುನಾಥ ಭಾಗವತ, ಹರಿದಾಸ ಮಲ್ಪೆ ಶಂಕರನಾರಾಯಣ ಸಾಮಗ, ಸರವು ರಾಮ ಭಟ್ ಪುತ್ತೂರು, ಪಿ.ಎಸ್ ಗೋವಿಂದಯ್ಯನವರ ಲೇಖನಗಳೂ ಇವೆ.
ಡಾ. ಎಂ. ಪ್ರಭಾಕರ ಜೋಶಿಯವರು ಮತ್ತು ಶ್ರೀಕೃಷ್ಣ ಅರ್ತಿಕಜೆಯವರು ದೇರಾಜೆಯವರ ಸಂದರ್ಶನ ನಡೆಸಿದ ವಿವರಗಳೂ ಇವೆ. ದೇರಾಜೆಯವರ ಕೃತಿಗಳ ಬಗೆಗೆ ಬಡೆಕ್ಕಿಲ ಕೃಷ್ಣ ಭಟ್, ‘ಕೈನಭ’ ವಿದ್ವಾನ್, ತಾಳ್ತಜೆ ವಸಂತಕುಮಾರ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರು ಬರೆದ ಲೇಖನಗಳನ್ನು ನೀಡಲಾಗಿದೆ.
ಶ್ರೀ ಕೆ.ಎಸ್ ಶರ್ಮಾ ಕಾಸರಗೋಡು, ಕೈಲಾರು ಈಶ್ವರ ಭಟ್ಟ, ಶಿವರಾಮ ಕಜೆ ಕೆದಿಲ, ಬಿ. ಎಚ್. ಶ್ರೀಧರ, ವೆಂಕಟರಾಜ ಪುಣಿಂಚತ್ತಾಯ, ಗುಂಡ್ಮಿ ಚಂದ್ರಶೇಖರ ಐತಾಳ, ತದ್ದಲಸೆ ವಿಘ್ನೇಶ್ವರ ಶರ್ಮ, ಕುರಿಯ ವಿಠಲ ಶಾಸ್ತ್ರಿ ಇವರುಗಳು ದೇರಾಜೆಯವರ ಬಗ್ಗೆ ಬರೆದ ಲೇಖನಗಳಿವೆ.
ಈ ಪುಸ್ತಕದ ವಿತರಕರು ಜ್ಞಾನಗಂಗಾ ಪ್ರಕಾಶನ, ಪುತ್ತೂರು. ಫೋನ್ ನಂಬರ್ 9480451560 ಮತ್ತು 9663964631. ಈ ಶ್ರೇಷ್ಠ ಕೃತಿಗೆ ಶುಭಾಶಯಗಳು.
ಕೃತಿ ಪರಿಚಯ: ಶ್ರೀ ರವಿಶಂಕರ್ ವಳಕ್ಕುಂಜ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು