Friday, November 22, 2024
Homeಸುದ್ದಿಶ್ರೀ ವಿಶ್ವೇಶತೀರ್ಥ ಪ್ರಶಸ್ತಿಗೆ ಶಿರಸಿಯ ಯಕ್ಷಶಾಲ್ಮಲಾ ಸಂಸ್ಥೆ ಆಯ್ಕೆ

ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಗೆ ಶಿರಸಿಯ ಯಕ್ಷಶಾಲ್ಮಲಾ ಸಂಸ್ಥೆ ಆಯ್ಕೆ

.
ಉಡುಪಿ : ಯಕ್ಷಗಾನ ಹಾಗೂ ತಾಳಮದ್ದಲೆಯ ಪಾರಂಪರಿಕ ಸೊಬಗಿನ ಉಳಿವು ಬೆಳವಣ ಗೆಗಾಗಿ ಕಳೆದ 25 ವರ್ಷಗಳಿಂದ ಶ್ರಮಿಸುತ್ತಿರುವ ಶಿರಸಿಯ ಯಕ್ಷಶಾಲ್ಮಲ ಸಂಸ್ಥೆಯು, ಯಕ್ಷಗಾನ ಕಲಾರಂಗ ಕೊಡಮಾಡುವ ಈ ಬಾರಿಯ ಪ್ರತಿಷ್ಠಿತ ‘ಶ್ರೀವಿಶ್ವೇಶತೀರ್ಥ ಪ್ರಶಸ್ತಿ’ಗೆ ಆಯ್ಕೆಗೊಂಡಿದೆ.

ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಗೌರವಾಧ್ಯಕ್ಷತೆಯಲ್ಲಿ ಮಠದ ಆಶ್ರಯದಲ್ಲಿ ಯಕ್ಷಗಾನದ ಏಳ್ಗೆಗಾಗಿ ನಿರಂತರ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಗೆ ಹೊಸ್ತೋಟ ಮಂಜುನಾಥ ಭಾಗವತ ಮತ್ತು ಪ್ರೊ. ಎಂ. ಎ. ಹೆಗಡೆಯವರ ಮಾರ್ಗದರ್ಶನವು ಪ್ರಾಪ್ತಿಯಾಗಿತ್ತು.

50,000/- ರೂಪಾಯಿ ನಗದು ಪುರಸ್ಕಾರಗಳನ್ನೊಳಗೊಂಡ ಪ್ರಶಸ್ತಿಯನ್ನು ನವೆಂಬರ್ 18, 2023 ಶನಿವಾರದಂದು ಶ್ರೀಕ್ಷೇತ್ರ ಕಟೀಲಿನಲ್ಲಿ ನಡೆಯುವ ಸಮಾರಂಭದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯಸಾನಿಧ್ಯದಲ್ಲಿ ಪ್ರದಾನಮಾಡಲಾಗುವುದೆಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments