Thursday, November 21, 2024
Homeಯಕ್ಷಗಾನಕಾಂತಾವರದಲ್ಲಿ ತಾರನಾಥ ವರ್ಕಾಡಿ ಹಾಗೂ ಸದಾಶಿವ ಕುಲಾಲ್ ರವರಿಗೆ ಯಕ್ಷದೇಗುಲ 2023ರ ಪ್ರಶಸ್ತಿ

ಕಾಂತಾವರದಲ್ಲಿ ತಾರನಾಥ ವರ್ಕಾಡಿ ಹಾಗೂ ಸದಾಶಿವ ಕುಲಾಲ್ ರವರಿಗೆ ಯಕ್ಷದೇಗುಲ 2023ರ ಪ್ರಶಸ್ತಿ


ಕಾಂತಾವರ: ಕಷ್ಟ ಕಾಲದಲ್ಲಿ ಜೀವನಕ್ಕಾಗಿ ಯಕ್ಷಗಾನವನ್ನು ನಂಬಿ ಬದುಕು ಸಾಗಿಸಿದ ಅದೆಷ್ಟೋ ಕಲಾವಿದರು ಈಗಿಲ್ಲ .ಆದರೂ ಅವರು ಉಳಿಸಿದ ಈ ಯಕ್ಷಗಾನ ಇಂದಿಗೂ ಶ್ರೀಮಂತ ವಾಗಿದೆ.

ಪುತ್ತೂರು ಶ್ರೀಧರ ಭಂಡಾರಿ ತಂಬಾ ಕಷ್ಟದಿಂದ ನಮ್ಮೂರಿನ ಸ್ವಂತ ಮೇಳ ಮಾಡಿ ಕೊಂಡು ನಷ್ಟ ಹೊಂದಿದಾಗ ಮತ್ತೆ ಮಾತೃ ಸಂಸ್ಥೆ ಧರ್ಮಸ್ಥಳ ಮೇಳಕ್ಕೆ ಹೋಗು ಅಲ್ಲಿ ನಿನ್ನ ಸ್ಥಾನ ಇನ್ನೂ ಖಾಲಿ ಇದೆ ಎಂದು ಹೇಳಿ ಕಳುಹಿಸಿದವನೇ ನಾನು. ಶ್ರೀಧರ ಭಂಡಾರಿಯಿಂದಾಗಿ ನಮ್ಮ ಕ್ಷೇತ್ರಕ್ಕೂ ತುಂಬಾ ಹೆಸರು ಬರುವಂತಾಯಿತು. ಎಂದು ಕಾಂತಾವರ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳ್ ಹೇಳಿದರು

ಅವರು ಕಳೆದ ಆದಿತ್ಯವಾರದಂದು ಯಕ್ಷದೇಗುಲ ಕಾಂತಾವರದಲ್ಲಿ ಇಪ್ಪತ್ತೊಂದನೇ ವಾರ್ಷಿಕ ಯಕ್ಷೋಲ್ಲಾಸದ ಆಟ ಕೂಟಗಳ ಸಂಧರ್ಭ ವರ್ಕಾಡಿ ತಾರನಾಥ ಬಲ್ಯಾಯರಿಗೆ ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ , ಹಾಗೂ ವೇಣೂರು ಸದಾಶಿವ ಕುಲಾಲ್ ರವರಿಗೆ ಬಾಯಾರು ಪ್ರಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತಾಡಿರು.

ನಮ್ಮ ಕ್ಷೇತ್ರದ ವಾರ್ಷಿಕೋತ್ಸವ ಸಂಧರ್ಭದಲ್ಲಿ ಹಿರಿಯರು
ಮೂರು ದಿನಗಳ ಯಕ್ಷಗಾನ ಮಾಡಿಸಿ ಕಲಾವಿದರನ್ನು ಗೌರವಿಸಿದ ಕ್ಷಣ ಗಳನ್ನು ನೆನಪಿಸಿ ಕೊಟ್ಟರು.


ನಮ್ಮ ಮಕ್ಕಳಿಗೆ ಶಿಕ್ಷಣದಲ್ಲಿ ಸಿಗಬೇಕಾದ ಸಂಸ್ಕಾರ, ಜೀವನ ಮೌಲ್ಯ, ನೀತಿ ಪಾಠ ಭಾಗವತ ರಾಮಾಯಣ ಮತ್ತು ಯಕ್ಷಗಾನ ಮಾಧ್ಯಮದಲ್ಲಿ ಸಿಗುವುದು ನಮ್ಮ ಭಾಗ್ಯ ಎಂದು ನಿಟ್ಟೆ ಕಾಲೇಜಿನ ಪ್ರೊ.ಸುದೀರ್ ಎಂ ಅತಿಥಿಗಳಾಗಿ ತಿಳಿಸಿದರು.


ಧರ್ಮಸ್ಥಳದ ಬಿ. ಭುಜಬಲಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದು
ಕಲೆ ಮತ್ತು ಕಲಾವಿದರನ್ನು ಉಳಿಸುವುದು ಇಂತಹ ಯಕ್ಷಗಾನ ಸಂಘಟನೆ ಎಂದು ಹೇಳಿದರು.


ಗ್ರಾಮೀಣ ಪ್ರದೇಶಗಳಲ್ಲಿ ಯಕ್ಷಗಾನೀಯ ಚಟುವಟಿಕೆಗಳನ್ನು ನಡೆಸುತ್ತಾ ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲು ಕಲಾಬಿಮಾನಿಗಳ ಸಹಕಾರ ಅಗತ್ಯ ಎಂದು
ಮೂಡಬಿದಿರೆಯ ಉದ್ಯಮಿ ಏ.ಕೆ.ರಾವ್ ತಿಳಿಸಿದರು.

ವೇದಿಕೆಯಲ್ಲಿ ನಿವೃತ್ತ ಪ್ರಚಾರ್ಯ ಪ್ರೊ ಶ್ರೀ ವರ್ಮ ಅಜ್ರಿ ಉಪಸ್ಥಿತರಿದ್ದರು.
ಡಾ. ಶೃತಕೀರ್ತಿ ರಾಜ್ ಉಜಿರೆ ಮತ್ತು ಡಾ. ವಾದಿರಾಜ ಕಲ್ಲೂರಾಯ ಸಂಸ್ಮರಣೆ ಹಾಗೂ ಅಭಿನಂದನಾ ಭಾಷಣ ಮಾಡಿದರು.
2023 ಯಕ್ಷೋಲ್ಲಾಸವನ್ನು ಬೆಳಿಗ್ಗೆ ಬಾರಾಡಿ ಬೀಡು ಮಾತೃಶ್ರಿ ಸುಮತಿ ಆರ್ ಬಲ್ಲಾಳ್ ಉದ್ಘಾಟಿಸಿದರು. ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಭಾಗವತ ಶಿವಪ್ರಸಾದ್ ಭಟ್ ವಂದಿಸಿದರು.
ನಂತರ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ರಂಗ ತುಲಾಭಾರ ತಾಳಮದ್ದಳೆ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments