ಕಾಪು ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ಆರಂಭ.
ಯಕ್ಷಶಿಕ್ಷಣ ಟ್ರಸ್ಟ್ ಇವರ ಸಹಯೋಗದಲ್ಲಿ ಯಕ್ಷಗಾನದ ತರಗತಿಯು ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ ಇಂದು (12-7-2023) ಆರಂಭವಾಯಿತು.
ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಮ್. ಗಂಗಾಧರ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮಕ್ಕಳಿಗೆ ಪುರಾಣಜ್ಞಾನ, ಭಾರತೀಯ ಸಂಸ್ಕೃತಿಯ ತಿಳಿವನ್ನು ಹೆಚ್ಚಿಸಿಕೊಳ್ಳಲು ಯಕ್ಷಗಾನ ಸಹಕಾರಿಯಾಗಿದೆ ಎಂದು ಅವರು ನುಡಿದರು.
ಕಲಾರಂಗದ ಉಪಾಧ್ಯಕ್ಷರಾದ ವಿ. ಜಿ. ಶೆಟ್ಟರು ಶುಭ ಹಾರೈಸಿದರು. ಯಕ್ಷಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿಯಾದ ಮುರಲಿ ಕಡೆಕಾರ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಯಕ್ಷಶಿಕ್ಷಣ ಸಹಕಾರಿ ಎಂಬುದನ್ನು ಅರಿತ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರ ವಿಶೇಷ ಆಸಕ್ತಿಯಿಂದಾಗಿ ಈ ಬಾರಿ ಕಾಪು ವಿಧಾನಸಭಾ ವ್ಯಾಪ್ತಿಯ 15 ಪ್ರೌಢಶಾಲೆಗಳಲ್ಲಿ ಯಕ್ಷಗಾನ ತರಗತಿ ಆರಂಭಿಸಲಾಗಿದೆ ಎಂದರು.
ಪ್ರೌಢಶಾಲಾ ಮುಖ್ಯಶಿಕ್ಷಕರಾದ ಅನುರಾಧಾ ಪಿ. ಎಸ್. ಇವರು ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಾದ ಅಶೋಕ ಕೆ. ಇವರು ಕೃತಜ್ಞತೆ ಸಮರ್ಪಿಸಿದರು.
ಸಂಸ್ಕೃತ ಭಾಷಾ ಶಿಕ್ಷಕರಾದ ಡಾ. ರಾಘವೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನದ ಗುರುಗಳಾದ ನಿತಿನ್ ಪಡುಬಿದ್ರಿ ಇವರು ಗಣಪತಿ ಸ್ತುತಿಯೊಂದಿಗೆ ಯಕ್ಷಗಾನ ತರಬೇತಿಯನ್ನು ಆರಂಭಿಸಿದರು
