Friday, November 22, 2024
Homeಯಕ್ಷಗಾನಸಿರಿಬಾಗಿಲಿನಲ್ಲಿ ಸಾಹಿತ್ಯ- ಸಾಂಸ್ಕೃತಿಕ ಉತ್ಸವದ ಸಿರಿ

ಸಿರಿಬಾಗಿಲಿನಲ್ಲಿ ಸಾಹಿತ್ಯ- ಸಾಂಸ್ಕೃತಿಕ ಉತ್ಸವದ ಸಿರಿ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ನೇತೃತ್ವದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ಜೂನ್ 3 ಶನಿವಾರ ಹಾಗು 4 ಆದಿತ್ಯವಾರ ‘ಗಡಿನಾಡ ಕಲಾ ಸಾಂಸ್ಕೃತಿಕ ವೈಭವ’ ನಡೆಯಲಿದೆ.

ಬೆಳಗ್ಗೆ 10 ರಿಂದ ಸಂಜಯ ವರೇಗೆ ನಡೆಯುವ ಈ ಕಾರ್ಯಕ್ರಮವನ್ನು ಶನಿವಾರ ಬೆಳಿಗ್ಗೆ 10 ಗಂಟೆಗೆ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು, ಶ್ರೀ ಶಂಕರಾಚಾರ್ಯ ಸಂಸ್ಥಾನಂ,ಶ್ರೀ ಮದ್ ಎಡನೀರು ಮಠ ಇವರು ದೀಪ ಬೆಳಗಿಸಿ ಉಧ್ಘಾಟಿಸಲಿರುವರು.

ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು ಮಠ ಇವರು ಆಶೀರ್ವಚನ ನೀಡಲಿದ್ದಾರೆ. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶ್ರೀ ಪ್ರಕಾಶ್ ಮತ್ತೀಹಳ್ಳಿ ಯವರು ಅಧ್ಯಕ್ಷತೆ ವಹಿಸಲಿದ್ದಾರೆ.. 

11 ಗಂಟೆಗೆ ಪುತ್ತಿಗೆ ರಾಮಕೃಷ್ಣ ಜೋಯಿಸ ವಿರಚಿತ ಶ್ರೀ ರಾಮ ನಿಜಪಟ್ಟಾಭಿಷೇಕ ಪ್ರಸಂಗದ ಅಗ್ನಿ ಪರೀಕ್ಷೆಯ ಭಾಗ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ತಾಳಮದ್ದಳೆ ರೂಪದಲ್ಲಿ ಪ್ರಸ್ತುತಿಗೊಳ್ಳಲಿದೆ. ಹಿಮ್ಮೇಳದಲ್ಲಿ ಪುತ್ತಿಗೆ ರಘರಾಮ ಹೊಳ್ಳ, ಮುರಾರಿ ಕಡಂಬಳಿತ್ತಾಯ, ವರುಣ್ ಹೆಬ್ಬಾರ್, ಅರ್ಥಧಾರಿಗಳಾಗಿ ವೇದಮೂರ್ತಿ ವಿ ಬಿ ಹಿರಣ್ಯ, ಹರೀಶ್ ಬಳಂತಿಮೊಗರು, ಸುಬ್ರಾಯ ಹೊಳ್ಳ, ಶ್ರುತಕೀರ್ತಿರಾಜ್, ವಿಷ್ಣು ಪ್ರಕಾಶ್ ಪೆರ್ವ, ಬಾಲಕೃಷ್ಣ ಆಚಾರ್ಯ ಭಾಗವಹಿಸಲಿದ್ದಾರೆ. 

ಮಧ್ಯಾಹ್ನ 2-30ರಿಂದ ಗಮಕ ವಾಚನ ಶ್ರೀಹರಿ ಭಟ್ ಹಾಗು ಕೊಚ್ಚಿ ಗೋಪಾಲಕೃಷ್ಣ ಭಟ್ ಅವರಿಂದ, 4 ರಿಂದ ಕಲಾರತ್ನ ಶಂ.ನಾ. ಅಡಿಗ ಕುಂಬ್ಳೆ ಇವರಿಂದ ಹರಿಕಥೆ, ತದನಂತರ ನೃತ್ಯೋಪಾಸನಾ ಕಲಾಕೇಂದ್ರ(ರಿ.) ಪುತ್ತೂರು ಪ್ರಸ್ತುತ ಪಡಿಸುವ “ನೃತ್ಯೋಹಂ” ನಡೆಯಲಿದೆ. ಶ್ರೀಮತಿ ಶಾಲಿನಿ ಆತ್ಮಭೂಷಣ ಪುತ್ತೂರು ಇವರ ಶಿಷ್ಯರಿಂದ. 

4 ನೇ ತಾರೀಕು ಆದಿತ್ಯವಾರ ಬೆಳಗ್ಗೆ ಗಡಿನಾಡ ಕವಿ ರಾಧಾಕೃಷ್ಣ ಕೆ, ಉಳಿಯತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ, ಕವನ ಗೋಷ್ಠಿ, ಅವಲೋಕನ ನಡೆಯಲಿದೆ. ಈ ಗೋಷ್ಠಿಯನ್ನು ಶ್ರೀಮತಿ ಸೀತಾಲಕ್ಷ್ಮಿ ವರ್ಮ, ವಿಟ್ಲ ಇವರು ಉಧ್ಘಾಟಿಸಲಿದ್ದಾರೆ, ಗಡಿನಾಡ ಸಾಹಿತ್ಯಘಟಕದ ಅಧ್ಯಕ್ಷರಾದ ಯಸ್.ವಿ.ಭಟ್, ಹಿರಿಯ ಪತ್ರೀಕೋದ್ಯಮಿ ಮಲಾರು ಜಯರಾಮ ರೈ, ಶಿವರಾಮ ಕಾಸರಗೋಡು ಇವರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ. 

ಕು| ಶ್ರದ್ಧಾ ಹೊಳ್ಳ ಮುಳಿಯಾರು ಅವರ “”ಮಾತು- ಮೌನ- ಕೃತಿ”” ಅವಲೋಕನ ಕು| ಸುಜಾತಾ ಮಾಣಿಮೂಲೆ, ಸಂಶೋಧಕಿ ಇವರಿಂದ ನಡೆಯಲಿದೆ.

ಕವನ ವಾಚನ– ಗಾಯನ, ಗಡಿನಾಡಿನಲ್ಲಿ ಕಲೆ- ಸಾಹಿತ್ಯ ಕ್ಕೆ ನೀಡಿದ ಕೀರ್ತಿಶೇಷ ರ ಕೊಡುಗೆಗಳು- ಗಡಿನಾಡ ಸಮಸ್ಯೆಗಳು ವಿಚಾರ ಗೋಷ್ಠಿ ನಡೆಯಲಿದೆ.

5 ಗಂಟೆಗೆ ಸಮಾರೋಪ – ಪ್ರಶಸ್ತಿ ಪ್ರಧಾನ ನಡೆಯಲಿದೆ. 7 ರಿಂದ ವಿಧ್ವಾನ್ ಡಿ.ವಿ.ಹೊಳ್ಳ ವಿರಚಿತ ಗಡಿನಾಡು ಕಾಸರಗೋಡಿನ ಪವಿತ್ರ ಮಧೂರು ಕ್ಷೇತ್ರದ ಕುರಿತಾದ ಚಾರಿತ್ರಿಕ ಕಥೆ, ʼಮಧುಪುರ ಮಹಾತ್ಮೆʼ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಧ್ಯಕ್ಷರು ಮತ್ತು ಸದಸ್ಯರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇವರು ಸರ್ವರಿಗೂ ಸ್ವಾಗತವನ್ನು ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments